'ಗೋರಕ್ಷಣೆಯ ಮನಸ್ಸಿದ್ದರೆ ಅಭಯಾಕ್ಷರ ಆಂದೋಲನದಲ್ಲಿ ಕೈಜೋಡಿಸಿ'

By: ಶಿಶಿರ ಅಂಗಡಿ
Subscribe to Oneindia Kannada

ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಇಂಗಿತವೇ.. ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ಹಂಬಲವೇ..? ನಾವೆಲ್ಲ 'ನನ್ನಿಂದೇನು ಮಾಡಲು ಸಾಧ್ಯ' ಎಂದು ಯೋಚಿಸುತ್ತಲೇ‌ ಸಮಯವನ್ನು ದೂಡುತ್ತಿರುತ್ತೇವೆ.

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ, ಸ್ಪಷ್ಟ ಸಂದೇಶ ರವಾನಿಸಿದ ಮೋದಿ

ಯೋಚಿಸುವ ಸಮಯದಲ್ಲೇ ನಾವು ಕ್ರಾಂತಿಯನ್ನೇ ಮಾಡಬಹುದು, ಸಾಮಾಜಿಕ ಬದಲಾವಣೆ ಉಂಟುಮಾಡಬಹುದು. ನಾವು ಕುಳಿತಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ತಾಸುಗಳ ಸಮಯ ಕೊಡುವ ಮೂಲಕ‌ ಗೋಮಾತೆಯ ರಕ್ಷಣೆಗೆ ಮಹತ್ತರ‌ ಕೊಡುಗೆಯನ್ನು ನೀಡಬಹುದು, ತನ್ಮೂಲಕ ಭಾರತ ಮಾತೆಗೆ ಹಿತವನ್ನುಂಟುಮಾಡಬಹುದು. ಹೇಗೆ ಅಂತೀರಾ?

Please join your hands to protect cow campaign

ಅಕ್ಷರಯೋಧರಾಗಿ #ಅಭಯಾಕ್ಷರ ಆಂದೋಲನದಲ್ಲಿ ಕೈಜೋಡಿಸಿ. ಅಕ್ಷರ ಕ್ರಾಂತಿಯ ಮೂಲಕ ಗೋವುಗಳ ಬಾಳಲ್ಲಿ ಸಂಕ್ರಾಂತಿಯ ಮೂಡಿಸೋಣ.

ಗೋ ಭಕ್ತರೆಲ್ಲ ಬೀದಿಬೀದಿಗಳಲ್ಲಿ ಮನೆಮನೆಗೆ ತೆರಳಿ ಗೋರಕ್ಷಣೆಯ ಸಪ್ತ ಸೂತ್ರಗಳ ಕುರಿತು ಜಾಗೃತಿ ಮೂಡಿಸುತ್ತಾ, ಗೋಹತ್ಯೆ ನಿಷೇಧಿಸುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಹಕ್ಕೊತ್ತಾಯ ಸಲ್ಲಿಸುವ #ಅಭಯಾಕ್ಷರ ಅರ್ಜಿಗಳಿಗೆ ಹಸ್ತಾಕ್ಷರ ಸಂಗ್ರಹಿಸುತ್ತಿದ್ದಾರೆ.

ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು

ಈಗಾಗಲೇ ಬೆಂಗಳೂರಲ್ಲಿ ಸುಮಾರು ಮೂರು ಲಕ್ಷ ಹಸ್ತಾಕ್ಷರ ಸಂಗ್ರಹವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ, ದೇಶಾದ್ಯಂತ ಅಭಿಯಾನ ಪ್ರಾರಂಭಗೊಳ್ಳಲಿಕ್ಕಿದೆ. ಈ ಅಭಿಯಾನಕ್ಕಾಗಿ ದೇಶದ ಜನತೆಯನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಮೂಲಕ ಸಜ್ಜುಗೊಳಿಸಬೇಕಿದೆ.

Please join your hands to protect cow campaign

ಅಕ್ಷರದೀಕ್ಷೆ

ನಾವು ಕುಳಿತಲ್ಲಿಂದಲೇ ಸಾಮಾಜಿಕ ಜಾಲಣಗಳಲ್ಲಿ, ಪತ್ರಿಕೆಗಳಲ್ಲಿ, ಮಾಧ್ಯಮದಲ್ಲಿ ಗೋವಿನ ಮಹತ್ವ ಮತ್ತು ರಕ್ಷಣೆಯ ಕುರಿತು ಬರೆಯುವುದು ಮತ್ತು ಬೇರೆಯವರು ಬರೆದಿದ್ದನ್ನು ಹಂಚುವ ಕಾರ್ಯವನ್ನು ಮಾಡುವವರು ಅಕ್ಷರ ದೀಕ್ಷೆಗೆ ಅರ್ಹರು. ಅಕ್ಷರ ದೀಕ್ಷೆ ಪಡೆದವರು ಅಕ್ಷರ ಸೇನೆಯ ಅಕ್ಷರ ಯೋಧರಾಗುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಾರಕ್ಕೊಮ್ಮೆ ಅಭಿಯಾನ

ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ದೇಶಾದ್ಯಂತ ನೂರಾರು ಗೋ ಭಕ್ತರನ್ನು ಹಾಗೂ ಅಕ್ಷರ ಯೋಧರನ್ನು ಸಂಯೋಜಿಸಿ, ಅವರ ಮೂಲಕ ಪ್ರತಿ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗೋವಿನ ಮಹತ್ವದ ಕುರಿತು, ಗೋಮಾಂಸದ ದುಷ್ಪರಿಣಾಮಗಳ ಕುರಿತು ದೊಡ್ಡ ಮಟ್ಟದ ಜನಜಾಗೃತಿ ಅಭಿಯಾನ ಮಾಡಲಾಗುತ್ತದೆ.

Please join your hands to protect cow campaign

ವಾರಕ್ಕೆ ಒಂದು ದಿನ, ಒಂದು ತಾಸಿನ ಮಟ್ಟಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಹಿತಿ ವಿನಿಮಯ ಆಗಲಿದೆ. ತಿಂಗಳಿಗೊಮ್ಮೆ ಒಂದೊಂದು ವಿಷಯಗಳ ಕುರಿತು ಟ್ವಿಟ್ಟರ್ ಟ್ರೆಂಡಿಂಗ್ ಮಾಡಲಾಗುವುದು.

ಇವತ್ತಿನ ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಗೋಭಕ್ತರು ಪಾಲ್ಗೊಂಡಿದ್ದು, ಐದು ಸಾವಿರಕ್ಕೂ ಅಧಿಕ ಟ್ವೀಟ್ ಗಳು ಬಂದಿದ್ದು, ಟ್ರೆಂಡಿಂಗ್ ಕುರಿತು ನಮ್ಮ ಪ್ರಯತ್ನವಿಲ್ಲದೇ #ProtectWithPen ಹ್ಯಾಷ್ ಟ್ಯಾಗ್ ರಾಷ್ಟ್ರಮಟ್ಟದಲ್ಲಿ ಒಂಬತ್ತನೇ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು. ಭಾರತದಲ್ಲಷ್ಟೇ ಅಲ್ಲದೇ ಇತರ ದೇಶಗಳಿಂದಲೂ ಅಪಾರ ಬೆಂಬಲ ವ್ಯಕ್ತವಾಯಿತು.

ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಗೋ ರಕ್ಷಣೆಯ ಕುರಿತು ಆಸಕ್ತಿ ಹೊಂದಿರುವ ಎಲ್ಲರಿಗೂ ಮುಕ್ತ ಅವಕಾಶ ಇದೆ. ದೇಶಕ್ಕೆ ಒಳಿತು ಮಾಡುವ ಮನಸ್ಸಿದ್ದರೆ ಸಾಕು. ನಾವು ಗೋವಿನ ಮಹತ್ವವನ್ನು ಸಾರುವ ಬರಹಗಳನ್ನು ಬರೆಯುವುದು ಅಥವಾ ಬರಹಗಳಿಗೆ ಕಾಮೆಂಟ್ ಮತ್ತು ಷೇರ್ ಮಾಡುವ ಮನಸ್ಸು ಮತ್ತು ಸಮಯ ಇದ್ದಲ್ಲಿ, ನಮ್ಮನ್ನು ಸಂಪರ್ಕಿಸಿ.

A Man Arrest In Maharashtra For Having Sex With Cow | Oneindia Kannada

ವಿಶ್ವದೆಲ್ಲೆಡೆ ಗೋವಿನ ಕಂಪನ್ನು ಹರಡುತ್ತಾ, ಅಭಯಾಕ್ಷರ ಅಭಿಯಾನವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿ, ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸುವ ಮೂಲಕ ಗೋಹತ್ಯೆಗೆ ಅಂತ್ಯ ಹಾಡೋಣ. ಹೀಗೆ ಭಾರತಕ್ಕೊಂದು ದೊಡ್ಡ ಕೊಡುಗೆ ನೀಡೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Please spare your few minutes to participate in protect cow campaign. Here is the details of campaign and how to participate in campaign.
Please Wait while comments are loading...