ಮಾಗಡಿಯಲ್ಲಿ ಸಿಕ್ಕಿದ್ದು ಪಾಸ್ಟಿಕ್ ಮೊಟ್ಟೆನಾ?

ಮಾಗಡಿ, ಜೂನ್ 08 : ರಾಷ್ಟ್ರದಲ್ಲಿ ಆಹಾರ ಸುರಕ್ಷತೆಗೆ ಪ್ಲಾಸ್ಟಿಕ್ ಸವಾಲೊಡ್ಡುವ ಆತಂಕ ತಲೆದೋರಿದೆ. ದೇಶದ ವಿವಿಧೆಡೆ ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿಗಳು ಗ್ರಾಹಕರನ್ನು ಕಂಗಾಲಾಗಿಸಿರುವ ಬೆನ್ನಲ್ಲೇ ಪ್ಲಾಸ್ಟಿಕ್ ಮೊಟ್ಟೆ ಮಾರಾಟವಾಗುತ್ತಿರುವ ಸಂಗತಿ ಮಾಗಡಿಯಲ್ಲಿ ಬೆಳಕಿಗೆ ಬಂದಿದೆ.

ಲಕ್ಷ್ಮೀದೇವಿ ಎಂಬುವವರು ಬುಧವಾರ ಬೆಳಗ್ಗೆ 15 ಮೊಟ್ಟೆ ಖರೀದಿಸಿದ್ದು, 8 ಮೊಟ್ಟೆಗಳಲ್ಲಿ ಪ್ಲಾಸ್ಟಿಕ್ ಕಂಡುಬಂದಿದೆ. ಮೊಟ್ಟೆಯನ್ನು ಒಡೆದ ಸಮಯದಲ್ಲಿ ಮೊಟ್ಟೆಯ ಬಿಳಿಯ ಭಾಗದಲ್ಲಿ ಪೇಪರ್ ನಂತಹ ವಸ್ತು ಹಾಗೂ ಮೊಟ್ಟೆಯ ಒಳಗಿನ ಹಳದಿಭಾಗ ಗಟ್ಟಿಯಾಗಿರುವುದು ಕಂಡು ಬಂದಿದೆ. ಇದು ಕೆಲವು ಮೊಟ್ಟೆಗಳಲ್ಲಿ ಮಾತ್ರ ಕಾಣಲು ಸಿಕ್ಕಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. [ಕೋಳಿ ಮೊದಲೊ? ಮೊಟ್ಟೆ ಮೊದಲೊ? ಇಲ್ಲಿದೆ ಉತ್ತರ]

plastic egg found in Magadi

ಮಾಮೂಲಿ ಕೋಳಿ ಮೊಟ್ಟೆಗಳನ್ನು ಒಡೆದು ಅದರ ಒಳಭಾಗದಲ್ಲಿರುವ ಹಳದಿ ಭಾಗ ನೀರಿನಲ್ಲಿ ಹಾಕಿದರೆ ಕದಡುತ್ತದೆ. ಮೊಟ್ಟೆಯ ಬಿಳಿಯ ಕವಚದಲ್ಲಿ ಪದರ ತೆಳುವಾಗಿರುತ್ತದೆ.[ಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶ]

ಅಲ್ಲದೆ ಹಳದಿ ಭಾಗ ವಾಸನೆ ಬರುತ್ತದೆ. ಅದರೆ ಇವರಿಗೆ ಸಿಕ್ಕಿರುವ ಮೊಟ್ಟೆಯನ್ನು ಒಡೆದಾಗ ಬಿಳಿಯ ಭಾಗದಲ್ಲಿ ಗಟ್ಟಿಯಾದ ಪರದೆಯಂತಹ ವಸ್ತು ಕಂಡು ಬಂದಿದ್ದು, ಹಳದಿಭಾಗವನ್ನು ನೀರಿನಲ್ಲಿ ಹಾಕಿದರೆ ಗಟ್ಟಿಯಾಗಿಯೇ ಉಳಿದು ಹಳದಿ ಭಾಗದಲ್ಲಿ ಯಾವುದೇ ವಾಸನೆಯಿಲ್ಲದಿರುವುದು ನಕಲಿ ಮೊಟ್ಟೆ ಎಂಬುದನ್ನು ಸಾಬೀತು ಪಡಿಸಿದೆ ಎಂಬುದಾಗಿ ಹೇಳುತ್ತಿದ್ದಾರೆ.

plastic egg found in Magadi

ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಪರೀಕ್ಷೆ ಕೈಗೊಂಡು ನಕಲಿಯೋ? ಅಸಲಿಯೋ ಎಂಬುದನ್ನು ಬಹಿರಂಗಪಡಿಸಬೇಕಿದೆ. ಇಲ್ಲದೇ ಹೋದರೆ ಸಾರ್ವಜನಿಕರಲ್ಲಿ ಆತಂಕ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+