ಕಿಡ್ನ್ಯಾಪ್ ಕೇಸ್: ಜಡ್ಜ್ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್.ಡಿ.ರೇವಣ್ಣ; ಮುಂದೆ ಆಗಿದ್ದೇನು?
ಬೆಂಗಳೂರು, ಮೇ 06: ಲೋಕಸಭಾ ಚುನಾವಣಾ ಹೊತ್ತಲಿ ಹಾಸನ ಕ್ಷೇತ್ರದ ಪೆನ್ ಡ್ರೈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ನಾಲ್ಕು ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಜಡ್ಜ್ ಮುಂದೆ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುತ್ತಿದ್ದದ್ದು ಕಂಡುಬಂದಿದೆ. ಯಾವುದೇ ಶುಭ ಕಾರ್ಯವಿದ್ದರೂ ಸಹ ರೇವಣ್ಣ ಅವರ ಕೈಯಲ್ಲಿ ನಿಂಬೆ ಹಣ್ಣು ಇದ್ದೇ ಇರುತ್ತೇ. ರೇವಣ್ಣ ಅವರು ಕೈಯಲ್ಲಿ ಸದಾ ನಿಂಬೆ ಹಣ್ಣು ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದ ವಿಷಯವೇ. ಕೈ ಯಲ್ಲಿ ನಿಂಬೆ ಹಣ್ಣು ಯಾಕೆ ಸರ್ ಎಂದು ಹಲವರು ಹಾಸ್ಯ ಮಾಡಿದರೂ ಅದನ್ನ ನಗುತ್ತಲೇ ರೇವಣ್ಣ ಅವರು ಸ್ವೀಕರಿಸುತ್ತಿದ್ದರು, ಇದೀಗ ನ್ಯಾಯಧೀಶರ ಮುಂದೆ ಹಾಜರಾದಗಾ ರೇವಣ್ಣ ಅವರ ಕೈಯಲ್ಲಿ ನಿಂಬೆ ಹಣ್ಣು ಇರುವುದು ಕಂಡು ಬಂದಿದೆ.

ಹಾಸನ ಹಾಲಿ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧಪಟ್ಟಂತೆ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ರೇವಣ್ಣ ಅವರನ್ನು ಭಾನುವಾರ ಸಂಜೆ ನ್ಯಾಯಾಧೀಶರ ಮುಂದೆ ಎಸ್‌ಐಟಿ ಹಾಜರುಪಡಿಸಿತ್ತು. ಈ ವೇಳೆಯೂ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುತ್ತಿದ್ದದ್ದು ಕಂಡುಬಂದಿದ್ದು, ಸದ್ಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಸಂಕಷ್ಟ ಬಂದಾಗ ಹೋಮ-ಹವನ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳ ಮೊರೆ ಹೋಗುವ ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಓಡಾಡುತ್ತಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ಬಂಧನವಾದ ನಂತರ ಅವರಿಗೆ ಜ್ಯೋತಿಷ್ಯ, ನಿಂಬೆಹಣ್ಣು ಕೂಡ ಕೈಹಿಡಿಯಲಿಲ್ಲ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.
ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಎಚ್‌ಡಿ ರೇವಣ್ಣ
ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಗಳು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನ ಬಂಧಿಸಿದ್ದಾರೆ. ನ್ಯಾಯಾಧೀಶರ ಎದುರು ಕಣ್ಣೀರಿಟ್ಟ ರೇವಣ್ಣ ಅವರಿಗೆ ಎಸ್‌ಐಟಿ ಅಧಿಕಾರಿಗಳು ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.












Click it and Unblock the Notifications