ರಾಕೇಶ್ ನಿಧನಕ್ಕೆ ಮೋದಿ ಸೇರಿದಂತೆ ಗಣ್ಯರ ಸಂತಾಪ

Subscribe to Oneindia Kannada

ಬೆಂಗಳೂರು, ಜುಲೈ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ (39) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚನೆ ಮಾಡಿದ್ದಾರೆ.

ಸಿದ್ದರಾಮಯ್ಯ ಕುಟುಂಬಕ್ಕೆ ದೇವರು ಆಘಾತ ಭರಿಸುವ ಶಕ್ತಿ ನೀಡಲಿ ಎಂದು ಮೋದಿ ಪ್ರಾರ್ಥನೆ ಮಾಡಿದ್ದಾರೆ. ಕರಳುಬೇನೆ ಕಾಯಿಲೆಗೆ ತುತ್ತಾಗಿ ಚೇತರಿಕೆ ಕಾಣದೆ ರಾಕೇಶ್ ಶನಿವಾರ ನಿಧನರಾದ ಹಿನ್ನೆಲೆಯಲ್ಲಿ ಮೋದಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಕೇಶ್ ಆರೋಗ್ಯದ ಬಗ್ಗೆ ಬೆಲ್ಜಿಯಂ ನ ಪ್ರಮುಖರೊಂದಿಗೆ ಮಾತನಾಡಿದ್ದರು.[ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ]

PM Modi, Yeddyurappa condole death of Rakesh Siddaramaiah

ಕೇಂದ್ರ ಸಚಿವ ಅನಂತ್ ಕುಮಾರ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ, ಸಂಸದ ಬಿಎಸ್ ಯಡಿಯೂರಪ್ಪ, ಬಿಜೆಪಿ ಮುಖಂಡ ಸಿಟಿ ರವಿ ಸೇರಿದಂತೆ ಅನೇಕರು ರಾಕೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದೊಂದು ಆಘಾತಕಾರಿ ಸುದ್ದಿ. ಸಿದ್ದರಾಮಯ್ಯ ಕುಟುಂಬಕ್ಕೆ ಆಘಾತ ಭರಿಸುವ ಶಕ್ತಿ ಬರಲಿ.-ಬಿ ಎಸ್ ಯಡಿಯೂರಪ್ಪ.


ಯುವ ಜೀವವೊಂದು ಅರ್ಧದಾರಿಲ್ಲೇ ಪ್ರಯಾಣ ಮುಗಿಸಿದೆ-ಖೂಷ್ಬು


ರಾಕೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ-ಸಂಜನಾ, ಚಿತ್ರ ನಟಿ


ರಾಕೇಶ್ ಸಾವು ನೋವು ತಂದಿದೆ-ವೆಂಕಯ್ಯ ನಾಯ್ಡು

ರಾಕೇಶ್ ಅವರ ಸಾವು ರಾಜ್ಯಕ್ಕೆ ನಷ್ಟ ಉಂಟುಮಾಡಿದೆ-ಎಚ್. ಆಂಜನೇಯ.

ಸಿದ್ದರಾಮಯ್ಯ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ದೊರೆಯಲಿ-ಅನಂತ್ ಕುಮಾರ್, ಕೇಂದ್ರ ಸಚಿವ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah's eldest son Rakesh breathed his last in Brussels, Belgium on Saturday. Rakesh passed away at Belgium University Hospital due to multiple organ failure. Twitter poured in with condolences for the family.
Please Wait while comments are loading...