Prajwal Revanna: ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ರದ್ದು? ಹೈಕೋರ್ಟ್‌ಗೆ ಕೇಳಿಕೊಂಡಿದ್ದೇನು?

ಮಹಿಳೆ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೊಳೆನರಸೀಪುರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದು ಮಾಡುವಂತೆ ಪ್ರಜ್ವಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಹಿಳೆಯರ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಅರೆಸ್ಟ್‌ ಆಗಿದ್ದರಿಂದ ಜೆಡಿಎಸ್‌ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್‌ ರಾಸಲೀಲೆ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ಸಂಚಲನ ಸೃಷ್ಟಿಸಿದ್ದವು. ಇದರಲ್ಲಿ ಪ್ರಜ್ವಲ್‌ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ವಿಡಿಯೋಗಳಿದ್ದವು. ಬಳಿಕ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ತನಿಖೆ ನಡೆಸಿದ್ದರು.

prajwal-revanna-seeks-high-court-relief-against-life-imprisonment

ವಿಚಾರಣಾ ನ್ಯಾಯಾಲಯವು ಪ್ರಜ್ವಲ್‌ ಮೇಲೆ ದಾಖಲಾಗಿದ್ದ ಒಂದು ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಮನೆಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ದೋಷಿ ಎಂದು ತೀರ್ಪು ನೀಡಿತ್ತು. ಹಾಗಾಗಿ ಜೀವಾವಧಿ ಶಿಕ್ಷೆಯಲ್ಲಿರುವ ಪ್ರಜ್ವಲ್‌ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೋರ್ಟ್‌ಗೆ ಕೇಳಿಕೊಂಡಿದ್ದೇನು?

ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿ ಬಳಸಿಕೊಂಡು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಜ್ವಲ್​ ರೇವಣ್ಣ ಆರೋಪಿಸಿದ್ದಾರೆ. ನನ್ನ ಮೇಲೆ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಪ್ರಜ್ವಲ್‌ ಕೋರಿದ್ದಾರೆ. ರಾಜಕೀಯ ಷಡ್ಯಂತ್ರದಿಂದ ಕೇಸ್‌ ಹಾಕಿದ್ದಾರೆ. 2022ರಲ್ಲಿ ಕೆಲಸ ಬಿಟ್ಟಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಆದರೆ, 2023 ರಲ್ಲಿ ನಡೆದ ತೋಟದ ಮನೆಯ ಗೃಹಪ್ರವೇಶದಲ್ಲಿ ಅವರೂ ಭಾಗಿಯಾಗಿದ್ದಾರೆ. ನಿಜವಾಗಿ ಅತ್ಯಾಚಾರ ಆಗಿದ್ರೆ ಅವರು ಹೇಗೆ ಗೃಹಪ್ರವೇಶಕ್ಕೆ ಬರುತ್ತಿದ್ದರು? ಎಂದು ಪ್ರಜ್ವಲ್‌ ಪ್ರಶ್ನಿಸಿದ್ದಾರೆ.

ಆ ಮಹಿಳೆ ಮೂರು ವರ್ಷಗಳ ನಂತರ ದೂರು ನೀಡಿರುವುದು ಅನುಮಾನಾಸ್ಪದ. ಸ್ಟೋರ್ ರೂಂನಲ್ಲಿ ಸಿಕ್ಕ ಬಟ್ಟೆ ಮತ್ತು ಕೂದಲಿದ್ದ ಬ್ಯಾಗ್ ಮಹಿಳೆ ಗುರುತಿಸಿಲ್ಲ. ಬ್ಯಾಟರಿ, ಪೇಂಟ್ ಇದ್ದ ರೂಮ್‌ನಲ್ಲಿ ಮಹಿಳೆಯ ಉಡುಪು ಸಿಕ್ಕಿದೆ ಎಂದಿದ್ದಾರೆ. ಲಾಕ್ ಆಗಿದ್ದ ರೂಂನಲ್ಲಿ ವೀರ್ಯಾಣು ಬಟ್ಟೆ ಹೇಗೆ ಸಿಗುತ್ತೆ ಎಂದು ಅರ್ಜಿಯಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಸವನಗುಡಿ ಮನೆಯಲ್ಲಿ ಅತ್ಯಾಚಾರವಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಸಹೋದರಿ, ಮತ್ತೊಂದು ಮನೆ ಕೆಲಸದ ಮಹಿಳೆ ಮತ್ತು ಅರ್ಜಿದಾರರ ತಾಯಿ ಸ್ಥಳದಲ್ಲಿದ್ದರೂ, ಅವರಿಗೆ ವಿಚಾರ ತಿಳಿಸಿಲ್ಲ. ತೋಟದ ಮನೆ ಮತ್ತು ಬಸವನಗುಡಿ ಮನೆಯಲ್ಲಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ. ಆದರೆ ಸಂತ್ರಸ್ತೆ ಯಾರಿಗೂ ಈ ವಿಚಾರ ತಿಳಿಸಲೇ ಇಲ್ಲ. ಹಾಗಾಗಿ ಇದೊಂದು ಪೂರ್ವಾಗ್ರಹ ಪೀಡಿತ ಕೇಸ್‌ ಆಗಿದ್ದು, ದಾರಿತಪ್ಪಿಸುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+