ಕೇಂದ್ರ ಸೇವೆಗೆ ಹೊರಟು ನಿಂತ ಪ್ರಣಬ್ ಮೊಹಾಂತಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 22 : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರು ಕೇಂದ್ರ ಸೇವೆಗೆ ತೆರಳಲಿದ್ದಾರೆ. ಕರ್ನಾಟಕ ಸರ್ಕಾರ ಲೋಕಾಯುಕ್ತ ಐಜಿಪಿ ಹುದ್ದೆಯಿಂದ ಅವರನ್ನು ಬಿಡುಗಡೆಗೊಳಿಸಿದೆ.

ಕೇಂದ್ರ ಸರ್ಕಾರ ಆಧಾರ್ ಉಪ ಮಹಾನಿರ್ದೇಶಕ ಹುದ್ದೆಗೆ ಪ್ರಣಬ್ ಮೊಹಾಂತಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊಹಾಂತಿ ಅವರು 2ನೇ ಆರೋಪಿಯಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.[ಗಣಪತಿ ಆತ್ಮಹತ್ಯೆ : ಮೊಹಾಂತಿ ಹೇಳಿದ್ದೇನು?]

Pranab Mohanty

ಗಣಪತಿ ಅವರ ಪ್ರಕರಣದಲ್ಲಿ ಮೊಹಾಂತಿ ಅವರು ಆರೋಪಿಯಾಗಿದ್ದರೂ ಹೊಸ ಹುದ್ದೆಯಲ್ಲಿ ಕೆಲಸ ಮಾಡಲು ಅಡ್ಡಿಯಾಗುವುದಿಲ್ಲ. ಪ್ರಕರಣದಲ್ಲಿ ಮೊಹಾಂತಿ ಅವರ ವಿರುದ್ಧ ಅಮಾನತು ಅಥವ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಅವರು ಕೇಂದ್ರ ಸೇವೆಗೆ ತೆರಳಬಹುದು ಎಂದು ತಿಳಿದುಬಂದಿದೆ.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

2015ರಲ್ಲಿ ಕೇಂದ್ರ ಸರ್ಕಾರ ಆಧಾರ್ ಉಪ ಮಹಾನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. 2016ರ ಫೆಬ್ರವರಿಯಲ್ಲಿ ಪ್ರಣಬ್ ಮೊಹಾಂತಿ ಅವರು ಅರ್ಜಿ ಸಲ್ಲಿಸಿದ್ದರು. ಜುಲೈ 7ರಂದು ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ 8ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೊಹಾಂತಿ ಅವರನ್ನು ನೇಮಕ ಮಾಡಲು ಒಪ್ಪಿಗೆ ಸಿಕ್ಕಿತ್ತು.[ಗಣಪತಿ ಆತ್ಮಹತ್ಯೆ : Timeline]

ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಣಬ್ ಮೊಹಾಂತಿ ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆ ಮಾಡಲು ಒಪ್ಪಿಗೆ ಕೊಟ್ಟಿದ್ದರು. ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲು ಮಡಿಕೇರಿ ಕೋರ್ಟ್ ನೀಡಿರುವ ಆದೇಶ ರದ್ದುಗೊಳಿಸಬೇಕು ಎಂದು ಮೊಹಾಂತಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ಇನ್ನೂ ನಡೆಯಬೇಕಾಗಿದೆ.[ಕೇಂದ್ರ ಸೇವೆಗೆ ಸೋನಿಯಾ ನಾರಂಗ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IPS officer Pranab Mohanty is being sent on central deputation and posted as Deputy director-general of Aadhaar. Pranab Mohanty accused no 2 in the DySP MK Ganapathi suicide case.
Please Wait while comments are loading...