• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ದಕ್ಷಿಣ: ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ

By Mahesh
|

ಬೆಂಗಳೂರು, ಮಾರ್ಚ್ 08: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಡಾ. ಆರ್. ಪ್ರಭಾಕರರೆಡ್ಡಿಯವರನ್ನು ಅಭ್ಯರ್ಥಿಯನ್ನಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

ನಂತರ ಮಾತನಾಡಿದ ಕುಮಾರಸ್ವಾಮಿ, 'ನಾನು 20 ತಿಂಗಳ ಅವಧಿಯಲ್ಲಿ ಮುಂದಾಲೋಚನೆಯಿಂದ ಮಹಾನಗರ ಪಾಲಿಕೆಗೆ ಹೊರ ವಲಯ ಸೇರ್ಪಡೆ ಮಾಡಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದೆ.

ಇದರಲ್ಲಿ ಸ್ವಾರ್ಥವಿರಲಿಲ್ಲ. ಬದಲಾಗಿ ಅಂದಿನ ಕೇಂದ್ರ ಸರ್ಕಾರದ ಅನುದಾನ ನರ್ಮ್ ಅಡಿ 25 ಕೋಟಿ ಬೆಂಗಳೂರು ಮತ್ತು ಮೈಸೂರಿಗೆ ಲಭ್ಯವಾಗುತ್ತಿತ್ತು. ನನ್ನ ಬೆಂಗಳೂರಿನ ಬಗ್ಗೆ ನನಗೆ ಬೃಹತ್ ಆಲೋಚನೆ, ಕಲ್ಪನೆ ಹಾಗೂ ಸುಂದರ ಕನಸಿದ್ದು, ಕೆಲವೇ ದಿನಗಳಲ್ಲಿ ಸಾಕಾರಗೊಳಿಸುತ್ತೇನೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಅವರನ್ನು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ಸಿಗೆ ಕರೆದುಕೊಂಡು ಹೋಗಿದ್ದರು.

ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರಪರಿಚಿತವಾಗಿರುವ ಮೈಲಸಂದ್ರದ ಪ್ರಭಾಕರ್ ರೆಡ್ಡಿ ಅವರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾಗ ಭಾರಿ ಪ್ರಚಾರ ನಡೆಸಿದರೂ ಫಲ ನೀಡಲಿಲ್ಲ. ಈಗ ಬಿಜೆಪಿ ಪ್ರಾಬಲ್ಯವಿರುವ ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.

ಪ್ರಭಾಕರ ರೆಡ್ಡಿ ವ್ಯಕ್ತಿಚಿತ್ರ

ಪ್ರಭಾಕರ ರೆಡ್ಡಿ ವ್ಯಕ್ತಿಚಿತ್ರ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬೇಗೂರು ಹೋಬಳಿ ಮೈಲಸಂದ್ರ ಎಂಬ ಗ್ರಾಮದಿಂದ ಬಂದಿರುವ ಪ್ರಭಾಕರ್ ರೆಡ್ಡಿ ಅವರದ್ದು ಕೃಷಿಕ ಕುಟುಂಬ. ವಿವಿ ಪುರಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಪ್ರಭಾಕರ್ ಅವರು 1987ರಲ್ಲಿ ಉದ್ಯಮಿಯಾಗಿ ಸಿಮೆಂಟ್ ಬ್ರಿಕ್ಸ್ ಕಾರ್ಖಾನೆಯೊಂದಿಗೆ ವೃತ್ತಿ ಆರಂಭಿಸಿದರು. ಬೆಂಗಳೂರಿನಲ್ಲಿ ರಾಮಾಂಜನೇಯ ಕಾಂಕ್ರೀಟ್ ಬ್ರಿಕ್ಸ್ ಲಾರಿ ಕಂಡರೆ ಅದು ರೆಡ್ಡಿ ಅವರದ್ದು ಎಂದು ತಿಳಿಯಬಹುದು. ಚಿತ್ರದಲ್ಲಿ : ಎಡಗಡೆಯಿಂದ ಮೂರನೆಯವರು.

ಮೈಲಸಂದ್ರದ ಪ್ರಭಾಕರ್ ರೆಡ್ಡಿ

ಮೈಲಸಂದ್ರದ ಪ್ರಭಾಕರ್ ರೆಡ್ಡಿ

ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರಪರಿಚಿತವಾಗಿರುವ ಮೈಲಸಂದ್ರದ ಪ್ರಭಾಕರ್ ರೆಡ್ಡಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಜಾತ್ಯಾತೀತ ಜನತಾ ದಳದ ಅಭ್ಯರ್ಥಿಯಾಗಿದ್ದಾರೆ.

* ವಯಸ್ಸು: 47

* ತಂದೆ : ರಾಮರೆಡ್ಡಿ, ಕೃಷಿಕರು

* ಪತ್ನಿ : ಎಸ್ ದೀಪ (199ರಲ್ಲಿ ವಿವಾಹ) ಮೂವರು ಹೆಣ್ಣು ಮಕ್ಕಳು

* ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದಾರೆ.

* ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು.

* ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಮತ್ತೊಮ್ಮೆ ಜೆಡಿಎಸ್ ಗೆ ಬಂದಿದ್ದಾರೆ.

* ವೃತ್ತಿ: ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೆಡ್ಡಿ ಮುಂದು

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೆಡ್ಡಿ ಮುಂದು

ಅತಿರುದ್ರ ಮಹಾಯಾಗ ಸೇರಿದಂತೆ ಅನೇಕಲ್ ಹಬ್ಬ, ದಸರಾ ಮಹೋತ್ಸವ, ಲಕ್ಷ ದೀಪೋತ್ಸವ, ಬೆಂಗಳೂರಿನ ಹೆಸರಿನ ಶಾಸನವಿರುವ ಬೇಗೂರು ನಾಗೇಶ್ವರ ಪಂಚಲಿಂಗ ದೇಗುಲದ ಜೀರ್ಣೋದ್ಧಾರ ಸೇರಿದಂತೆ ಅನೇಕ ಧಾರ್ಮಿಕ, ಸಂಪ್ರದಾಯಬದ್ಧ ಹಬ್ಬ ಹರಿದಿನಗಳಿಗೆ ಪ್ರಭಾಕರ್ ರೆಡ್ಡಿ ಕೊಡುಗೆ ಯಥೇಚ್ಛವಾಗಿದೆ.

ಉದ್ಯಮಿಯಾಗಿ ಬೆಳೆದಿರುವ ಪ್ರಭಾಕರ್ ರೆಡ್ಡಿ

ಉದ್ಯಮಿಯಾಗಿ ಬೆಳೆದಿರುವ ಪ್ರಭಾಕರ್ ರೆಡ್ಡಿ

2000ರ ವೇಳೆಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಳಿದ ಪ್ರಭಾಕರ್ ರೆಡ್ಡಿ ಅವರು ಸಾಯಿ ರಿಯಲ್ ಸಂಸ್ಥೆ ಕಟ್ಟಿ ಬೆಳೆಸಿದರು. 2007ರಲ್ಲಿ ಸದ್ಗುರು ಸಾಯಿನಾಥ್ ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇಂಟರ್ ನ್ಯಾಷನಲ್ ಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳನ್ನು ಸ್ಥಾಪಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Businessman Prabhakar Reddy who jumped to Congress now is back in JDS and to contest from Bengaluru South. He earlier contested to Lok Sabha as JDS candidate from Bengaluru Rural but lost against DK Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more