Karnataka police: ಪೊಲೀಸರ ವರ್ಗಾವಣೆಗೆ ಒಪ್ಪಿಗೆ, ನಿಯಮಗಳೇನು?

ಬೆಂಗಳೂರು, ಜುಲೈ 16: ಕರ್ನಾಟಕ ಸರ್ಕಾರ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ. ಪೊಲೀಸರ ವರ್ಗಾವಣೆಗೆ ಅನುಮತಿ ನೀಡಿದೆ. ವರ್ಗಾವಣೆಗೆ ನಿಯಮಗಳೇನು? ಎಂದು ಸಹ ವಿವರಣೆ ನೀಡಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹಸರಿನಲ್ಲಿ, ಜಿ. ಶ್ಯಾಮ ಹೊಳ್ಳ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ಸೇವಗಳು-ಬಿ) ಆದೇಶ ಹೊರಡಿಸಿದ್ದಾರೆ. ಆದೇಶ ಪೊಲೀಸ್ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿ/ ನೌಕರರ ವರ್ಗಾವಣೆ ಕುರಿತು ಆದೇಶ ಎಂಬ ವಿಷಯ ಒಳಗೊಂಡಿದೆ. ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವರ್ಗಾವಣೆ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

Police Officers Transfer In Karnataka Guidelines

ಸರ್ಕಾರವು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಲ್/ ಸಿಎಆರ್/ ಡಿಎಆರ್), ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ (ಸಿವಿಲ್/ ಸಿಎಆರ್/ ಡಿಎಆರ್), ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಲಿಪಿಕ ವೃಂದಗಳಾದ ಪ್ರಥಮ ದರ್ಜೆ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ/ ದಲಾಯತ್ ಹಾಗೂ ಗ್ರೂಪ್-ಡಿ ವೃಂದದ ಸಿಬ್ಬಂದಿಗಳನ್ನು ಪೊಲೀಸ್‌ ಇಲಾಖೆಯ ಒಂದು ಜಿಲ್ಲಾ/ ಘಟಕಗಳಿಗೆ ಇನ್ನೊಂದು ಜಿಲ್ಲಾ/ ಘಟಕಗಳಿಗೆ ಹಾಗೂ ಒಂದು ವಲಯ/ ನಗರ ಘಟಕಗಳಿಂದ ಇನ್ನೊಂದು ವಲಯ ಹಾಗೂ ನಗರ ಘಟಕಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2022 ಅನ್ನು ರಚಿಸಲಾಗಿದೆ.

ಪಸ್ತಾವನೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು 2022ರ ಅನುಸಾರ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ, ವರ್ಗಾವಣೆ ಮಾಡಲು ಪೂರಕವಾಗುವಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲು ಪೊಲೀಸ್‌ ಮಾಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಸರ್ಕಾರವನ್ನು ಕೋರಿರುತ್ತಾರೆ. ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಅವರ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರ ಈ ಆದೇಶಿಸಿದೆ.

ಸರ್ಕಾರ ಆದೇಶ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಸಂಬಂಧ ಹೊರಡಿಸಲಾಗಿರುವ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ (ವರ್ಗಾವಣೆ) (ವಿಶೇಷ) ನಿಯಮಗಳು, 2022ರ ಅನುಸಾರ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಮಾಡಲು ಈ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ವರ್ಗಾವಣೆ ಪ್ರಕ್ರಿಯಗಳನ್ನು ಕೈಗೊಳ್ಳಲು ಆದೇಶಿಸಿದೆ.

* ಅಂತರ್ ಜಿಲ್ಲಾ/ ಘಟಕ ವರ್ಗಾವಣೆ ಕುರಿತಂತೆ ಇಲಾಖೆಯಿಂದ ರೂಪಿಸಲಾಗಿರುವ ಅಧಿಕೃತ ಆನ್‌ಲೈನ್ ಪೋರ್ಟಲ್‌ನಲ್ಲಿ ಸಲ್ಲಿಕಯಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.

* ವರ್ಗಾವಣೆ ಬಯಸುವ ಘಟಕದಲ್ಲಿನ ಪ್ರತಿ ವೃಂದದಲ್ಲಿನ ಒಟ್ಟು, ರಿಕ್ತಸ್ಥಾನವು ಆ ಘಟಕದಿಂದ ಇತರ ಘಟಕಗಳಿಗೆ ವರ್ಗಾವಣೆ ಹೊಂದಿ ಹೋಗುವ ಸಿಬ್ಬಂದಿಗಳ ರಿಕ್ತಸ್ಥಾನ ಸೇರಿದಂತೆ ಶೇಕಡಾ 15ಕ್ಕಿಂತ ಹೆಚ್ಚಿರಬಾರದು.

* ಅಂತರ್‌ ಜಿಲ್ಲಾ/ ಘಟಕ ವರ್ಗಾವಣೆಗೆ ಸಂಪೂರ್ಣವಾಗಿ ಪ್ರತಿ ವೃಂದದಲ್ಲಿನ ಸೇವಾ ಜೇಷ್ಠತೆಯ ಆಧಾರದ ಮೇಲೆ ಮಾತ್ರ ಮೇಲ್ಕಂಡ ಶೇಕಡವಾರು ಪ್ರಮಾಣದಲ್ಲಿ ಅಧಿಕೃತ ಪೋರ್ಟಲ್‌ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸುವುದು.

* ಅದರಲ್ಲಿ ಮೊದಲನೇ ಆದ್ಯತೆ ಪತಿ-ಪತ್ನಿ ಪ್ರಕರಣಕ್ಕೆ ನೀಡಲಾಗುವುದು.

* ಎಲ್ಲಾ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಉಭಯ ಘಟಕಾಧಿಕಾರಿಗಳ ನಿರಾಕ್ಷೇಪಣಾ ಪತ್ರವು ಕಡ್ಡಾಯವಾಗಿರುತ್ತದೆ.

* ಇಲಾಖಾ ವಿಚಾರಣೆ ಕ್ರಿಮಿನಲ್/ ನ್ಯಾಯಂಗ ನಡಾವಳಿಗಳನ್ನು ಪ್ರಾರಂಭಿಸಲಾಗಿದ್ದಲ್ಲಿ ಅಥವಾ ಬಾಕಿ ಇದ್ದಲ್ಲಿ ಅಥವ ಅಭಿಯೋಜನೆಗೊಳಿಸಲು ಉದ್ದೇಶಿಸಿದ್ದಲ್ಲಿ ಅಂತಹ ಸಿಬ್ಬಂದಿಗಳು ವರ್ಗಾವಣೆಗೆ ಅರ್ಹರಿರುವುದಿಲ್ಲ.

* ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಹಾಗೂ ಘಟಕದಲ್ಲಿ ಕನಿಷ್ಠ 7 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸಿಬ್ಬಂದಿಗಳು (ಮುಂಬಡ್ತಿ ಹುದ್ದೆಯಲ್ಲಿರುವ ಸಿಬ್ಬಂದಿಗಳು ಸೇರಿದಂತೆ) ಮಾತ್ರ ವರ್ಗಾವಣೆಗೆ ಅರ್ಹರಾಗುತ್ತಾರೆ. (ಮಾಜಿ ಸೈನಿಕ ಪ್ರಕರಣದಲ್ಲಿ ಕನಿಷ್ಠ 3 ವರ್ಷಗಳು).

* ಅಂತರ್ ಜಿಲ್ಲಾ/ ಘಟಕ ವರ್ಗಾವಣೆಯನ್ನು ಕೋರಿಕೆ ಮೇಲೆ ಮಾಡುವುದರಿಂದ ಜೇಷ್ಠತೆಯನ್ನು ಬಿಟ್ಟುಕೊಡುವ ಷರತ್ತಿಗೊಳಪಟ್ಟು ಮಾಡಲಾಗುವುದು. ಅಂತಹ ನೌಕರರ ಜೇಷ್ಠತೆಯನ್ನು ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್‌ನ ಕೊನೆಯವರಾಗಿ ಪರಿಗಣಿಸಲಾಗುವುದು.

* ಸರ್ಕಾರಿ ನೌಕರನು ವಗ ರುವಾಗ ಕೆ.ಜಿ.ಐ.ಡಿ ಇಲಾಖೆಯಿಂದ ನೀಡಿದ ಮೊದಲ ಕೆ.ಜಿ.ಐ.ಡಿ ಸಂಖ್ಯೆಯನ್ನು ಸದರಿ ನೌಕರನ ಅಧಿಕೃತ ಐಡಿಯಾಗಿ (Employee ID) ಪರಿಗಣಿಸಿದ್ದು, ಸದರಿ ಕೆ.ಜಿ.ಐ.ಡಿ ಸಂಖ್ಯೆಯಿಂದ ಸಲ್ಲಿಸಲಾದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.

* ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಮೊದಲ ಅಧಿಕೃತ ಅರ್ಜಿಯನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಹುದು ಅಥವಾ ಪರಿಗಣಿಸದೇ ಇರಬಹುದು. ಅಂತರ ಜಿಲ್ಲಾ/ ಅಂತರ ತೀವ್ರತಾ ಘಟಕ ವರ್ಗಾವಣೆಯನ್ನು ಸಾಮಾನ್ಯ ವರ್ಗಾವಣೆಯ ಸಂದರ್ಭದಲ್ಲಿ ಮಾತ್ರ ಮಾಡಲಾಗುವುದು.

* ಪೊಲೀಸ್ ಸಿಬ್ಬಂದಿಗಳನ್ನು ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡಲು ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ರವರು ಮಾತ್ರ ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ. ಈ ಆದೇಶ ಜಾರಿಗೆ ಬಂದ ದಿನಾಂಕದಿಂದ ಈ ಕುರಿತಂತೆ ಹೊರಡಿಸಲಾದ ಈ ಹಿಂದಿನ ಆದೇಶ/ ಸುತ್ತೋಲೆಗಳು ವ್ಯತಿರಿಕ್ತ ಸಂದರ್ಭಗಳಲ್ಲಿ ಮಾರ್ಪಡುಗೊಳ್ಳುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+