ಬೇಸಿಗೆಯಲ್ಲಿ ವಿದ್ಯುತ್ ಕಡಿತ ಖಚಿತ: ಡಿಕೆ ಶಿವಕುಮಾರ್

ಈ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಖಚಿತ ಎಂದಿದ್ದಾರೆ ಡಿಕೆ ಶಿವಕುಮಾರ್. ಆದರೆ ಜನ ಈಗಾಗಲೇ ಬೆಳಗಿನ ವೇಳೆ ವಿದ್ಯುತ್ ಕಡಿತ ಅನಧಿಕೃತವಾಗಿ ನಡೆದಿದೆ ಎಂದು ಹತಾಶರಾಗಿದ್ದಾರೆ.
ಲೋಡ್ ಶೆಡ್ಡಿಂಗ್ ತಗ್ಗಿಸಲು ಕ್ರಮ:
ಈ ಬಾರಿ ಬೇಸಿಗೆಯಲ್ಲಿ ಶೇ. 10ರಷ್ಟು ವಿದ್ಯುತ್ ಕಡಿತ ಎದುರಾಗುವ ಲಕ್ಷಣಗಳಿವೆ ಎಂದು ಸಚಿವ ಡಿಕೆಶಿ ಸೋಮವಾರ ಪ್ರಕಟಿಸಿದ್ದಾರೆ. ಆದರೂ ಈ ಕೊರತೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ವಿದ್ಯುತ್ ಖರೀದಿ ಸೇರಿದಂತೆ ಈಗಿಂದಲೇ ವಿದ್ಯುತ್ ಬಳಕೆ ಮೇಲೆ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಫೆಬ್ರವರಿಯಲ್ಲೇ ಬೇಸಿಗೆ ಕಾಲಿಟ್ಟಿದ್ದು, ವಿದ್ಯುತ್ ಬಳಕೆ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ದಿನಕ್ಕೆ ಸರಾಸರಿ 185 ದಶಲಕ್ಷ ಯುನಿಟ್ ಬಳಕೆಯಾಗುತ್ತಿದೆ. ಬೇಸಿಗೆ ವೇಳೆಗೆ ಇದು ಇನ್ನೂ ಹೆಚ್ಚಾಗುವುದು ನಿಶ್ಚಿತ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಸ್ಕಾಂ ಈಗಾಗಲೇ (Bangalore Electricity Supply company -BESCOM) ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಡಿಮೆ ಬಳಕೆ ಮಾಡುವಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವು ಭಾಗಗಳಲ್ಲಿ ಲೋಡ್ ಶೆಡ್ಡಿಂಗ್ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications
