Salaar Teaser: ಸಲಾರ್ ಟೀಸರ್ ನೋಡಿ ನಿಮಗೆ ಅನಿಸಿದ್ದೇನು?
ಎಲ್ಲೆಲ್ಲೂ ಸಲಾರ್ ಹವಾ ಶುರುವಾಗಿದೆ, ಅದರಲ್ಲೂ ಇದೇ ಮೊದಲ ಬಾರಿ ಬೆಳ್ಳಂಬೆಳಗ್ಗೆ ಸಿನಿಮಾ ಒಂದರ ಟೀಸರ್ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ & ಪ್ರಭಾಸ್ ಕಾಂಬಿನೇಷನ್ ಕಮಾಲ್ ಮಾಡಲು ಸಿದ್ಧವಾಗಿದೆ. ಮೊದಲ ಸಿನಿಮಾದ ಟೀಸರ್ ಮೂಲಕವೇ ಸುನಾಮಿ ಎಬ್ಬಿಸಿರುವ ಈ ಜೋಡಿಗೆ ಜನ ಕೊಟ್ಟ ಮಾರ್ಕ್ಸ್ ಎಷ್ಟು? ಹಾಗೇ ಸಲಾರ್ ಸಿನಿಮಾದಲ್ಲಿ ಕೆಜಿಎಫ್ ಸ್ಟಾರ್ ಯಶ್ ಕೂಡ ಎಂಟ್ರಿ ಕೊಡ್ತಾರಾ? ಬನ್ನಿ ತಿಳಿಯೋಣ.
ಸಮಯ ಬೆಳಗ್ಗೆ 5.12, ಈ ಟೈಂಗೆ ಬಹುತೇಕರು ಸಿಹಿ ನಿದ್ದೆಯಲ್ಲಿ ಅದ್ಭುತವಾದ ಕನಸು ಕಾಣುತ್ತಿರುತ್ತಾರೆ. ಆದರೆ ಪ್ರಭಾಸ್ & ಪ್ರಶಾಂತ್ ನೀಲ್ ಅಭಿಮಾನಿಗಳು ಮಾತ್ರ ಇಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೂತಿದ್ರು. ನಿದ್ದೆ ಮಾಡೋದು ಬಿಡಿ, ಯಾವಾಗ ಆ ಕ್ಷಣ ಬರುತ್ತೆ? ಅಂತಾ ತಮಗೆ ತಾವೇ ಪ್ರಶ್ನೆ ಕೇಳಿಕೊಂಡು ಕಾಯ್ತಿದ್ರು. ಆ ಸಮಯ ಸರಿಯಾಗಿ ಇಂದು ಮುಂಜಾನೆ 5.12ಕ್ಕೆ ಬಂದೇ ಬಿಟ್ಟಿತ್ತು. ನೋಡ ನೋಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಸುನಾಮಿ ಎಬ್ಬಿಸಿದ್ದರು. ಅಲ್ಲದೆ 'ಸಲಾರ್' ಸಿನಿಮಾ ಕೆಜಿಎಫ್ ಜೊತೆ ಬೆರೆಯಲಿದೆ ಎಂಬ ಊಹಾಪೋಹಕ್ಕೂ ಉತ್ತರ ಸಿಕ್ಕೇಬಿಟ್ಟಿದೆ!

ಡೈನೋಸಾರ್ ಕಥೆ ಹೇಳ್ತಿದ್ದಾರೆ ನೀಲ್!
ಅಂದಹಾಗೆ ಪ್ರಶಾಂತ್ ನೀಲ್ ಈಗ ಹೇಳುತ್ತಿರುವುದು ಅಂತಿಂಥ ಕಥೆ ಅಲ್ಲ, ಇದು ಕೇವಲ ಸಿನಿಮಾ ಅಂತಾ ಹೇಳೋಕೆ ಆಗೋದೆ ಇಲ್ಲ. ಯಾಕಂದ್ರೆ ಇದು 'ಜುರಾಸಿಕ್ ಪಾರ್ಕ್' ಕಥೆ ಆಗಿದೆ. ಹೌದು ಸಲಾರ್ ಟೀಸರ್‌ನಲ್ಲಿ ಪ್ರಭಾಸ್ ಎಷ್ಟು ವೈಲೆಂಟ್ ಅನ್ನೋದನ್ನ ತಿಳಿಸಲು ಪ್ರಶಾಂತ್ ನೀಲ್ 'ಜುರಾಸಿಕ್ ಪಾರ್ಕ್' ಉದಾಹರಣೆ ಕೊಟ್ಟಿದ್ದಾರೆ. ಸಿಂಹ, ಚಿರತೆ, ಹುಲಿ ಹಾಗೂ ಆನೆ ತುಂಬಾನೆ ಡೇಂಜರಸ್, ಆದ್ರೆ 'ಜುರಾಸಿಕ್ ಪಾರ್ಕ್'ನಲ್ಲಿ ಅಲ್ಲ ಎಂದಿದ್ದಾರೆ. ಈ ಮೂಲಕ ಕಾಡಿನಲ್ಲಿ ಸಿಂಹ, ಚಿರತೆ, ಹುಲಿ ಹಾಗೂ ಆನೆಗಳು ಅಬ್ಬರಿಸಿದರೂ ಅವೆಲ್ಲ ಜುರಾಸಿಕ್ ಪಾರ್ಕ್‌ಗೆ ಬಂದ್ರೆ ಬೆಚ್ಚಿಬೀಳುವುದು ಪಕ್ಕಾ ಅಂತಾ ಅರ್ಥ. ಹೀಗಾಗಿಯೇ ನೀಲ್ ಏನೋ ದೊಡ್ಡದಾಗಿ ಸದ್ದು ಮಾಡೋಕೆ ಬಂದಿರುವುದು ಗ್ಯಾರಂಟಿ ಆಗಿದೆ.
'ಸಲಾರ್' & 'ಕೆಜಿಎಫ್' ಜಗತ್ತು ಜೋಡಣೆ ಫಿಕ್ಸ್?
ಅಂದಹಾಗೆ 'ಸಲಾರ್' ಸಿನಿಮಾ 'ಕೆಜಿಎಫ್' ರೀತಿಯಲ್ಲೇ ಹಾಲಿವುಡ್ ಫೀಲ್ ಕೊಡುತ್ತಿದೆ. ಅಲ್ಲದೆ ಕೆಜಿಎಫ್ ಹಾಗೂ ಸಲಾರ್ ಸಿನಿಮಾಗಳು ಒಂದಾಗಲಿವೆ, ಅಂದರೆ ವೆರ್ಸ್ ಕ್ರಿಯೇಟ್ ಆಗೋದು ಪಕ್ಕಾ ಅನ್ನೋ ಮಾತು ಕೇಳಿಬಂದಿತ್ತು. ಈ ಮಾತುಗಳಿಗೆ ಬಲ ನೀಡುವ ರೀತಿ ಇದೀಗ 'ಸಲಾರ್' ಟೀಸರ್ ಮೂಡಿಬಂದಿದೆ. ಅದಕ್ಕೆ ಪೂರಕವಾಗಿ ಕೆಲವೊಂದು ಮಾಹಿತಿ ಕೂಡ ಟೀಸರ್‌ನಲ್ಲಿ ಕಂಡುಬಂದಿದೆ. 1.46 ನಿಮಿಷ ಇರುವ ಈ ಟೀಸರ್‌ನಲ್ಲಿ ಶುರುವಿನಿಂದ ಕೊನೆಯ ತನಕ ಮಾಸ್ ಎಲಿಮೆಂಟ್ ಸರಮಾಲೆಯೇ ಇದೆ. ಅದರಲ್ಲೂ ಡೈಲಾಗ್ ಮುಗದಿ ನಂತರ ಬರುವ ದೃಶ್ಯಗಳು ಸಲಾರ್ ಹಾಗೂ ಕೆಜಿಎಫ್ ಒಂದಾಗುವ ಸಂಪೂರ್ಣ ಮಾಹಿತಿ ನೀಡಿದಂತಿದೆ.
ಟೀಸರ್ ಡೈಲಾಗ್ ಹೇಗಿದೆ ಗೊತ್ತಾ?
ಸಲಾರ್ ಸಿನಿಮಾ ಟೀಸರ್ ಶುರುವಾಗೋದೆ 'ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್..' ಅನ್ನೋ ಡೈಲಾಗ್‌ನಿಂದ. ನಂತ್ರ ಮಾತು ಮುಂದುವರಿಸುವ ಟಿನ್ನು ಆನಂದ್, 'ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ..' ಎಂದು ಡೈಲಾಗ್ ಹೊಡೆಯುತ್ತಾರೆ. ಆ ಬಳಿಕ ಪ್ರಭಾಸ್ ಪೂರ್ತಿ ಮುಖ ತೋರಿಸದೆ ಮುಖದ ಅರ್ಧ ಭಾಗಕ್ಕೆ ಶೇಡ್ ಲೈಟ್ ಬಿಟ್ಟು ಕುತೂಹಲ ಕೆರಳಿಸುವ ಮೂಲಕ ಟೀಸರ್ ಎಂಡ್ ಮಾಡಲಾಗಿದೆ. ಆದರೆ ಇಲ್ಲಿ ಕೆಜಿಎಫ್ ಸಿನಿಮಾದ ಕೆಲ ದೃಶ್ಯಗಳು ಬಂದಿವೆ ಅನ್ನೋದು ಅಭಿಮಾನಿಗಳ ಮಾತು. ದಕ್ಷಿಣ ಭಾರತ ಅಥವಾ ಉತ್ತರ ಭಾರತ ಮಾತ್ರವಲ್ಲ ಜಗತ್ತೇ ಈ ಟೀಸರ್ ಬಗ್ಗೆ ಮಾತನಾಡುತ್ತಿದೆ.

ಏನಿದು 'ಸಲಾರ್' & 'ಕೆಜಿಎಫ್' ಲಿಂಕ್?
ಅಂದಹಾಗೆ ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ಬಳಿಕ ಬರುವ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಗಣಿ ಪ್ರದೇಶದಲ್ಲಿ 516 ಬಿಗ್ ಬ್ಯಾರೆಲ್ ನಿಲ್ಲಿಸಿರುವ ದೃಶ್ಯವಿದೆ. ಅದೇ ಸಂಖ್ಯೆ ಬ್ಯಾರೆಲ್ ಇರುವುದು ಸಲಾರ್ ಟೀಸರ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಈ ಮೂಲಕ ಪ್ರಶಾಂತ್ ನೀಲ್ ತಮ್ಮದೇ ಶೈಲಿಯಲ್ಲಿ ಸಿನಿಮ್ಯಾಟಿಕ್ ಯೂನಿವರ್ಸ್ ತಯಾರಿಸಿದ್ದು, ಒಂದೇ ಚಿತ್ರದಲ್ಲಿ ಪ್ರಭಾಸ್ ಹಾಗೂ ಯಶ್ ಇಬ್ರನ್ನೂ ನೋಡಬಹುದು ಎಂದು ಊಹಿಸಿ ಫುಲ್ ಖುಷ್ ಆಗಿದ್ದಾರೆ ಅಭಿಮಾನಿಗಳು. ಆದರೆ ಈ ಬಗ್ಗೆ ಚಿತ್ರತಂಡ ಅಥವಾ ನಿರ್ದೇಶಕರು ಇಲ್ಲ ನಟರು ಅಧಿಕೃತವಾದ ಹೇಳಿಕೆ ನೀಡಿಲ್ಲ, ಹೀಗಾಗಿ ಕುತೂಹಲ ಕ್ಷಣಕ್ಷಣಕ್ಕೂ ಡಬಲ್ ಆಗುತ್ತಿದೆ.
ಈಗಾಗಲೇ ಕೋಟಿ ಕೋಟಿ ವಸೂಲಿ?
ಅಷ್ಟಕ್ಕೂ 'ಸಲಾರ್' ರಿಲೀಸ್ ಆಗುವುದಕ್ಕೆ ಮೊದಲೇ ಕೋಟಿ ಕೋಟಿ ಬಿಸಿನೆಸ್ ಮಾಡಿರುವ ಮಾತು ಓಡಾಡುತ್ತಿದೆ. 'ಸಲಾರ್' ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್, ಕನ್ನಡ ನಟ ಪ್ರಮೋದ್ ಮತ್ತು ಮಧು ಗುರುಸ್ವಾಮಿ ನಟಿಸಿದ್ದಾರೆ. ದೊಡ್ಡ ತಾರಾಬಳಗವೇ 'ಸಲಾರ್' ಸಿನಿಮಾ ತಂಡಕ್ಕೆ ಸಾಥ್ ನೀಡಿದೆ. ಈ ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ ಸಲಾರ್ ಸಿನಿಮಾ ನೋಡಲು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಈಗ ರಿಲೀಸ್ ಆಗಿರುವ ಸಲಾರ್ ಟೀಸರ್ ಫ್ಯಾನ್ಸ್ ಕುತೂಹಲಕ್ಕೆ ನೀರೆರದಿದೆ. ಹೀಗಾಗಿಯೇ ಜನ ಉಸಿರು ಬಿಗಿಹಿಡಿದು ಸಿನಿಮಾ ನೋಡಲು ಕಾಯುತ್ತಿದ್ದಾರೆ. 2023 ಸೆಪ್ಟೆಂಬರ್ 28ರಂದು ಸಲಾರ್ ಜಗತ್ತಿನಾದ್ಯಂತ, ಹತ್ತಾರು ಸಾವಿರ ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ.
ಯಶ್ ನಡೆಯಿಂದ ಶುರುವಾಯ್ತು ಸರ್ಪ್ರೈಸ್!
ಇದು ಕೆಲವೇ ದಿನಗಳ ಹಿಂದೆ ನಡೆದಿದ್ದ ಘಟನೆ, ನಟ ಪ್ರಭಾಸ್ ದೇಗುಲಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಮಾತೊಂದನ್ನ ಹೇಳಿದ್ದರು. ಯಶ್ ಅವರ ಮುಂದಿನ ಸಿನಿಮಾ ಅಂದರೆ ಯಶ್-19 ಬಗ್ಗೆ ಮಾತು ಬಂದಾಗ, ನಾನು ಸಮಯ ವ್ಯರ್ಥ ಮಾಡದೆ ಕೆಲಸ ಮಾಡ್ತಾ ಇದ್ದೀನಿ ಅಂದಿದ್ರು. ಅಲ್ಲದೆ ಯಶ್ ಬಾಲಿವುಡ್‌ಗೆ ಹೋಗ್ತಾರಂತೆ? ಅನ್ನೋ ರಿಪೋರ್ಟರ್ ಪ್ರಶ್ನೆಗೆ ಯಶ್ ಖಡಕ್ ರಿಯಾಕ್ಷನ್ ಕೊಟ್ಟಿದ್ದರು. 'ನಾನು ಎಲ್ಲಿಗೂ ಹೋಗಿಲ್ಲ, ಇನ್ನೂ ಅವರನ್ನೇ ಇಲ್ಲಿಗೆ ಕರೆಸಿಕೊಂಡಿದ್ದೀನಿ' ಅಂತಾ ಹೇಳಿದ್ದರು.

ಒಟ್ಟಾರೆ ಹೇಳೋದಾದ್ರೆ ಸಲಾರ್ ಸಿನಿಮಾ ಟೀಸರ್ ರಿಲೀಸ್ ಆಗಿರೋದಕ್ಕೂ, ರಾಕಿಭಾಯ್ ಯಶ್ ಬಾಲಿವುಡ್‌ಗೆ ಹೋಗುವ ಬಗ್ಗೆ ನೀಡಿದ ಪ್ರತಿಕ್ರಿಯೆಗೂ ಸಂಬಂಧ ಬೆಸೆಯಲಾಗ್ತಿದೆ. ಸಹಜವಾಗಿ ಈ ಮಾತುಗಳು ಹಾಗೂ ಸದ್ಯದ ಬೆಳವಣಿಗೆ ಅಭಿಮಾನಿ ಬಳಗದ ಕುತೂಹಲ ಹೆಚ್ಚಿಸುತ್ತಿದೆ. ಇದೆಲ್ಲಾ ಏನೇ ಇರಲಿ, ಈಗ ಕನ್ನಡ ಸಿನಿಮಾ ರಂಗಕ್ಕೆ ಜಾಗತಿಕ ಮನ್ನಣೆ ಸಿಗುತ್ತಿರುವುದು ಪಕ್ಕಾ. ಅಕಸ್ಮಾತ್ ಅಭಿಮಾನಿಗಳ ಆಸೆಯಂತೆ ಸಲಾರ್ ಮತ್ತು ಕೆಜಿಎಫ್ ಸಿನಿಮಾಗಳು ಒಂದಾಗಿದ್ದೇ ಆದರೆ, ಯಶ್ ಮತ್ತು ಪ್ರಭಾಸ್ ಒಂದೇ ಸ್ಕ್ರೀನ್ ಮೇಲೆ ತಮ್ಮ ಅಬ್ಬರ ತೋರಿದ್ದೇ ಆದರೆ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬೆರಯೋದು ಗ್ಯಾರಂಟಿ.
-
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ












Click it and Unblock the Notifications