ಹೆದ್ದಾರಿಯಲ್ಲಿ ಕೆಎಂಎಫ್ ಕೌಂಟರ್‌ಗೆ ಜನಪ್ರತಿನಿಧಿಗಳ ಅಡ್ಡಗಾಲು
ಬೆಂಗಳೂರು, ನವೆಂಬರ್ 09 : ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಸಿದ್ದ ಆಹಾರ ಮತ್ತು ಪಾನೀಯಗಳನ್ನು ವಿತರಿಸುವ ಕೌಂಟರ್ ಆರಂಭಿಸುವ ಎನ್‌ಎಚ್‌ಎಐ ಯೋಜನೆಗೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ.
ಹೌದು, 2018ರ ಜನವರಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಎಐ) ಹೆದ್ದಾರಿಗಳ ಟೋಲ್ ಗೇಟ್ ಸಮೀಪ ಸಿದ್ಧ ಆಹಾರ, ಪಾನೀಯಗಳನ್ನು ವಿತರಿಸುವ ಕೌಂಟರ್ ಆರಂಭಿಸುವುದಾಗಿ ಘೋಷಣೆ ಮಾಡಿತ್ತು.
ಕರ್ನಾಟಕದ 33 ಟೋಲ್ ಗೇಟ್ ಬಳಿ 50 ಕೌಂಟರ್ ಆರಂಭವಾಗಬೇಕಿತ್ತು. ಆದರೆ, ಜನಪ್ರತಿನಿಧಿಗಳ ಒತ್ತಡದ ಕಾರಣದಿಂದಾಗಿ ಈಗ ಕೌಂಟರ್‌ಗಳು ಮಾತ್ರ ಆರಂಭವಾಗಿವೆ. ಇನ್ನೂ 42 ಕೌಂಟರ್‌ಗಳನ್ನು ತೆರೆಯಲು ತಡೆ ಉಂಟಾಗಿದೆ.

ಎನ್‌ಎಚ್‌ಎಎಐ ಕರ್ನಾಟಕದಲ್ಲಿ ಕೌಂಟರ್ ತೆರೆಯುವ ಜವಾಬ್ದಾರಿಯನ್ನು ಕೆಎಂಎಫ್‌ಗೆ ವಹಿಸಿತ್ತು. ಆದರೆ, ಟೋಲ್ ಸಮೀಪವಿರುವ ಜನರು, ಶಾಸಕರ ಬೆಂಬಲಿಗರು, ಸಂಸದರ ಬೆಂಬಲಿಗರು ಮೇಲೆ ಒತ್ತಡ ಹಾಕಿ, ಕೌಂಟರ್ ಪ್ರಕ್ರಿಯೆಯನ್ನು ನಮಗೆ ಕೊಡಿಸಬೇಕು ಎಂದು ಹೇಳಿಸುತ್ತಿದ್ದಾರೆ.
ಸುಮಾರು 8 ರಿಂದ 10 ಲಕ್ಷ ರೂ. ವೆಚ್ಚದಲ್ಲಿ ಕೌಂಟರ್ ನಿರ್ಮಾಣವಾಗಲಿದೆ. ವಿದ್ಯುತ್ ಮತ್ತು ನೀರಿನ ಸೌಕರ್ಯ ಒದಗಿಸಲಾಗುತ್ತದೆ. ಕಾಫಿ, ಟೀ, ಸಿದ್ದ ಆಹಾರಗಳನ್ನು ಈ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತದೆ.
ಎನ್‌ಎಚ್‌ಎಎಐ ಅಧಿಕಾರಿಗಳು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿಯದಿರಲು ನಿರ್ಧರಿಸಿದ್ದಾರೆ. ಕೆಲವು ತಿಂಗಳಿನಲ್ಲಿ ಬಾಕಿ ಇರುವ ಎಲ್ಲಾ ಕೌಂಟರ್‌ಗಳನ್ನು ಆರಂಭಿಸಲು ಕೆಎಂಎಫ್‌ಗೆ ಸೂಚನೆ ನೀಡಿದ್ದಾರೆ.












Click it and Unblock the Notifications