ʼಎಚ್‌ಡಿ ಕುಮಾರಸ್ವಾಮಿ ಮಗಳ ವಯಸ್ಸಿನವಳನ್ನು ಮದುವೆಯಾಗಿ ಕೈ ಬಿಟ್ಟಿದ್ದಾರೆʼ

ತುಮಕೂರು, ಮೇ 09: ರಾಜ್ಯಾದ್ಯಂತ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಾಕಷ್ಟು ಸದ್ದು ಮಾಡುತ್ತಿದ್ದು, ಎಚ್‌ಡಿ ಕುಮಾರಸ್ವಾಮಿ ತನ್ನ ಮಗಳ ವಯಸ್ಸಿನವಳನ್ನು ಮದುವೆಯಾಗಿದ್ದಾರೆ. ಮದುವೆಯಾಗಿ ಮಗು ಆದ ಮೇಲೆ ಅವರನ್ನು ಕೈ ಬಿಟ್ಟರು. ಇವರು ನಡೆದ ದಾರಿಯಲ್ಲೇ ಅವರ ಮಕ್ಕಳು ನಡೆಯೋದು‌ ಎಂದು ಗುಬ್ಬಿ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಶಾಸಕ ಗುಬ್ಬಿ ಶ್ರೀನಿವಾಸ್‌ ಮಾತನಾಡಿ, ಎಚ್‌ಡಿ ಕುಮಾರಸ್ವಾಮಿ ಯಾವ ಒಳ್ಳೆಯ ವ್ಯಕ್ತಿ. ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಪಾತ್ರ ಇದೆ ಸುಳ್ಳು ಅಪಾದನೆ ಮಾಡುತ್ತಿದ್ದಾರೆ.

Prajwal Revanna Case Gubbi Mla Sr Srinivas Slams Hd Kumaraswamy

ಜನತಾದಳ ಮೇಲೆ ಬಂದಿರುವ ಅಪಾದನೆ ಪಾರಾಗಲು ಈ ರೀತಿ ಡ್ರಾಮ ಸೃಷ್ಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಯಾವ ಆ್ಯಂಗಲ್ ನಲ್ಲಿ ಹಂಚಿಕೆ ಮಾಡಿದ್ದಾರೆ ಅಂತಾ ಹೇಳ್ತಾರೆ ಎಂದು ಕಿಡಿಕಾರಿದರು.

ದೇವರಾಜೇಗೌಡರು ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿರನ್ನ, ದೇವೇಗೌಡರನ್ನ ಅಮಿತ್ ಷಾ ಗೆ ಎಲ್ಲರಿಗೂ ಕಳಿಸಿರುವುದಾಗಿ ಅವರೇ ಹೇಳಿದ್ದಾರೆ. ಅದೇ ಮನುಷ್ಯ ಈಗ ಡಿಕೆ ಶಿವಕುಮಾರ್ ಹೆಸರು ಹೇಳ್ತಿದ್ದಾರೆ.ಕೇಸ್ ನ ಡೈವೋರ್ಟ್ ಮಾಡೋಕೆ ಇವರು ಮಾಡುತ್ತಿರುವ ನಾಟಕ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಸೃಷ್ಟಿ ಮಾಡಿರುವ ಬಯಲು ನಾಟಕ. ಕುಮಾರಸ್ವಾಮಿಗೆ ಏನಾದರೂ ಮಾನ ಮರ್ಯಾದೆ ಇದ್ದರೇ ಅವರ ಮಗ ಮಾಡಿರುವ ಕೃತ್ಯ ಖಂಡಿಸಿ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಒಂದು ಬಾರಿ ಹೇಳ್ತಾರೆ ಅವರು ಕುಟುಂಬಕ್ಕೆ ನಮಗೂ ಸಂಬಂಧ ಇಲ್ಲ ಅಂತಾ. ರೇವಣ್ಣ ಅವರಪ್ಪನಿಗೆ ಜನಿಸಿಲ್ವಾ, ರೇವಣ್ಣ ಅವರಣ್ಣ ಅಲ್ವಾ..? ರೇವಣ್ಣನಿಗೂ ನಮಗೂ ಸಂಬಂಧ ಇಲ್ಲಾ, ನಾನು ನಮ್ಮ ಅಪ್ಪ ಅಷ್ಟೇ, ಒಳ್ಳೆಯದಾದ್ರೆ ರೇವಣ್ಣ ಇರಲಿ ಎನ್ನುತ್ತಾರೆ ಎಂದು ಕಿಡಿಕಾರಿದರು.

ಬೇರೆ ಟೈಮ್ ನಲ್ಲಿ ಹಾಸನ ಅಂದ್ರೆ ರೇವಣ್ಣ, ರೇವಣ್ಣ ಅಂದ್ರೆ ಹಾಸನ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದರು. ಅಪಾದನೆ ಬಂದ ತಕ್ಷಣಕ್ಕೆ ರೇವಣ್ಣ ಈ ಕುಟುಂಬದಿಂದ ಆಚೆ ಹೋಗಿಬಿಟ್ಟರಾ ಎಂತೆಂತಾ ಡ್ರಾಮ ಸೃಷ್ಟಿ ಮಾಡ್ತಾರೆ. ರಾಜ್ಯದ ಜನರು ಅಷ್ಟೊಂದು ಮೂರ್ಖರಾ ತಿಳುವಳಿಕೆ ಇರಲ್ವಾ ಎಂದು ಪ್ರಶ್ನಿಸಿದ ಅವರು, ಯಾರು ವೀಡಿಯೋ ರಿಲೀಸ್ ಮಾಡಿದ್ದಾರೆ ಅವರನ್ನ ಬಂಧಿಸಲು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧ ಬಾಯಿಗೆ ಬಂದಾಗೆ ಮಾತಾಡಿದ್ದಾರೆ. ಇವರ ಮೇಲೆ ಬಂದ ಅಪಾದನೆ ತಪ್ಪಿಸಿಕೊಳ್ಳಲು ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿಕೆ ಶಿವಕುಮಾರ್ ರನ್ನ ಎಳೆದು ತಂದಿದ್ದಾರೆ.

ನಮ್ಮ ಅಸ್ತಿತ್ವ ಎಲ್ಲಿ ಹೊರಟು ಹೋಗಿಬಿಡುತ್ತೋ. ನಮ್ಮ ಜನಾಂಗ ಎಲ್ಲಿ ಕೈ ಬಿಟ್ಟುಬಿಡುತ್ತೋ ಅಂತಾ ಭಾವನೆ ಇಟ್ಟುಕೊಂಡು ಅದೇ ಜನಾಂಗದ ಇನ್ನೊಬ್ಬ ಮುಖಂಡರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ.
ನಮ್ಮ ಜನಾಂಗದಲ್ಲಿ ಯಾರು ಪ್ರಬಲರಾಗಿ ಬೆಳೆಯುತ್ತಾರೋ ಅವರ ಮೇಲೆ ಅಪಾದನೆ ಮಾಡುವುದು, ಮುಗಿಸುವ ಕೆಲಸ ತುಳಿಯುವ ಕೆಲಸ ಮಾಡ್ತಾ ಬಂದಿದ್ದಾರೆ. ಇದು ದೇವರ ಕೊಟ್ಟ ಶಿಕ್ಷೆ.

ನಮ್ಮ ಸಮಾಜದಲ್ಲಿ ಯಾರು ತಲೆ ಎತ್ತಬಾರದೆಂದು ಎಲ್ಲಾ ಮುಖಂಡರನ್ನ ತುಳಿಯುತ್ತಾ ಬಂದಿದ್ದಾರೆ. ಇವರ ಪಾಪದ ಕೊಡ ತುಂಬಿದೆ, ಪ್ರಜ್ವಲ್ ಪ್ರಕರಣ ಮುಖಾಂತರ ಇವರ ಅಂತ್ಯ ಆಗಲಿಕೆ ನಾಂದಿಯಾಡಿದೆ
ಕುಮಾರಸ್ವಾಮಿ ಇನ್ನಾದರೂ ಈ ಆಟ ನಾಟಕಗಳನ್ನು ಬಿಟ್ಟು ಸರಿಯಾಗಿ ನಡೆದುಕೊಳ್ಳಲಿ. ಕುಮಾರಸ್ವಾಮಿ ಯಾವ ಒಳ್ಳೆಯ ವ್ಯಕ್ತಿ, ಇವನ‌ ಮಗಳ ವಯಸ್ಸಿನವಳನ್ನ ಮದುವೆಯಾಗಿದ್ದಾರೆ, ಮದುವೆಯಾಗಿ ಮಗು ಆದ ಮೇಲೆ ಅವರನ್ನ ಕೈ ಬಿಟ್ಟರು. ಇವರು ನಡೆದ ದಾರಿಯಲ್ಲೇ ಮಕ್ಕಳು ನಡೆಯೋದು‌.ಇವರೇನು ಸಮಾಜಕ್ಕೆ ಮಾರ್ಗದರ್ಶನ ಕೊಡುತ್ತಾರೆ ಎಂದು ಕಿಡಿಕಾರಿದರು.
ಈ ಘಟನೆ ಆಗಿರೊದನ್ನ ಎಲ್ಲರೂ ಖಂಡಿಸಬೇಕು.

ನೀಚ ಕೆಲಸ ಮಾಡಿ ಅದನ್ನ ಬೇರೆ ರೆಕಾರ್ಡ್ ಮಾಡಿಕೊಂಡಿದ್ದಾನೆ ಪುಣ್ಯಾತ್ಮ ಎಂತಾ ಸ್ಯಾಡಿಷ್ಟ್ ಇರಬಹುದು ಆ ಮನುಷ್ಯ. ಅವನ ಬಗ್ಗೆ ಇನ್ನೂ ಸಾಪ್ಟ್ ಕಾರ್ನರ್ ಹೋಗ್ತಾರೆಂದ್ರೆ ಇವರಿಗೆ ಇನ್ನೂ ಎಷ್ಟು ನೀಚ ಬುದ್ದಿ ವ್ಯಕ್ತಿತ್ವ ಅಂತಾ ಜನರು ನಿರ್ಧಾರ ಮಾಡಬೇಕಾಗುತ್ತದೆ ಎಂದು ತುಮಕೂರಿನಲ್ಲಿ ಶಾಸಕ ಎಸ್. ಆರ್ ಶ್ರೀನಿವಾಸ್ ಅವರು ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+