Karnataka Power Cut: ರಾಜ್ಯದ ಈ ಭಾಗಗಳಲ್ಲಿಂದು ವಿದ್ಯುತ್ ವ್ಯತ್ಯಯ
Karnataka Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಆಗಸ್ಟ್ 5ರಂದು ರಾಜ್ಯದ ಹಲವು ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ರಾಜ್ಯದ ಭಾಗಗಳಲ್ಲಿ ಆಗಸ್ಟ್ 5ರ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ, ವಿದ್ಯುತ್ ಕಡಿತಗೊಳ್ಳುವ ಪ್ರದೇಶದ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಸೂಚನೆಗಳನ್ನು ಕೂಡ ನೀಡಿದೆ.

ತುಮಕೂರಿನಲ್ಲಿ ಎಲ್ಲೆಲ್ಲಿ ಪವರ್ ಕಟ್?: 110/11 ಕೆವಿ ಸಬ್‌ಸ್ಟೇಷನ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ತುಮಕೂರು ನಗರ ಉಪವಿಭಾಗ-1ರಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಶ್ರೀದೆವಿ ಕಾಲೇಜು, ಗಂಗಾ ಆಸ್ಪತ್ರೆ, ಆರ್‌ಐಎಂ ಆಸ್ಪತ್ರೆ, ಡಿ.ಸಿ. ಹೌಸ್, ದಕ್ಷ ಗ್ರಾನೈಟ್, ಶಿರಾಗೇಟ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ತಿಳಿಸಿದೆ.
ಚಿಕ್ಕನಾಯಕನಹಳ್ಳಿಯಲ್ಲಿ ಕರೆಂಟ್ ಕಟ್: 110/11 ಕೆವಿ ಸಬ್‌ಸ್ಟೇಷನ್‌ನಿಂದ ಎಫ್-17 ದುರ್ಗದಕೆರೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಚಿಕ್ಕನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯದೆ ಎಂದು ತಿಳಿಸಿದೆ,
ತಿಪಟೂರಿನಲ್ಲಿ ವಿದ್ಯುತ್ ವ್ಯತ್ಯಯ: ಬಂಡಿಹಳ್ಳಿ ಸಬ್‌ಸ್ಟೇಷನ್‌ನಿಂದ ಎಫ್-13 ಗಾಂಧಿನಗರ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಗಾಂಧಿನಗರ, ಮಾವಿನತೋಪು, ಹಿಪ್ಪೆತೋಪು, ಇಂದಿರಾನಗರ, ಚಾಮುಂಡೇಶ್ವರಿ ಲೇಔಟ್, ಬಸವೇಶ್ವರನಗರ ನಿವಾಸಿಗಳಿಗೆ ವಿದ್ಯುತ್ ಕಡಿತ ಆಗಲಿದೆ. ಆದ್ದರಿಂದ ಗ್ರಾಹಕರು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಉಪಕರಣಗಳನ್ನು ಮುಂಚಿತವಾಗಿ ಚಾರ್ಜ್ ಮಾಡಬೇಕು ಮತ್ತು ಬ್ಯಾಕಪ್ ವಿದ್ಯುತ್ ಮೂಲಗಳನ್ನು ಮಾಡಿಕೊಳ್ಳಿ ಎಂದು ಬೆಸ್ಕಾಂ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಸರ್ಜಾಪುರ ಮತ್ತು ಅತ್ತಿಬೆಲೆ 66 ಕೆವಿ ವ್ಯಾಪ್ತಿಯಲ್ಲಿ ಹೆಚ್ಟಿಎಲ್ಎಸ್ಕಂಡಕ್ಟರ್ಗಳ ತಂತಿ ಜೋಡಣೆ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಆಗಸ್ಟ್ 3ರ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿತ್ತು.
ಅತ್ತಿಬೆಲೆ ವ್ಯಾಪ್ತಿಯಲ್ಲಿ ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಂಬಳಿಪುರ, ಚಿಕ್ಕ ಕಾನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿತ್ತು.
66/11 ಕೆವಿ ಆನೇಕಲ್ ವ್ಯಾಪ್ತಿಯಲ್ಲಿನ ಆನೇಕಲ್ ಟೌನ್, ಕಾವಲಹೊಸಹಳ್ಳಿ, ಗೌರೇನಹಳ್ಳಿ, ಹಾಲ್ದೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾದ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿತ್ತು.












Click it and Unblock the Notifications