ಜೈಲಿನಿಂದ ಬಿಡುಗಡೆಯಾಗಿ 3 ದಿನ ಕಳೆದ್ರೂ ಪತ್ನಿ ಭವಾನಿ ಭೇಟಿಯಾಗದ ರೇವಣ್ಣ
ಹಾಸನ, ಮೇ 16: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಮಹಿಳೆ ಕಿಡ್ಯ್ಯಾಪ್ ಪ್ರಕರಣದಿಂದ ಆರು ದಿನದಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾಗಿ ಮೂರು ದಿನ ಕಳೆದರು ಸಹ ಪತ್ನಿ ಭವಾನಿ ರೇವಣ್ಣ ಅವರನ್ನ ಭೇಟಿ ಮಾಡಿಲ್ಲ.
ಹೌದು, ಜೈಲಿನಿಂದ ಹೊರಬಂದ ಬಳಿಕ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಮಾಜಿಪ್ರಧಾನಿ ಹಾಗೂ ತಂದೆ ಹೆಚ್ಡಿ ದೇವೇಗೌಡರ ನಿವಾಸದಲ್ಲೇ ಉಳಿದಿರುವ ಹೆಚ್.ಡಿ.ರೇವಣ್ಣ ಇದುವರೆಗೂ ಪತ್ನಿ ಭವಾನಿ ಅವರನ್ನು ಭೇಟಿ ಮಾಡಿಲ್ಲ.

ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಪ್ರಕರಣದಿಂದಾಗಿ, ಭವಾನಿಗೂ ಸಂಕಷ್ಟ ಎದುರಾಗಿತ್ತು. ಲೈಂಗಿಕ ಕಿರುಕುಳ, ಕಿಡ್ನ್ಯಾಪ್ ಎರಡೂ ಕೇಸ್ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖವಾಗಿದೆ. ಭವಾನಿ ಕರೆದ್ರು ಅಂತಾ ಹೇಳಿಯೇ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿರುವ ಆರೋಪವಿದೆ. ತನಿಖೆ ವೇಳೆ ಭವಾನಿ ವಿರುದ್ಧ ಸಾಕ್ಷಿ ಸಿಕ್ಕರೆ ಅವ್ರಿಗೂ ಸಂಕಷ್ಟ ತಪ್ಪಿದ್ದಲ್ಲ. ಕಿಡ್ನಾಪ್ ಕೇಸ್‌ನಲ್ಲಿ ರೇವಣ್ಣ ಜೈಲಿಗೆ ಹೋಗಲು ಭವಾನಿ ರೇವಣ್ಣ ಅವರೇ ಪರೋಕ್ಷ ಕಾರಣ ಎಂಬ ಬಗ್ಗೆ ಅನುಮಾನವು ಸಹ ಇದೆ. ಮಗ ಜೈಲಿಗೆ ಹೋಗಲು ಸೊಸೆ ಕಾರಣ ಎಂದು ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲೇ ಪತ್ನಿ ಭವಾನಿ ಏಕಾಂಗಿಯಾಗಿದ್ದು, ಹೊಳೆನರಸೀಪುರದ ಮನೆಗೆ ಬಂದು ಹೋಗುತ್ತಾರೆ. ಈಗಾಗಲೇ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡು ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ಮಾವ ದೇವೇಗೌಡರು ಹಾಗೂ ಅತ್ತೆ ಚೆನ್ನಮ್ಮರನ್ನೂ ಭವಾನಿ ಭೇಟಿ ಮಾಡಿದ್ದಾರೆ. ಇತ್ತ ಪತಿ ಬಿಡುಗಡೆಯಾಗಿ ಮೂರು ದಿನ ಕಳೆದರೂ ಸಹ ಭವಾನಿ ರೇವಣ್ಣ ಅವರು ಭೇಟಿಗೆ ಮುಂದಾಗಿಲ್ಲ ಎಂದು ಹೇಳಲಾಗಿದೆ.












Click it and Unblock the Notifications