Prajwal Revanna Case: ತನಿಖಾಧಿಕಾರಿಗಳಿಗೆ ಸಿಎಂ & ರಾಷ್ಟ್ರೀಯ ಪದಕ?: ಜಿ.ಪರಮೇಶ್ವರ ಹರ್ಷ
ಬೆಂಗಳೂರು, ಆಗಸ್ಟ್ 03: ಅಶ್ಲೀಲ ವಿಡಿಯೋ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲು, ಸೂಕ್ತ ತನಿಖೆಗೆ ಕಾರಣರಾದ ತನಿಖಾಧಿಕಾರ ಕಾರ್ಯ ಮೆಚ್ಚಿರುವ ಗೃಹ ಸಚಿವರ ಡಾ.ಜಿ.ಪರಮೇಶ್ವರ ಅವರ ಗುಡ್ ನ್ಯೂಸ್ ನೀಡಿದ್ದಾರೆ.
ಗೃಹ ಸಚಿವರ ಜಿ.ಪರಮೇಶ್ವರ ಅವರು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದ್ದು, ಬಿಜೆಪಿ ಹಾಗೂ ಇತರ ಸಮುದಾಯಗಳ ಪ್ರತಿಭಟನೆ, ಒಳಮೀಸಲಾತಿ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

ಪಜ್ವಲ್ ರೇವಣ್ಣ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ. ಬಿ.ಕೆ ಸಿಂಗ್ ಟೀಂ ಒಳ್ಳೆ ಕೆಲಸ ಮಾಡಿದೆ. ಕರ್ನಾಟಕದ ಮಟ್ಟಿಗೆ ಇದೊಂದು ನಿಜಕ್ಕೂ ಇದು ಐತಿಹಾಸಿಕ ತೀರ್ಪು
ಪೊಲೀಸ್ ಇಲಾಖೆಗೆ ಒಂದು ಕೀರ್ತಿ ಬಂದಂತಾಗಿದೆ ಎಂದು ಅವರು ಹಾಡಿ ಹೊಗಳಿದರು. ಸಾಮಾನ್ಯವಾಗಿ ಇಂತಹ ಪ್ರಕರಣಗಳು ವಿಚಾರಣೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತದೆ. ಅಂಥದರಲ್ಲಿ ಆದರೆ ಒಂದು ವರ್ಷ ನಾಲ್ಕು ತಿಂಗಳಲ್ಲಿ ತೀರ್ಪು ಬಂದಿದ್ದಕ್ಕೆ ಎಸ್ ಐಟಿ ತಂಡವನ್ನ ಅಭಿನಂದಿಸುತ್ತೇನೆ ಎಂದರು.
ಇಂಥ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಪದಕ ನೀಡಲು ಶಿಫಾರಸು ಮಾಡಲಾಗುವುದು. ರಾಷ್ಟ್ರೀಯ ಪದಕಕ್ಕೂ ಶಿಫಾರಸು ಮಾಡಲಾಗುವುದು ಎಂದು ಅವರು ಹೇಳಿದರು. ಈ ಮೂಲಕ ತನಿಖಾಧಿಕಾರಿಗಳ ಬೆನ್ನ ತಟ್ಟುವ ಕೆಲಸ ಮಾಡಿದ್ದಾರೆ. ಶೀಫಾರಸು ಮನ್ನಿಸಿದರೆ ಪೊಲೀಸ್ ಅಧಿಕಾರಿಗಳಾದ ಬಿಕೆ ಸಿಎಂಗ್, ಸುಮನ್ ಡಿ.ಪೆನ್ನೆಕರ್, ಎನ್.ಶೋಭಾ ಸೇರಿದಂತೆ ಎಸ್‌ಐಟಿ ತಂಡ ಸದಸ್ಯರು ಪದಕಕ್ಕೆ ಭಾಜನರಾಗಲಿದ್ದಾರೆ.
ಎಸ್‌ಸಿ ಒಳ ಮೀಸಲಾತಿ ಜಾರಿಗೆ ಬದ್ಧ
ರಾಜ್ಯ ಸರ್ಕಾರ ಎಸ್‌ಸಿ ಒಳಮೀಸಲಾತಿ ವರದಿ ಜಾರಿಗೆ ಬದ್ಧ ಅಂತ ಚಿತ್ರದುರ್ಗದಲ್ಲಿ ಘೋಷಣೆ ಮಾಡಲಾಗಿತ್ತು, ನಮ್ಮ ಪ್ರಣಾಳಿಕೆಯಲ್ಕಲೂ ಭರವಸೆ ಇದೆ. ಒಳಮೀಸಲಾತಿ ಏಕಾಏಕಿ ಜಾರಿ ಮಾಡಿದರೆ ಕಾನೂನು ಪ್ರಕಾರ ನಿಲ್ಲುವುದಿಲ್ಲ. ಎಂಪೆರಿಕಲ್ ಡೇಟಾ ತೆಗೆದುಕೊಂಡು ಜಾರಿ ಮಾಡುತ್ತೇವೆ. ಸದಾಶಿವ ಆಯೋಗದ ವರದಿಯಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಬಿಜೆಪಿ ತಿರಸ್ಕರಿಸಿತ್ತು. ಹೀಗಾಗಿ ನಾವು ಕಾನೂನು ಚೌಕಟ್ಟಿನಲಿ ನಾಗಮೋಹನದಾಸ್ ಆಯೋಗ ರಚಿಸಿದ್ದೆವು. ಯಾರಿಗೆ ಅನ್ಯಾಯ ಆಗದಂತೆ ಜಾರಿ ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.
ಸೋಮವಾರ ವರದಿ ಸಲ್ಲಿಕೆ..
ಒಳಮೀಸಲಾತಿ ವರದಿ ಸೋಮವಾರ ಸಲ್ಲಿಕೆ ಆಗಲಿದೆ. ಅದರ ಜಾರಿಯ ಜವಾಬ್ದಾರಿ ನಮ್ಮದು. ಸಣ್ಣಪುಟ್ಟ ಗೊಂದಲ ಇದ್ದಲ್ಲಿ ಸರ್ಕಾರ ಚರ್ಚಿಸಿ ಜಾರಿ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ 96% ಆಗಿದೆ, ಪಟ್ಟಣ ಭಾಗದಲ್ಲಿ ಸರ್ವೇ ಕಡಿಮೆ ಆಗಿದೆ ಅನ್ನುವ ವಿಚಾರ ಚರ್ಚೆಯಾಗುತ್ತಿದೆ. ವರದಿ ಸಲ್ಲಿಕೆ ಬಳಿಕ ಎಲ್ಲವು ತಿಳಿಯಲಿದೆ. ನಾವು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.
ನಿಗಮ ಮಂಡಳಿಗಳಿಗೆ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರಿಗೆ ಬರಲಿದ್ದಾರೆ. ಅವರ ಹಂತದಲ್ಲಿ ಚರ್ಚೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ನಾನು ಪಟ್ಟಿ ಕೊಟ್ಟು ಬಹಳ ದಿನಗಳೇ ಆಗಿವೆ. ಕಾಂಗ್ರೆಸ್ ಸಣ್ಣ ಪಕ್ಷವಲ್ಲ. ಅದರ ಆಧಾರದಲ್ಲಿ ನೋಡಿದರೆ ಆಕಾಂಕ್ಷಿಗಳ ಬಹಳಷ್ಟು ಜನ ಇರುತ್ತಾರೆ. ಇನ್ನೂ ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣದ ತನಿಖೆ ಬಗ್ಗೆ ಮಾತನಾಡಿದ ಅವರು, ನಿಮಗೆಷ್ಟು ಗೊತ್ತೋ ನಮಗೂ ಅಷ್ಟೇ ಗೊತ್ತು. ತನಿಖೆ ವೇಳೆ ಸರ್ಕಾರ ಮಧ್ಯಪ್ರವೇಶ ಮಾಡಲ್ಲ ಎಂದರು.
ಬಿಜೆಪಿ ಆಗಸ್ಟ್ 05 ರಂದು ಪ್ರತಿಭಟನೆ: ಸಚಿವರು ಹೇಳಿದ್ದೇನು?
ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಅವರಿಗೂ ಪ್ರತಿಭಟನೆ ಹಕ್ಕಿದೆ. ನಾವು ಅಂಕಿ ಅಂಶಗಳನ್ನಿಟ್ಟು ಆರೋಪ ಮಾಡಿದ್ದೆವು. ಲೋಕಸಭೆ ವೇಳೆ ರಾಜ್ಯ ಸರ್ಕಾರವೇ ಅಧಿಕಾರಿಗಳ ನೇಮಿಸಿತ್ತು ಎಂಬ ಬಿಜೆಪಿ ಆರೋಪ ಮಾಡಿದೆ. ಅದನ್ನು ಚುನಾವಣಾ ಆಯೋಗ ಹೇಳಲಿ. ನಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಉತ್ತರ ಬಯಸುತ್ತೇವೆ.
ಪರಮೋತ್ಸವ ಬೇಡ: ಪರಂ
ನಾನು ನನ್ನ ಜನ್ಮದಿನದಂದು ಊರಿನಲ್ಲೇ ಇರುವುದಿಲ್ಲ. ದಯಮಾಡಿ ಯಾರೂ ಮನೆಯ ಬಳಿ ಬರೋದೇ ಬೇಡ. ನಾನು ಹುಟ್ಟಿದ ಹಬ್ಬದ ಮೂಲಕ ರಾಜಕೀಯ ಮಾಡಿಕೊಂಡು ಬಂದಿಲ್ಲ. ಅಭಿಮಾನಿಗಳು ಬರ್ತಾರೆ ವಿಷ್ ಮಾಡ್ತಾರೆ, ಒಳ್ಳೇದಾಗಲಿ ಅಂತಾರೆ ಅಷ್ಟೇ. ಕೆಲವರು ಮೈಸೂರಲ್ಲಿ ಪರಮೋತ್ಸವ ಮಾಡುವುದಾಗಿ ಹೇಳಿದ್ದಾರೆ. ನಾನು ಬೇಡ ಎಂದಿದ್ದೇನೆ ಎಂದು ಹೇಳಿದರು.












Click it and Unblock the Notifications