ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news! ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ

|
Google Oneindia Kannada News

ಬೆಂಗಳೂರು, ಜೂನ್ 9: ಎಲ್ಲಾ ವರ್ಗದ ಗ್ರಾಹಕರಿಗೆ ಸಂಬಂಧಿಸಿದಂತೆ, ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್‌ಗೆ 83 ಪೈಸೆಗಳಿಂದ 168 ಪೈಸೆಗಳವರೆಗೆ ದರ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಕೋರಿವೆ. ಆದರೆ, ಪ್ರತಿ ಯೂನಿಟ್ ಮೇಲೆ 30 ಪೈಸೆಯಂತೆ ದರ ಹೆಚ್ಚಳವಾಗಿದೆ. ಪರಿಷ್ಕೃತ ದರಗಳು ಏಪ್ರಿಲ್ 1, 2021ರಿಂದಲೇ ಅನ್ವಯವಾಗಲಿದೆ. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪರಿಷ್ಕೃತ ದರಗಳು ಕಳೆದ ತಿಂಗಳ ಬಿಲ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಬೆಂಗಳೂರು ಮೆಟ್ರೋ ಮತ್ತು ವಿದ್ಯುತ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಹೊರತುಪಡಿಸಿದಂತೆ ಎಲ್ಲಾ ಪ್ರವರ್ಗಗಳ ವಿವಿಧ ಹಂತಗಳಲ್ಲಿನ ವಿದ್ಯುತ್ ದರ ಪ್ರತಿ ಯೂನಿಟ್ ಗೆ 10 ಪೈಸೆ ಹೆಚ್ಚಳವಾಗಿದ್ದು, ನಿಗದಿತ ಶುಲ್ಕದಲ್ಲಿ 10 ರು ನಿಂದ 20 ರುವರೆಗೆ ಹೆಚ್ಚಳವಾಗಿರುತ್ತದೆ. ಒಟ್ಟಾರೆ 3.84% ದರ ಹೆಚ್ಚಳದೊಂದಿಗೆ ವಿದ್ಯುಚ್ಛಕ್ತಿ ಹೆಚ್ಚಳವು(ನಿಗದಿತ ಶುಲ್ಕ ಸೇರಿದಂತೆ) ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಗಳು ಆಗಿರುತ್ತದೆ.

ಗೃಹ ಬಳಕೆ ಗ್ರಾಹಕರಿಗೆ ಅನ್ವಯವಾಗುವ ದರಗಳು:(ಪ್ರತಿ ತಿಂಗಳಿಗೆ)
ಬಿಬಿಎಂಪಿ ವ್ಯಾಪ್ತಿಯ ಗೃಹ ಬಳಕೆಯ ಗ್ರಾಹಕರಿಗೆ ಹಾಗೂ ಸರ್ಕಾರಿ/ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ ಹಾಗೂ ಆಸ್ಪತ್ರೆಗಳ ಸ್ಥಾವರಗಳ ವಿದ್ಯುಚ್ಛಕ್ತಿ ದರಗಳಲ್ಲಿನ ಹೆಚ್ಚಳವು ಪ್ರತಿ ಯೂನಿಟ್ ಗೆ 10 ಪೈಸೆಯಾಗಿದೆ.

Power tariffs hiked across Karnataka for all consumers, here are the details

* 0-50 ಯೂನಿಟ್‌ಗಳ( ಈ ಹಿಂದೆ 0-30 ಯೂನಿಟ್) ಮಾಸಿಕ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 4 ರು ಗಳಿಂದ 4.10 ರು ಗಳಿಗೆ ಹೆಚ್ಚಿಸಲಾಗಿದೆ.

* 51-100 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 5.45 ರು ಗಳಿಂದ 5.55 ರು ಗಳಿಗೆ ಹೆಚ್ಚಿಸಲಾಗಿದೆ.

* 101-200 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 7.00 ರು ಗಳಿಂದ 7.10ರು ಗಳಿಗೆ ಹೆಚ್ಚಿಸಲಾಗಿದೆ.

Recommended Video

BCCI ಆಸೆಗೆ ತಣ್ಣೀರೆರೆಚಿದ ICC | Oneindia Kannada

* 200 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 8.05 ರು ಗಳಿಂದ 8.15 ರು ಗಳಿಗೆ ಹೆಚ್ಚಿಸಲಾಗಿದೆ.

****
ಇತರೆ ಎಲ್ಲಾ ಎಸ್ಕಾಂಗಳ ನಗರ ಪಾಲಿಕೆ, ಪುರಸಭೆ

* 0-50 ಯೂನಿಟ್‌ಗಳ( ಈ ಹಿಂದೆ 0-30 ಯೂನಿಟ್) ಮಾಸಿಕ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 3.95 ರು ಗಳಿಂದ 4.05ರು ಗಳಿಗೆ ಹೆಚ್ಚಿಸಲಾಗಿದೆ.

* 51-100 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 5.45 ರು ಗಳಿಂದ 5.55 ರು ಗಳಿಗೆ ಹೆಚ್ಚಿಸಲಾಗಿದೆ.

* 101-200 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 7.00 ರು ಗಳಿಂದ 7.10ರು ಗಳಿಗೆ ಹೆಚ್ಚಿಸಲಾಗಿದೆ.

* 200 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 8.05 ರು ಗಳಿಂದ 8.15 ರು ಗಳಿಗೆ ಹೆಚ್ಚಿಸಲಾಗಿದೆ.
****
ಎಸ್ಕಾಂಗಳ ಗ್ರಾಮ ಪಂಚಾಯಿತಿ

* 0-50 ಯೂನಿಟ್‌ಗಳ( ಈ ಹಿಂದೆ 0-30 ಯೂನಿಟ್) ಮಾಸಿಕ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 3.85 ರು ಗಳಿಂದ 3.95ರು ಗಳಿಗೆ ಹೆಚ್ಚಿಸಲಾಗಿದೆ.

* 51-100 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 5.15 ರು ಗಳಿಂದ 5.25 ರು ಗಳಿಗೆ ಹೆಚ್ಚಿಸಲಾಗಿದೆ.

* 101-200 ಯೂನಿಟ್‌ಗಳ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 6.70 ರು ಗಳಿಂದ 6.80ರು ಗಳಿಗೆ ಹೆಚ್ಚಿಸಲಾಗಿದೆ.

* 200 ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಯ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‌ಗೆ 7.55 ರು ಗಳಿಂದ 7.65 ರು ಗಳಿಗೆ ಹೆಚ್ಚಿಸಲಾಗಿದೆ.

English summary
The Karnataka Electricity Regulatory Commission on announced a hike in the power tariff by 30 paise per unit. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X