ಕೊಪ್ಪಳ: ತುಂಗಭದ್ರಾ ಹಿನ್ನೀರಿನಲ್ಲಿ ಸಿಕ್ಕ ವ್ಯಕ್ತಿ ಶವ ಗುರುತಿಗೆ ಮನವಿ

Written By: Ramesh
Subscribe to Oneindia Kannada

ಕೊಪ್ಪಳ ಫೆಬ್ರವರಿ. 08 : ಕೊಪ್ಪಳ ಜಿಲ್ಲೆಯ ಹ್ಯಾಟಿ ಗ್ರಾಮದ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಫೆಬ್ರವರಿ 06 ರಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಹ್ಯಾಟಿ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ಮೃತನ ಸಾವಿನಲ್ಲಿ ಯಾವುದೇ ಸಂಶಯ ಕಂಡುಬಂದಿಲ್ಲ.

police requested identity the Unknown person dead body found in Tungabhadra river back water at Hyati

ಮೃತ ವ್ಯಕ್ತಿಯ ಚಹರೆ ವಿವರ ಇಂತಿದೆ : ಎತ್ತರ- ಸುಮಾರು 5 ಅಡಿ 06 ಇಂಚು. ಮಧ್ಯಮ ಮೈಕಟ್ಟು, ದುಂಡು ಮುಖ, ಕೆಂಪು ಮೈಬಣ್ಣ, ಕಪ್ಪು ತಲೆ ಕೂದಲು, ಕಪ್ಪು ಮೀಸೆ ಗಡ್ಡ ಇವೆ.

ಬಿಳಿ ಬೂದು ಬಣ್ಣದ ಗೆರೆಗಳ ಅರ್ಧ ತೋಳಿ ಶರ್ಟ್ ಧರಿಸಿದ್ದು, ಕಂದು ಬಣ್ಣದ ಶ್ಯಾಂಡೋ ಬನಿಯನ್, ಕೆಂಪು ಬಣ್ಣದ ಅಂಡರ್ ವೇರ್ ಹಾಗೂ ನೀಲಿ ಗೆರೆಗಳ ಕಾಟನ್ ಲುಂಗಿ ಧರಿಸಿದ್ದಾನೆ.

ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು, ಕೊಪ್ಪಳ ಕಂಟ್ರೋಲ್ ರೂಂ- 08539-230100, 230222, ಅಥವಾ ಪಿಎಸ್ಐ ಗ್ರಾಮೀಣ ಠಾಣೆ, ಕೊಪ್ಪಳ- 9480803746, ಅಥವಾ 08539-221333 ಕ್ಕೆ ಕರೆ ಮಾಡಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Unknown person dead body found in tungabhadra river back water at Hyati koppal district on Feb 06. The koppal district police requested to public identity the body.
Please Wait while comments are loading...