ಪೊಲೀಸರ ಪ್ರತಿಭಟನೆಗೆ ಆರ್‌ಟಿಐ ಕಾರ್ಯಕರ್ತರ ಬೆಂಬಲ

Written By:
Subscribe to Oneindia Kannada

ಬೆಂಗಳೂರು, ಹುಬ್ಬಳ್ಳಿ, ಮೇ 31: ಜೂನ್ 4 ರಂದು ನಡೆಯಲಿರುವ ಪೊಲೀಸರ ಪ್ರತಿಭಟನೆಗೆ ಆರ್ ಟಿಐ ಕಾರ್ಯಕರ್ತರು ಬೆಂಬಲ ನೀಡಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಪ್ರಶಾಂತಕುಮಾರ ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜೂನ್ 4 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪದ್ಮನಾಭನಗರದಿಂದ ಮುಖ್ಯಮಂತ್ರಿ ನಿವಾಸದವರೆಗೂ ಬೈಕ್ ನಲ್ಲಿ ಮೆರವಣಿಗೆ ಸಾಗಲಾಗುವುದು ಎಂದರು. [ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ]

bengaluru

ಸುಮಾರು 3 ದಶಕಗಳ ಕಾಲದಿಂದ ಪೊಲೀಸರ ನ್ಯಾಯಯುತ ಸಂವಿಧಾನಬದ್ಧ ಹಕ್ಕುಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ರಾಜ್ಯದಲ್ಲಿ ಸುಮಾರು 28 ಸಾವಿರ ಪೊಲೀಸ್ ಹುದ್ದೆಗಳು ಖಾಲಿಯಿವೆ ಈ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿಕೊಳ್ಳದೇ, ಈಗಾಗಲೇ ಇರುವ ಪೊಲೀಸ್ ಸಿಬ್ಬಂದಿಯಿಂದಲೇ ದುಡಿಸಿಕೊಳ್ಳುತ್ತಿರುವುದು ಅಮಾನವೀಯ ಕೃತ್ಯ ಎಂದು ಹೇಳಿದರು.

ಪೊಲೀಸರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭ ಧನಂಜಯ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.[ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಡಿ:
ಹುಬ್ಬಳ್ಳಿ: ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಜೂ. 4 ರಂದು ಹಮ್ಮಿಕೊಂಡಿರುವ ಪೊಲೀಸ್ ರ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ರಾಜ್ಯ ಸರಕಾರ ಪೊಲೀಸರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವುದಾಗಿ ತಿಳಿಸಿದೆ ಮತ್ತು ಅದಕ್ಕೆ ಬದ್ಧವಾಗಿ ಎಂದು ಪೊಲೀಸ್ ಕಮೀಷನರ್ ಹೇಳಿದರು.

hubballi

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Right to Information (RTI) activists offers full support to demands of police and urged the government of Karnataka to reach out to them and avoid situation of mass leaves which may lead to a law and order crisis in state.
Please Wait while comments are loading...