ಬೆಂಗಳೂರು ಪೊಲೀಸರ ಕಾರ್ಯಚರಣೆ; ಕಲಬುರಗಿಯಲ್ಲಿ 1,352 ಕೆಜಿ ಗಾಂಜಾ ವಶ
ಬೆಂಗಳೂರು, ಸೆಪ್ಟೆಂಬರ್ 10 : ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರಿನ ಶ್ರೇಷಾದ್ರಿಪುರಂ ಠಾಣೆ ಪೊಲೀಸರು 1,352 ಕೆ. ಜಿ. ಗಾಂಜಾವನ್ನು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಕಲಬುರಗಿಯ ಲಕ್ಷ್ಮಣ್ ನಾಯಕ್ ತಾಂಡಾದಲ್ಲಿ ಕೋಳಿ ಶೆಡ್‌ನಲ್ಲಿ ಗಾಂಜಾವನ್ನು ಸಂಗ್ರಹ ಮಾಡಲಾಗಿತ್ತು. ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಗಾಯತ್ರಿನಗರದ ಆಟೋ ಚಾಲಕ ಜ್ಞಾನಶೇಖರ್, ವಿಜಯಪುರದ ಸಿದ್ಧನಾಥ್, ಬೀದರ್‌ನ ನಾಗನಾಥ್, ಕಲಬುರಗಿಯ ಚಂದ್ರಕಾತ್ ಬಂಧಿತ ಆರೋಪಿಗಳು. ಜ್ಞಾನಶೇಖರ್ ಬಂಧಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದರು.

ಒಡಿಶಾ ಮೂಲಕ ಕಲಬುರಗಿಗೆ ಗಾಂಜಾ ಪೂರೈಕೆಯಾಗುತ್ತಿತ್ತು ಎಂದು ತಿಳಿದುಬಂದಿದೆ. ಕೋಳಿ ಶೆಡ್‌ನಲ್ಲಿ ಹುಲ್ಲನಡಿ ಗಾಂಜಾವನ್ನು ಬಚ್ಚಿಡಲಾಗಿತ್ತು. ಕರ್ನಾಟಕದಲ್ಲಿ ಇದುವರೆಗೂ ವಶಕ್ಕೆ ಪಡೆದಿರುವ ಅತಿ ಹೆಚ್ಚು ಮೌಲ್ಯದ ಗಾಂಜಾ ಇದಾಗಿದೆ.
ಕೋಳಿ ಶೆಡ್‌ನಲ್ಲಿ ಮುಚ್ಚಿಡಲಾಗಿದ್ದ 1,352 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 6 ಕೋಟಿ ಎಂದು ಅಂದಾಜಿಸಲಾಗಿದೆ.
ಕಳೆದ ವಾರ ಚಿತ್ರದುರ್ಗದಲ್ಲಿ 4 ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಕರ್ನಾಟಕದಲ್ಲಿ ಡ್ರಗ್ಸ್ ಜಾಲದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಸುಮಾರು 6 ಕೋಟಿ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications