ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ವಿರುದ್ಧ ರೈತರ ಆಕ್ರೋಶವೇಕೆ?
ಬೆಂಗಳೂರು, ಮೇ 31: ಇಡೀ ದೇಶ ಮತ್ತು ಜಗತ್ತು ಕೋವಿಡ್ -19 ರ ವಿರುದ್ದ ಎಲ್ಲ ಭೇದಗಳನ್ನು ಮರೆತು ಹೋರಾಟದಲ್ಲಿ ತೊಡಗಿರುವಾಗ, ಸದರಿ ಸಂದರ್ಭವನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಂಡು ಒಕ್ಕೂಟವಾದಿ ಸ್ವರೂಪವನ್ನು ಧಿಕ್ಕರಿಸಿದೆ ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
Recommended Video
ದೇಶದ ರೈತರು ಹಾಗೂ ಕೂಲಿಕಾರರು, ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಹಾಗೂ ವಿದ್ಯುತ್ ಗ್ರಾಹಕರ ಮೇಲೆ ಕಾರ್ಪೊರೇಟ್ ಕಂಪನಿಗಳ ಲೂಟಿಗಾಗಿ, ಮತ್ತೊಂದು ಗಂಭೀರ ಧಾಳಿ ಮಾಡಲು, ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ -2020 ನ್ನು ಜಾರಿಗೊಳಿಸಲು ಕ್ರಮವಹಿಸಿದೆ ಎಂದು ಕರ್ನಾಟಕ ಪ್ರಾಂತೀಯ ರೈತ ಸಂಘ ಆರೋಪ ಮಾಡಿದೆ.
ಎಲ್ಲಾ ರಾಜ್ಯ ಸರಕಾರಗಳು ಕೂಡಲೇ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ -2020 ಜಾರಿಗೆ ಸೂಕ್ತ ಕ್ರಮ ವಹಿಸುವಂತೆ ಒತ್ತಡವನ್ನು ಹೇರಲಾಗುತ್ತಿದೆ. ಈ ಮಸೂದೆ ಜಾರಿ ಮಾಡದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ರೈತ ಸಂಘ ಆಗ್ರಹಿಸಿದೆ.

ಇದು ಜಾರಿಯಾದರೇ, ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆಗಳ ಕಂಪನಿಗಳು ಹಾಗೂ ಅವುಗಳ ಲಕ್ಷಾಂತರ ಕೋಟಿ ರೂಗಳ ಆಸ್ತಿ- ಪಾಸ್ತಿಗಳು, ಖಾಸಗೀ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಕೈ ವಶವಾಗಲಿವೆ.
ಉಚಿತ ವಿದ್ಯುತ್ ಯೋಜನೆಗೆ ಸಂಪೂರ್ಣ ಕತ್ತರಿ
ಅದೇ ರೀತಿ, ರೈತರ ದಶಲಕ್ಷಾಂತರ ಕೃಷಿ ಪಂಪ್ ಸೆಟ್ ಗಳಿಗೆ ಮತ್ತು ಭಾಗ್ಯ ಜ್ಯೋತಿ, ಕುಠೀರ ಜ್ಯೋತಿ ಗಳಿಗೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಒದಗಿಸಲಾಗುತ್ತಿರುವ ಉಚಿತ/ ಸಹಾಯ ಧನದ ವಿದ್ಯುತ್ ಗೆ ಸಂಪೂರ್ಣ ಕತ್ತರಿ ಬೀಳಲಿದೆ.
ಕಾರ್ಪೊರೇಟ್ ಕಂಪನಿಗಳ ಕೈ ವಶವಾದ ಕೂಡಲೇ, ರಾಜ್ಯದ ಕೋಟ್ಯಾಂತರ ಗ್ರಾಹಕರ ವ್ಯಾಪಕ ಲೂಟಿಗೂ ಇದು ಅನುಕೂಲ ಮಾಡಿಕೊಡಲಿದೆ. ಆದ್ದರಿಂದ, ಈ ಮಸೂದೆಯು ಸ್ಪಷ್ಟವಾಗಿ, ರಾಜ್ಯದ ಅಭಿವೃದ್ದಿ ಹಾಗೂ ಬಡವರ ವಿರೋಧಿಯಾಗಿದೆ.

ಕರ್ನಾಟಕ ಸರಕಾರ ಸದರಿ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ನ್ನು ಯಾವುದೇ ಕಾರಣಕ್ಕೆ ರಾಜ್ಯದಲ್ಲಿ ಜಾರಿಗೆ ತರಬಾರದು ಮತ್ತು ವಿದ್ಯುತ್ ರಂಗವನ್ನು ಖಾಸಗೀಕರಣ ಮಾಡಲು ಕ್ರಮವಹಿಸಬಾರದೆಂದು ಕರ್ನಾಟಕ ಪ್ರಾಂತ ರೈತ ಸಂಘ ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ. ಅದೇ ರೀತಿ, ಕಾರ್ಪೊರೇಟ್ ಕಂಪನಿಗಳ ಪರವಾಗಿ ರೂಪಿಸಲಾಗಿರುವ ಸದರಿ ಮಸೂದೆಯನ್ನು ಕೇಂದ್ರ ಸರಕಾರ ತಕ್ಷಣವೇ ವಾಪಾಸು ಪಡೆಯಬೇಕೆಂದು ರೈತ ಸಂಘ ಒತ್ತಾಯಿಸಿದೆ.












Click it and Unblock the Notifications