PM kisan 18th installment: ಪಿ.ಎಂ ಕಿಸಾನ್ 2,000 ಸಾವಿರ ಯಾವಾಗ ಬರುತ್ತೆ ?
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಪಿ.ಎಂ ಕಿಸಾನ್‌ನ (pm kisan) (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 18ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಪಿ.ಎಂ ಕಿಸಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ವಾರ್ಷಿಕ 6 ಸಾವಿರ ರೂಪಾಯಿ ಮೊತ್ತದ ಹಣವನ್ನು ಮೂರು ಬಾರಿ (ಮೂರು ಕಂತುಗಳ ರೂಪದಲ್ಲಿ) ಬಿಡುಗಡೆ ಮಾಡುತ್ತಿದೆ. ಇದೀಗ 18ನೇ ಕಂತಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ವೊಂದನ್ನು ನೀಡಿದೆ.
ಕೇಂದ್ರ ಸರ್ಕಾರವು 2019ರಿಂದ ಪಿ.ಎಂ ಕಿಸಾನ್ ಯೋಜನೆಯನ್ನು ಜಾರಿ ಮಾಡಿದೆ. ರೈತರ ಬೆಳೆಗಳಿಗೆ ಹಾಗೂ ಕೃಷಿಗೆ ಪೂರಕವಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರವು ಈ ಯೋಜನೆಯನ್ನು ಪರಿಚಯಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಪಿ.ಎಂ ಕಿಸಾನ್ ಯೋಜನೆಯೂ ಒಂದಾಗಿದೆ. ಈಚೆಗಷ್ಟೇ ಪಿ.ಎಂ ಕಿಸಾನ್‌ನ 17ನೇ ಕಂತು ಬಿಡುಗಡೆಯಾಗಿದ್ದು, ಇದೀಗ ಇನ್ನು ಕೆಲವೇ ದಿನಗಳಲ್ಲಿ ಪಿ.ಎಂ ಕಿಸಾನ್‌ನ 18ನೇ ಕಂತು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರವು ಪಿ.ಎಂ ಕಿಸಾನ್ ಯೋಜನೆಯ ಅನುದಾನವನ್ನು ನವೆಂಬರ್ ತಿಂಗಳಿನಲ್ಲೇ ಬಿಡುಗಡೆ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಇದೀಗ ಯೋಜನೆಯ ಹಣ ಬಿಡುಗಡೆ ಅಕ್ಟೋಬರ್‌ಗೆ ಹೋಗಿದೆ. ಅಕ್ಟೋಬರ್‌ನಲ್ಲಿ ರೈತರ ಖಾತೆಗೆ ಪಿ.ಎಂ ಕಿಸಾನ್ ಹಣ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಯಾವಾಗ ಜಾರಿ ಮಾಡಲಾಗಿತ್ತು ?
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರವು 2019ರಲ್ಲೇ ಜಾರಿ ಮಾಡಿದ್ದು, ಅಂದಿನಿಂದ ಇಲ್ಲಿಯವರೆಗೆ ಈ ಯೋಜನೆ ಮುಂದುವರಿದಿದೆ. ಈ ಯೋಜನೆಯು ದೇಶದಾದ್ಯಂತ ಜಾರಿಯಲಿದ್ದು, ದೇಶದ ಎಲ್ಲಾ ಭಾಗದ ರೈತರಿಗೂ ಆನ್‌ಲೈನ್‌ನ ಮೂಲಕ ಪಿ.ಎಂ ಕಿಸಾನ್ ಹಣ ಬಿಡುಗಡೆಯಾಗುತ್ತಿದೆ. ಕೇಂದ್ರ ಸರ್ಕಾರವು ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದೆ. ಮೂರು ಕಂತುಗಳಲ್ಲಿ ಹಣ ಜಮೆ ಮಾಡಲಾಗುತ್ತಿದೆ. ಏಪ್ರಿಲ್‌ನಿಂದ ಜುಲೈ, ಆಗಸ್ಟ್ ಮತ್ತು -ನವೆಂಬರ್ ಹಾಗೂ ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿಹಣ ಬಿಡುಗಡೆಯಾಗುತ್ತಿದೆ. ಪ್ರತಿ ಬಾರಿಯೂ 2 ಸಾವಿರದಂತೆ ಆರ್ಥಿಕ ನೆರವು ನೀಡಲಾಗುತ್ತಿದೆ.
9 ಕೋಟಿ ರೈತರಿಗೆ ಅನುಕೂಲ
ಪಿ.ಎಂ ಕಿಸಾನ್ ಯೋಜನೆಯಿಂದಾಗಿ ದೇಶದ ಬರೋಬ್ಬರಿ 9 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯ 17ನೇ ಕಂತಿನ ಹಣವನ್ನು 2024ರ ಜೂನ್ 18ಕ್ಕೆ ಬಿಡುಗಡೆ ಮಾಡಲಾಗಿತ್ತು. ಇದೀಗ 18ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ದೇಶದಾದ್ಯಂತ ಎಲ್ಲಾ 9 ಕೋಟಿ ರೈತರಿಗೂ ಏಕಕಾಲಕ್ಕೆ ಹಣ ಬಿಡುಗಡೆಯಾಗುತ್ತದೆ. ಇನ್ನು ನೀವು ಪಿ.ಎಂ ಕಿಸಾನ್‌ನ ಹಣ ಜಮೆಯಾಗಿದೆಯೇ ಇಲ್ಲವೇ ಎಂದು ನೋಡಲು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ (https://pmkisan.gov.in/)ನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.












Click it and Unblock the Notifications