ಈ ಭಾಗದವರಿಗೆ ಜಾಕ್‌ಪಾಟ್; ಸಿಗಲಿದೆ 12,000 ಉದ್ಯೋಗ, ₹758 ಕೋಟಿ ಹೂಡಿಕೆ ಎಲ್ಲಿ?
ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಪೊದ್ದಾರ್ ಪ್ಲಂಬಿಂಗ್ ಎಂಬ ಕಂಪನಿಯು ಕರ್ನಾಟಕದಲ್ಲಿ ಬರೋಬ್ಬರಿ ₹758 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದು, ಇದರಿಂದ 12,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ. ಇಂದು ನಡೆದ ಸಭೆ ಬಳಿಕ ಎಂಬಿ ಪಾಟೀಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಶಿರ್ವಾದ್ ಪೈಪ್ಸ್‌ನ ಪೊದ್ದಾರ್ ಕುಟುಂಬದಿಂದ ಪ್ರವರ್ತನೆಗೊಳ್ಳುತ್ತಿರುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕದಲ್ಲಿ ತನ್ನ ಹೂಡಿಕೆಯನ್ನು ₹492 ಕೋಟಿಯಿಂದ ₹758 ಕೋಟಿ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾಪಿಸಿದೆ ಎಂಬುದನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದಿದ್ದಾರೆ.

ಕೋಲಾರದ ಮೇಮಗಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ (ಹಂತ 2) ನಾವು ಕಂಪನಿಗೆ 33 ಎಕರೆಗಳನ್ನು ಹಂಚಿಕೆ ಮಾಡಿದ್ದೇವೆ. ಅಲ್ಲಿ ಅವರು ಆಗಸ್ಟ್ 2026ರೊಳಗೆ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಇದರೊಂದಿಗೆ ಪಡೆದ ಬೆಂಬಲದಿಂದ ಉತ್ತೇಜಿತರಾಗಿ ಅವರು ವಿಜಯಪುರದಲ್ಲಿ ತಮ್ಮ ಎರಡನೇ ಘಟಕವನ್ನು ಸ್ಥಾಪಿಸಲು ಸಹ ಪ್ರಸ್ತಾಪಿಸಿದ್ದಾರೆ.
ಈ ವಿಸ್ತರಣೆಯು 3,000 ನೇರ ಮತ್ತು 9,000 ಪರೋಕ್ಷ ಉದ್ಯೋಗಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಕಂಪನಿಯು ವಾರ್ಷಿಕ ₹1,500 ಕೋಟಿ ವಹಿವಾಟು ಮತ್ತು ಮುಂದಿನ ದಶಕದಲ್ಲಿ ₹3,000 ಕೋಟಿ ತೆರಿಗೆ ಆದಾಯದ ಕೊಡುಗೆಯನ್ನು ಯೋಜಿಸಿದೆ. ವೇಮಗಲ್‌ನಲ್ಲಿ ನಿರ್ಮಾಣ ಮತ್ತು ಯಂತ್ರೋಪಕರಣಗಳ ಸ್ಥಾಪನೆ ಈಗಾಗಲೇ ನಡೆಯುತ್ತಿದೆ.
ಕಂಪನಿಯು ಭೂಮಿ, ಮೂಲಸೌಕರ್ಯ ಮತ್ತು ಉಪಕರಣಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಉತ್ತಮ ಗುಣಮಟ್ಟದ ಕೈಗಾರಿಕಾ ಉತ್ಪಾದನೆಯ ಕೇಂದ್ರವಾಗಿ ಕರ್ನಾಟಕದ ಖ್ಯಾತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕರ್ನಾಟಕವು ದೀರ್ಘಾವಧಿಯ, ಅಂತರ್ಗತ ಬೆಳವಣಿಗೆಯಲ್ಲಿ ನಂಬಿಕೆ ಇಡುವ ಭವಿಷ್ಯದ ಹೂಡಿಕೆದಾರರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ ಎಂದಿದ್ದಾರೆ.
ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ. ಕಂಪನಿಗೆ ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ 33 ಎಕರೆ ಜಮೀನು ನೀಡಿದ್ದು, 2026ರ ಆಗಸ್ಟ್ ಹೊತ್ತಿಗೆ ಇಲ್ಲಿ ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ಘಟಕ ಆರಂಭಿಸಲಿದೆ ಎಂದಿದ್ದಾರೆ.
3000 ನೇರ ಉದ್ಯೋಗ
ಈ ಸಂಬಂಧ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಪೊದ್ದಾರ್ ಮತ್ತು ನಿರ್ದೇಶಕರಾದ ವರುಣ್ ಪೊದ್ದಾರ್ ಅವರು ಈ ದಿನ ಭೇಟಿಯಾಗಿ ಮಾತುಕತೆ ನಡೆಸಿದರು. ಕಂಪನಿಯು ಈ ಹಿಂದೆ 492 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758 ಕೋಟಿ ರೂ.ಗೆ ಏರಿಸಲು ಅನುಮೋದನೆ ಕೋರಿದೆ. ಈ ಯೋಜನೆಯಿಂದ 3 ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂ.ಗಳಿಗೆ ಕೊಂಡೊಯ್ಯುವುದಾಗಿ ಅದು ಹೇಳಿದೆ. ಇದರಿಂದ ಸರಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಬರಲಿದೆ. ದೀರ್ಘಕಾಲಿನ ಮತ್ತು ಸರ್ವರನ್ನೂ ಒಳಗೊಂಡ ಬೆಳವಣಿಗೆಯಲ್ಲಿ ಕರ್ನಾಟಕವು ನಂಬಿಕೆ ಇರಿಸಿದ್ದು, ಹೂಡಿಕೆದಾರರನ್ನು ನಿರಂತರವಾಗಿ ಆಕರ್ಷಿಸುತ್ತಲೇ ಇದೆ ಎಂದಿದ್ದಾರೆ.












Click it and Unblock the Notifications