ನಾಲ್ಕೂವರೆ ಅಡಿ ಜಮೀರ್, ನಿಮ್ಮ ಧರ್ಮಕ್ಕೂ ಭಾರತಕ್ಕೂ ಯಾವ ಸಂಬಂಧ ಎಂದ ಪ್ರತಾಪ್ ಸಿಂಹ!
ಬಿಜೆಪಿಯಲ್ಲಿ ಒಂದು ಬಣ ರಾಜ್ಯದ ವಿಧಾನಸಭೆ ಚುನಾವಣೆಯ ನಂತರ ಗರಂ ಆಗಿದೆ. ರಾಜ್ಯ ಬಿಜೆಪಿ ನಾಯಕ ಬಿ.ವೈ ವಿಜಯೇಂದ್ರ ಬಣ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಣ ಎನ್ನುವಂತಾಗಿದ್ದು. ಇದೀಗ ಬೆಳಗಾವಿಯಲ್ಲಿ ವಕ್ಫ್ ಭೂ ಕಬಳಿಕೆ ವಿರೋಧಿಸಿ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಅದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದೇ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರು ಸಚಿವ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಈ ಹೋರಾಟ ರಾಜಕೀಯ ಹೋರಾಟ ಅಲ್ಲಾ. ಬಸನಗೌಡ ಪಾಟೀಲ್ ಅವರನ್ನು ಲೀಡರ್ ಮಾಡಲು ಹೊರಟ್ಟಿಲ್ಲ ಎಂದೂ ಪ್ರತಾಪ್ ಸಿಂಹ ಹೇಳಿದ್ದಾರೆ.

ಕರ್ನಾಟಕದಲ್ಲಿ ಅತ್ಯಂತ ಪವರ್ ಫುಲ್ ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆಗಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ರಮೇಶ್ ಜಾರಕಿಹೊಳಿ ಅವರನ್ನು ಲೀಡರ್ ಮಾಡಬೇಕಿಲ್ಲ. ಅವರು ಈಗಾಗಲೇ ಲೀಡರ್ ಆಗಿದ್ದಾರೆ. ಜನರ ಭೂಮಿ ಉಳಿಸಲು ಈ ಹೋರಾಟ ಶುರು ಮಾಡಿದ್ದೇವೆ. ಇವರ ವಿರುದ್ಧ ಹೇಳಿಕೆ ಕೊಡ್ತಿರುವವರಿಗೆ ಎನೂ ಹೇಳಬೇಕು. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಅನ್ನೋರಿಗೆ ನಾವು ಉತ್ತರ ಕೊಡಬೇಕು ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.
ನಮ್ಮ ಹೋರಾಟದ ಬಗ್ಗೆ ಮಾತನಾಡುವವರ ವಿರುದ್ಧ ನೀವು ಪ್ರತಿಭಟನೆ ಮಾಡಬೇಕು, ನಿಮ್ಮ ಪರ ಯತ್ನಾಳ್ ಧ್ವನಿ ಎತ್ತಿದ್ದಾರೆ ಎಂದು ಅವರು ಜನರನ್ನು ಉದ್ದೇಶಿಸಿ ಹೇಳಿದ್ದಾರೆ. ಉಚ್ಚಾಟನೆ ಮಾಡ್ತೇವಿ ಅಂದವರ ವಿರುದ್ಧ ಹೋರಾಟ ಮಾಡುವಂತೆ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.

ಅಲ್ಲದೇ ಯತ್ನಾಳ್ ಅವರ ಹೋರಾಟಕ್ಕೆ ಬೆಂಗಾವಲಾಗಿ ನಿಂತಿದ್ದು ಪ್ರಹ್ಲಾದ್ ಜೋಶಿ, ಸೋಮಣ್ಣ ಅವರು. 2013-18 ರ ವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಎಸ್‌ಡಿಪಿಐ, ಪಿಎಫ್ಐ ವಿರುದ್ಧ ದೂರು ದಾಖಲಾಗಿದ್ದನ್ನು. 2015ರಲ್ಲಿ ಇವರ ಮೇಲಿನ ಕ್ರಿಮಿನಲ್ ಪ್ರಕರಣ ವಾಪಾಸ್ ತೆಗೆದುಕೊಂಡರು ಎಂದು ಅವರು ಆರೋಪಿಸಿದರು.
ಹಿಂದೂಗಳ ಮಾರಣಹೋಮಕ್ಕೆ ಕಾರಣವಾದರು. ಆಗಿಂದ ಟಿಪ್ಪು ಜಯಂತಿ ಶುರು ಮಾಡಲಾಗಿತ್ತು. 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವೋಟ್ ಹಾಕಿದರೆ ತಾಲಿಬಾನ್ ಸರ್ಕಾರ ರಚನೆ ಆಗುತ್ತೆ ಅಂತ ಹೇಳಿದ್ವಿ. ಈಗ ಒಂದೂವರೆ ವರ್ಷದ ಅವಧಿಯಲ್ಲಿ ತಾಲಿಬಾನ್ ಸರ್ಕಾರದಂತೆ ನಡೆದುಕೊಳ್ತಿದೆ. ನಿಮ್ಮ ಭೂಮಿ ಕಬಳಿಕೆ ಶುರುವಾಗಿದೆ ಎಂದು ಹೇಳಿದ್ದಾರೆ.
ಜಮೀರ್ ಬಗ್ಗೆ ಕಿಡಿ ಕಾರಿದ ಪ್ರತಾಪ್ ಸಿಂಹ
ಇನ್ನು ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಗ ಅವರು ಸಚಿವ ಜಮೀರ್ ಅಹಮದ್ ಖಾನ್ ಅವರ ಬಗ್ಗೆಯೂ ಕಿಡಿಕಾರಿದ್ದಾರೆ. ಜಮೀರ್ ಅಹ್ಮದ್ ನಾಲ್ಕೂವರೆ ಅಡಿ ಇದ್ದಾನೆ. ಅಲ್ಲಾನ ಆಸ್ತಿ ಅಂತಾ ಜಮೀರ್ ಅಹ್ಮದ್ ಹೇಳುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಜಮೀರ್ ಅಹ್ಮದ್ ನಿಮ್ಮ ಅಲ್ಲಾವಿಗೂ ಹಾಗೂ ಭಾರತಕ್ಕೆ ಎನೂ ಸಂಬಂಧ ಇದೆ. ಅರಬ್‌ನಲ್ಲಿ ಹುಟ್ಟಿರುವ ಅಲ್ಲಾಗೆ ಎನೂ ಸಂಬಂಧ. ನಿಮ್ಮ ಧರ್ಮಕ್ಕೂ ಭಾರತಕ್ಕೂ ಯಾವ ಸಂಬಂಧವಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಭಾರತದಲ್ಲಿ ಇರುವುದು ರಾಮ, ಕೃಷ್ಣ, ಚನ್ನಮ್ಮ ಉಳಿಸಿದ ಭೂಮಿ, ಶಿವಾಜಿ ಮಹಾರಾಜರು ಉಳಿಸಿದ ಭೂಮಿ.
ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರಿಗೆ ಬುದ್ಧಿ ಕಲಿಸಬೇಕು. ವಕ್ಫ್ ಕಾಯ್ದೆ ಬರ್ಕಾಸ್ತು (ವಜಾ) ಮಾಡಲು ನಾವಿಂದು ಹೋರಾಟಕ್ಕೆ ಬಂದಿದ್ದೇವೆ. ಮುಸ್ಲಿಮರ ಅಜ್ಜ ಹಾಗೂ ತಾತ ಎಲ್ಲಿಂದ ಬಂದಿದ್ದಾರೆ. ಅರಬ್, ಮೆಕ್ಕಾದಲ್ಲಿರುವವರು ಬಿಟ್ಟು ಹೋದ ಭೂಮಿನಾ ಇದು. ಎಲ್ಲಿಂದ ನಿಮಗೆ ಭೂಮಿ ಸಿಕ್ಕಿದೆ ಹೇಳಿ, ನಿಮ್ಮ ಧರ್ಮಕ್ಕೆ ದಾಖಲೆ ಇಲ್ಲ. ಮುಸ್ಲಿಮರು ಮೂವತ್ತು ಪರ್ಸಂಟ್ ಆದರೆ, ಮುಂದೆ ಒಕ್ಕಲಿಗ ಹಾಗೂ ಲಿಂಗಾಯತ ಎಂದರೆ ಕಷ್ಟ ಆಗಲಿದೆ ಎಂದಿದ್ದಾರೆ.
ಅಲ್ಲದೇ ಮುಂದುವರಿದು ನೀವು ಲಿಂಗಾಯತ, ಮರಾಠ, ಕುರುಬ ಆಗಬೇಡಿ ಹಿಂದೂ ಆಗಿ. ಮುಸ್ಲಿಂ ಸಮುದಾಯವರಿಗೆ ತೊಂದರೆ ಎದುರಾದರೆ 56 ದೇಶಗಳು ಇವೆ. ಹಿಂದೂಗಳಿಗೆ ಅನ್ಯಾಯ ಎದುರಾದರೆ, ನಮಗೆ ಇರೋದು ಭಾರತ ಒಂದೇ ದೇಶ. ಇಂದು ಜಾತಿ ಬಿಟ್ಟು ಹಿಂದೂಗಳು ಒಂದಾಗಿ ಅಂತಾ ಹೇಳಲು ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications