Pradeep Eshwar: ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ: ಶಾಸಕ ಪ್ರದೀಪ್ ಈಶ್ವರ್, ಎಚ್‌ಡಿಕೆಗೆ ಟಾಂಗ್‌!

Pradeep Eshwar: ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ ಅಂತ ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ. ಈ ವಿಚಾರವಾಗಿ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಭಾರೀ ವೈರಲ್ ಆಗುತ್ತಿದೆ.

ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ ಅಂತ ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದ್ದು, ಈ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಚಿಂತಾಮಣಿಯ ದಲಿತ ಬಾಂಧವರಿಗೆ ನಮಸ್ಕಾರ, ಉಯ್ಯಲವಾಡಿ ದೇವಸ್ಥಾನಕ್ಕೆ ದಲಿತರಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿಷೇಧ ಹೇರಲಾಗಿತ್ತು. ನಾನು ಬರೆದ ಪತ್ರಕ್ಕೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರು ಸ್ಪಂದಿಸಿದ್ದಾರೆ. ಅವರಿಬ್ಬರಿಗೂ ನನ್ನ ಧನ್ಯವಾದಗಳು.

Pradeep Eshwar Talking About Me Is Easy Coming to My Place Is Difficult MLA Hits Back at Kumaraswamy

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದ್ದೇನೆ. ಚಿಂತಾಮಣಿಯ ಯಾವುದೇ ಪ್ರಭಾವಿ ರಾಜಕಾರಣಿಯ ಒತ್ತಡದಿಂದಲ್ಲ. ಕಂಬಾಲಹಳ್ಳಿಯಲ್ಲಿ 7 ಮಂದಿ ದಲಿತರನ್ನು ಸಜೀವವಾಗಿ ದಹನ ಮಾಡಲು ಪ್ರತ್ಯಕ್ಷವಾಗಿಯೋ ಹಾಗೂ ಪರೋಕ್ಷವಾಗಿಯೋ ಕಾರಣವಾಗಿದ್ದ ಕುಟುಂಬದ ಕುಡಿಯ ಹೆದರಿಕೆಗೆ ನಾನು ಜಗ್ಗುವ ವ್ಯಕ್ತಿಯಲ್ಲ. ಆ ಪ್ರಭಾವಿ ರಾಜಕಾರಣಿಗೆ ಹೇಳುತ್ತಿದ್ದೇನೆ- ನಾನೊಬ್ಬ Self made Man. ನಿಮ್ಮ ವಿಕೃಥ ಮನಸ್ಸಿನ ರಾಜಕಾರಣಕ್ಕೆ ಹೆದರುವ ವ್ಯಕ್ಕಿ ನಾನಲ್ಲ. ನಿಮ್ಮೊಂದಿಗೆ ಹೇಗೆ ಫೈಟ್ ಮಾಡಬೇಕೆಂದು ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. Let's Fight ಎಂದೂ ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿಕೊಂಡಿದ್ದಾರೆ.

Pradeep Eshwar: ನೆಟ್ಟಿಗರು ಹೇಳಿದ್ದೇನು

ಇನ್ನು ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಊರು ಈಗ ತಣ್ಣಗಿದೆ ದಯವಿಟ್ಟು ಈ ವಿಷಯಗಳನ್ನು ಮತ್ತೆ ಪ್ರಸ್ತಾಪಿಸಬೇಡಿ ಅಂತಲೂ ಕೆಲವರು ಮನವಿ ಮಾಡಿದ್ದಾರೆ.

ಶಾಸಕರ ಸ್ಥಾನಕ್ಕೆ ಮರ್ಯಾದೆ ಇದೆ. ಅದಕ್ಕೆ ತಕ್ಕಂತೆ ಮಾತನಾಡುತ್ತಾರೆ. ನಾವು ನಿಮ್ಮನ್ನು ವೈಯಕ್ತಿಕವಾಗಿ ಗೌರವಿಸುತ್ತಿಲ್ಲ. ಕೇವಲ ಆ ಸ್ಥಾನಕ್ಕಾಗಿ. ಸ್ವಲ್ಪ ಕೃತಜ್ಞತೆಯನ್ನು ಹೊಂದಿರಿ. ಸಾರ್ವಜನಿಕವಾಗಿ ಯಾರೊಂದಿಗೂ ನಿಮ್ಮ ನಕಾರಾತ್ಮಕತೆಯನ್ನು ತೋರಿಸಬೇಡಿ. ಸಮಾಜದ ಶಾಂತಿ ಕದಡಬೇಡಿ, ಸಿಎಂ ನಿರ್ದೇಶ ಶುದ್ಧ ಸುಳ್ಳು ಮೇಷ್ಟ್ರು ಅಂತೀರ, ನಿಮ್ಗೆ ಹೇಳ್ಕೊಡಬೇಕಾ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಎಚ್‌.ಡಿ ಕುಮಾರಸ್ವಾಮಿ ಬಗ್ಗೆಯೂ ಟ್ವೀಟ್

ಇನ್ನು ಶಾಸಕ ಪ್ರದೀಪ್ ಈಶ್ವರ್ ಅವರು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಡಿ.ಕೆ. ಶಿವಕುಮಾರ್‌ ಅವರ ಕುಟುಂಬದ ಸದಸ್ಯರ ಹೆಸರುಗಳನ್ನು ಪ್ರಸ್ತಾಪಿಸಿರುವುದು ನನಗೆ ವೈಯಕ್ತಿಕವಾಗಿ ತೀವ್ರ ಅಸಮಾಧಾನ ಉಂಟುಮಾಡಿದೆ. ಎಚ್‌.ಡಿ. ಕುಮಾರಸ್ವಾಮಿ ಅವರಂತಹ ಕೀಳು ಮನಸ್ಥಿತಿಯ ರಾಜಕಾರಣಿಯನ್ನು ಕರ್ನಾಟಕ ಈ ಹಿಂದೆ ಎಂದಿಗೂ ಕಂಡಿಲ್ಲ. ಮುಂದೆಯೂ ಇಂತಹ ರಾಜಕಾರಣಿಯನ್ನು ನೋಡುವುದಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರೇ, ನಿಮ್ಮ ಕೀಳು ಮನಸ್ಥಿತಿಗೆ ಯಾವುದಾದರೂ ಚಿಕಿತ್ಸೆ ಸಿಕ್ಕಿದೆಯೇ? ಅಂತಲೂ ಕೇಳಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷವು 2028 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಮತ್ತು 2029 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು, ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು. ಇದು ನಮ್ಮ ದೊಡ್ಡ ಜವಾಬ್ದಾರಿ. ಏನೇ ಭಿನ್ನಾಭಿಪ್ರಾಯಗಳಿದ್ದರೂ, ನಾವು ಅವುಗಳನ್ನು ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಒಳಗೆ ಪರಿಹರಿಸುತ್ತೇವೆ. ನನ್ನ ಪಕ್ಷ ನನಗೆ ಅತ್ಯಂತ ಮುಖ್ಯ. ನನ್ನ ಕಾಂಗ್ರೆಸ್ ಪಕ್ಷದ ಭವಿಷ್ಯವು ಅತ್ಯಂತ ಮುಖ್ಯ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ: ಕಾಂಗ್ರೆಸ್ ಪಕ್ಷದಲ್ಲಿ, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ, ನಾನು ನೆಲ ಗುಡಿಸಲು ಸಿದ್ಧನಿದ್ದೇನೆ ಎಂದೂ ಈಚೆಗೆ ಪ್ರದೀಪ್ ಈಶ್ವರ್ ಅವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+