ನಮ್ಮ ರಾಮ ಸಿದ್ದರಾಮಯ್ಯ ಎಂದ ಕೈ ನಾಯಕ: ಜೋಶಿ ಹೇಳಿದ್ದೇನು?
ವಿಜಯಪುರ, ಜನವರಿ 02: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ ಹೇಳಿಕೆಗೆ ಆಂಜನೇಯಗೆ ಸದ್ಭುದ್ದಿ ಬರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ರಾಜ್ಯದ ಬಿಜೆಪಿ ಸಿಎಂಗೂ ಕರೆದಿಲ್ಲ. ನಾನು ಭಾರತ ಸರ್ಕಾರ ಮಂತ್ರಿ ನನ್ನನ್ನು ಕರೆದಿಲ್ಲ, ನನಗೆ ಕರೆಯೋದಲ್ಲ ಬರಬೇಡಿ ಅಂತಾ ಹೇಳಿದ್ದಾರೆ. ಅಲ್ಲಿ ಜಾಗ ಇಲ್ಲ, ಅಲ್ಲಿನ ವ್ಯವಸ್ಥೆ ಸೀಮಿತವಾಗಿದೆ. ಯಾರನ್ನ ಕರೆಯಬೇಕು, ಕರೆಯಬಾರದು ಅನ್ನೋದು ಶ್ರೀ ರಾಮ ಮಂದಿರ ಕಮಿಟಿಯ ಸ್ವತಂತ್ರ ನಿರ್ಧಾರವಾಗಿರುತ್ತದೆ ಎಂದು ಈ ಮೂಲಕ ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲ ಎಂಬ ಮಾಜಿ ಸಚಿವ ಆಂಜನೇಯ ಆರೋಪಕ್ಕೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಕನ್ಫ್ಯೂಸ್ ಆಗಿದೆ. ರಾಮಮಂದಿರ ಆಗಬೇಕು ಅನ್ನೋದು ಇರಲಿಲ್ಲ, ಆಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ಇಚ್ಛೆನೂ ಅವರಿಗೆ ಇರಲಿಲ್ಲ ಹಾಗಾಗಿ ಒಂದು ರೀತಿಯ ಆತಂಕ ಹೊಟ್ಟೆ ಕಿಚ್ಚು ಆರಂಭವಾಗಿದೆ. ಅದರ ಪರಿಣಾಮ ಮೊದನೆದ್ದು ಉದ್ಘಾಟನೆಗೆ ಹೋಗಬೇಕೋ ಹೋಗಬಾರದೋ ಅನ್ನೋದು ಕನ್ಫ್ಯೂಷನ್ ನಾ ಹೋಗೋದಿಲ್ಲ ಅಂತ ಕೆಲವರು ಸ್ಟೇಟ್ ಮೆಂಟ್ ಕೊಡುತ್ತಾರೆ. ರಾಮ ಅನ್ನೋದು ಕಾಲ್ಪನಿಕ ಮತ್ತು ಇದರ ಬಗ್ಗೆ ನಿರ್ಣಯ ಮಾಡಬಾರದು ಅಂತ ಹೇಳಿದರು
ಪ್ರಧಾನಮಂತ್ರಿಗಳು ಉದ್ಘಾಟನೆಗೆ ಯಾಕೆ ಹೋಗುತ್ತಿದ್ದಾರೆ ಅಂತ ಕೇಳುತ್ತಾರೆ. ಇದು ಯಾವುದು ಜನ ಸ್ವೀಕಾರ ಮಾಡಲಿಲ್ಲ ಅಂದ ಮೇಲೆ, 35 ವರ್ಷಗಳ ಕೇಸ್ ತೆಗೆದು ಜನರನ್ನ ಬಂದಿಸುವ ಅತ್ಯಂತ ನೀಚ ಕೆಲಸ ಕಾಂಗ್ರೆಸ್ ಪಾರ್ಟಿ ಕೈ ಹಾಕಿದೆ. ಅದರಲ್ಲಿ ಒಬ್ಬರು ಪೂಜಾರಿ ಮತ್ತು ಒಬ್ಬರು ಕುಲಕರ್ಣಿ ಅವರನ್ನ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕುಲಕರ್ಣಿ ಅವರಿಗೆ 72 ವರ್ಷ ಆಗಿದೆ, ರಾಮ ಮಂದಿರ ಆಗಿದ್ದಕ್ಕೆ ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು ಆಗುತ್ತಿದೆ.

ರಾಜಕೀಯವಾಗಿ, ಸಾಮಾಜಿಕವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡೇ ಮಾಡುತ್ತೇವೆ. ಪಿಎಫ್ ಐ ಮತ್ತು ಡಿಜೆ ಹಳ್ಳಿ ಕೆಜೆ ಮತ್ತು ಹಳೆ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ ಮೇಲೆ ವ್ಯವಸ್ಥಿತ ಲವಾಗಿ ಸಂಚು ನಡೆಸಿ ಹಲ್ಲೆ ಮಾಡಿದರು. ಪೋಲಿಸ್ ಆಫೀಸರ್ ನು ಸತ್ತೋಗುತ್ತಿದ್ದರು ಅಂತ ಚಾರ್ಜ್ ಶೀಟ್ ನಲ್ಲಿತ್ತು. ಅಂತವರನ್ನ ಬಿಡುಗಡೆಗೆ ಕಾಂಗ್ರೆಸ್ ಪಕ್ಷದವರು ಪತ್ರ ಬರೀತಿರಿ. ಈಗ 35 ವರ್ಷದ ಹಿಂದಿನ ಕೇಸ್ ಅದರಲ್ಲಿ ಒಬ್ಬರು ಹೋರಾಟದಲ್ಲಿ ಇರಲಿಲ್ಲ, ಯಾವ ಆಧಾರದಲ್ಲಿ ಬಂಧಿಸುತ್ತೀರಿ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಎನ್ ಮಾಡುತ್ತಿದ್ದೀರಿ. ನೀವೇನು ಮೊಗಲ್ ಸರ್ಕಾರ ನಡೆಸಬೇಕು ಅಂತ ಮಾಡಿದ್ದಾರೆ, ಇಸ್ಲಾಮಿಕ್ ಐಎಸ್ ಎಸ್ ಸಂಸ್ಥೆ ರೀತಿ ಸರ್ಕಾರ ನಡೆಸಬೇಕು ಅಂತ ಅಂದುಕೊಂಡಿದ್ದೀರಾ ? ನೀವು ಐಎಸ್ ಎಸ್ ಅಂತ ಅಂದುಕೊಂಡಿದ್ದೀರಾ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರೀತಿ ಆಧಾರಕ್ಕೆ ನೀವು ಈ ಕೆಲಸ ಮಾಡುತ್ತಿದ್ದೀರಾ? ಈ ಮೂಲಕ ಇದಕ್ಕೆ ಪರೋಕ್ಷವಾಗಿ ಇಂದಿರಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಖುಷಿ ಪಡಿಸುವ ತಂತ್ರ ಇದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಮುಸಲ್ಮಾನರ ಪರವಾಗಿ ಮಾಡಲಿಕ್ಕೆ ರಾಮ ಮಂದಿರ ಕಾರಣದಿಂದ ಹಿಂದೂ ಕನ್ಸೋಲ್ಡೆನಂಟ್ ಆಗಬಹುದು ಅನ್ನೋ ಕಾರಣದಿಂದ ಮುಸಲ್ಮಾನರ ಪರವಾಗಿ ತುಷ್ಠಿಕರಣಕ್ಕಾಗಿ ಈ ಕೆಲಸ ಮಾಡಿದ್ದಾರೆ. ಐಎಸ್ ಐಎಸ್ ಸರ್ಕಾರ ಅಂತ ಅವರು ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications