ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟ್ ಬೆಲ್ಟ್ ದಂಡ ಸಂಗ್ರಹಿಸುವಾಗ ಕಾರಿನ ಮಾದರಿ ಪರಿಗಣಿಸಲು ಮನವಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 24: ಕಾರಿನ ಹಿಂಬದಿ ಸೀಟಿನಲ್ಲಿರುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದಲ್ಲಿ 1,000 ರೂಪಾಯಿ ದಂಡ ವಿಧಿಸುವ ಸಂದರ್ಭದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಾಹನಗಳನ್ನು ಪ್ರತ್ಯೇಕಿಸಿ ಎಂದು ಟ್ಯಾಕ್ಸಿ ಚಾಲಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೀಟ್ ಬೆಲ್ಟ್ ಇಲ್ಲದ ಹಳೆಯ ವಾಹನಗಳನ್ನು ಓಡಿಸುವವರಿಗೂ ಈ ನಿಯಮ ಹೇಗೆ ಅನ್ವಯಿಸುತ್ತದೆ ಎಂದು ಚಾಲಕರು ಗೊಂದಲದಲ್ಲಿದ್ದಾರೆ. 2002 ರಲ್ಲಿ ಪರಿಚಯಿಸಲಾದ ಕೇಂದ್ರೀಯ ಮೋಟಾರು ವಾಹನ ನಿಯಮಗಳ (ಸಿಎಂವಿಆರ್‌) ನಿಯಮ 125, ಎಲ್ಲಾ ಎಂ 1 ವರ್ಗದ ವಾಹನಗಳು ಅಥವಾ ಎಂಟು ಆಸನಗಳ ಕಾರುಗಳು ಸೀಟ್ ಬೆಲ್ಟ್‌ಗಳನ್ನು ಹೊಂದಿರಬೇಕು ಎಂದು ಹೇಳಿದರೆ, ಅದರ ಬಳಿಕ ಹೊರಡಿಸಿದ ಪರಿಷ್ಕೃತ ಆದೇಶದಲ್ಲಿ ಎಲ್ಲಾ ಪ್ರಯಾಣಿಕರು ಸೀಟ್‌ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದು ಟ್ಯಾಕ್ಸಿ ಚಾಲಕರನ್ನು ಬೆಚ್ಚಿಬೀಳಿಸಿದೆ.

ಪ್ರಯಾಣಿಕರೇ ಎಚ್ಚರ, ಕಾರಿನ ಹಿಂಬದಿ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ, ಇಲ್ಲ 1,000 ರೂ ದಂಡ!ಪ್ರಯಾಣಿಕರೇ ಎಚ್ಚರ, ಕಾರಿನ ಹಿಂಬದಿ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ, ಇಲ್ಲ 1,000 ರೂ ದಂಡ!

ಈ ಬಗ್ಗೆ ಕರ್ನಾಟಕ ಚಾಲಕ ಒಕ್ಕೂಟದ ಜಿ ನಾರಾಯಣಸ್ವಾಮಿ ಮಾತನಾಡಿ, "ಟ್ಯಾಕ್ಸಿ ಚಾಲಕರು ಸುರಕ್ಷತಾ ಬೆಲ್ಟ್‌ಗಳನ್ನು ಧರಿಸಲು ಹಿಂಬದಿಯಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಒತ್ತಾಯಿಸುವಂತಿಲ್ಲ. ನಾವು ಈ ಸಮಸ್ಯೆಯನ್ನು ಚರ್ಚಿಸಿದ್ದೇವೆ ಮತ್ತು ಟ್ಯಾಕ್ಸಿಗಳಲ್ಲಿ, ಚಾಲಕರಿಂದ ದಂಡವನ್ನು ಸಂಗ್ರಹಿಸಬಾರದು. ಆದರೆ ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸಬೇಕು ಎಂದು ಮನವಿ ಮಾಡಲು ಅಧಿಕಾರಿಗಳನ್ನು ಸಂಪರ್ಕಿಸಲು ನಿರ್ಧರಿಸಿದ್ದೇವೆ," ಎಂದರು.

ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು ಎಂದು ಒತ್ತಾಯಿಸುವಾಗ ಪ್ರಯಾಣಿಕರು ಚಾಲಕರು ಜಗಳವಾಡುವ ಅಪಾಯವಿದೆ. ಪ್ರಯಾಣಿಕರಿಗೆ ಧೂಮಪಾನ ಮಾಡಬೇಡಿ ಅಥವಾ ಕಿಟಕಿಯ ಹೊರಗೆ ಉಗುಳಬೇಡಿ ಎಂದು ಹೇಳುವುದಕ್ಕಾಗಿ ನಾವು ಈಗಾಗಲೇ ಸಾಕಷ್ಟು ಕಿರುಕುಳವನ್ನು ಎದುರಿಸುತ್ತಿದ್ದೇವೆ. ಓಲಾ ಅಥವಾ ಉಬರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಓಡುವ ಚಾಲಕರು ರೇಟಿಂಗ್‌ಗಳನ್ನು ಅವಲಂಬಿಸಿರುತ್ತಾರೆ. ಪದೇ ಪದೇ ಪ್ರಯಾಣಿಕರ ದೂರುಗಳು ಸವಾರಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಅಥವಾ ಅಗ್ರಿಗೇಟರ್‌ಗಳಿಂದ ಕಪ್ಪು ಪಟ್ಟಿಗೆ ಕಾರಣವಾಗಬಹುದು ಎಂದು ನಾರಾಯಣಸ್ವಾಮಿ ಹೇಳಿದರು.

 ಐಟಿ ವಲಯದ ಬೇಡಿಕೆಯ ಮೇರೆಗೆ ಕಾರುಗಳಲ್ಲಿ ಸೀಟ್‌ಬೆಲ್ಟ್‌

ಐಟಿ ವಲಯದ ಬೇಡಿಕೆಯ ಮೇರೆಗೆ ಕಾರುಗಳಲ್ಲಿ ಸೀಟ್‌ಬೆಲ್ಟ್‌

ಕರ್ನಾಟಕದಲ್ಲಿ 15 ವರ್ಷಕ್ಕಿಂತ ಹಳೆಯದಾದ 67,000 ಟ್ಯಾಕ್ಸಿಗಳು ಸೇರಿದಂತೆ 13.2 ಲಕ್ಷ ಕಾರುಗಳಿವೆ. ಟ್ಯಾಕ್ಸಿ ನಿರ್ವಾಹಕರು 10 ವರ್ಷಗಳ ಹಿಂದೆ ತಯಾರಿಸಲಾದ ಅನೇಕ ಮಧ್ಯಮ ಶ್ರೇಣಿಯ ಮತ್ತು ಎಕಾನಮಿ ವಾಹನಗಳ ಆಸನಗಳ ಹಿಂಭಾಗಕ್ಕೆ ಸುರಕ್ಷತಾ ಬೆಲ್ಟ್‌ಗಳನ್ನು ಅಳವಡಿಸಿಲ್ಲ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಟೂರಿಸ್ಟ್ ಆಪರೇಟರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾತನಾಡಿ, 2007- 08ರಲ್ಲಿ ಐಟಿ ವಲಯದ ಉದ್ಯೋಗಿಗಳ ಬೇಡಿಕೆಯ ಮೇರೆಗೆ ಉನ್ನತ ಮಟ್ಟದ ಕಾರು ತಯಾರಕರು ಸೀಟ್ ಬೆಲ್ಟ್‌ಗಳನ್ನು ಸೇರಿಸಲು ಪ್ರಾರಂಭಿಸಿದರು.

ಬರೀ ಒಂದು ಯುರೋಗೆ ನಿಸ್ಸಾನ್‌ ಕಾರು ತಯಾರಿಕಾ ಘಟಕ ಮಾರಾಟ!ಬರೀ ಒಂದು ಯುರೋಗೆ ನಿಸ್ಸಾನ್‌ ಕಾರು ತಯಾರಿಕಾ ಘಟಕ ಮಾರಾಟ!

 ಟ್ಯಾಕ್ಸಿ ಚಾಲಕರಲ್ಲಿ ಆತಂಕ

ಟ್ಯಾಕ್ಸಿ ಚಾಲಕರಲ್ಲಿ ಆತಂಕ

ಹೈ ಎಂಡ್ ಕಾರುಗಳು ಈಗ 10 ವರ್ಷಗಳಿಂದ ಹಿಂದಿನ ಸೀಟ್‌ಗಳಿಗೆ ಸುರಕ್ಷತಾ ಬೆಲ್ಟ್‌ಗಳನ್ನು ಹೊಂದಿವೆ. ಆದರೆ ಇತ್ತೀಚಿನವರೆಗೂ, ಆರ್ಥಿಕ ದರ್ಜೆಯ ವಾಹನಗಳು ಕ್ರಿಯಾತ್ಮಕ ಸೀಟ್ ಬೆಲ್ಟ್‌ಗಳನ್ನು ಹೊಂದಿರಲಿಲ್ಲ. ಇದು ಖಾಸಗಿ ಕಾರುಗಳ ಮಾಲೀಕರು ಹಾಗೂ ಟ್ಯಾಕ್ಸಿ ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಲಿದೆ ಎಂದು ಹೊಳ್ಳ ಹೇಳಿದರು.

 ಈ ಕ್ರಮವು ಅಗತ್ಯ: ಅಧಿಕಾರಿ

ಈ ಕ್ರಮವು ಅಗತ್ಯ: ಅಧಿಕಾರಿ

ಕೇಂದ್ರ ಸರ್ಕಾರದ ನಿಯಮವು ಸ್ವಯಂ ಆಗಿ ತೆಗೆದುಕೊಂಡ ನಿರ್ಧಾರಗಳಾಗಿವೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಈ ಹಠಾತ್ ನಿಯಮ ಜಾರಿಯಲ್ಲಿನ ಸಮಸ್ಯೆಗಳಿವೆ ಎಂದು ಒಪ್ಪಿಕೊಂಡರು. ಆದರೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವು ಅಗತ್ಯವಾಗಿದೆ ಎಂದು ಹೇಳಿದರು.

 ಕರ್ನಾಟಕ ಪೊಲೀಸರ ಆದೇಶ

ಕರ್ನಾಟಕ ಪೊಲೀಸರ ಆದೇಶ

ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ಕರ್ನಾಟಕದಲ್ಲಿ ವಾಹನದ ಹಿಂಬದಿಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್‌ಗಳನ್ನು ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಆದೇಶದ ಉಲ್ಲಂಘನೆಯಾದರೆ ಪೊಲೀಸರು 1,000 ರೂಪಾಯಿ ದಂಡ ವಿಧಿಸುತ್ತಾರೆ ಎಂದು ಕರ್ನಾಟಕ ಪೊಲೀಸರು ಬುಧವಾರ ಆದೇಶ ಹೊರಡಿಸಿದ್ದರು.

English summary
Taxi drivers have urged the government to separate public and private vehicles while imposing a fine of Rs 1,000 on rear-seat passengers for not wearing seat belts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X