ಮಹಿಳಾ ದಿನಾಚರಣೆ: ಟಾಟಾ ಕಾಫಿ ಎಸ್ಟೇಟ್ ನಲ್ಲಿ ನಲಿದಾಡಿ
ಬೆಂಗಳೂರು, ಮಾ.5: ಈ ಸಲದ ಮಹಿಳಾ ದಿನಾಚರಣೆಯನ್ನು ಆಚರಿಸುವ ಮಹಿಳೆಯರಿಗೆ ಪ್ರಕೃತಿಯ ಮಡಿಲಲ್ಲಿ ಆಡಿ ನಲಿಯುವ ಅವಕಾಶವನ್ನು ಟಾಟಾ ಕಾಫಿ ನೀಡುತ್ತಿದೆ. ಪ್ಲಾಂಟೇಷನ್ ಟ್ರಯಲ್ಸ್- ಜಾಯ್ ಆಫ್ ವುಮೆನ್ ಹುಡ್ ಹೆಸರಿನಲ್ಲಿ ಕಾಫಿ ಎಸ್ಟೇಟಿನ ಬಂಗಲೆಯಲ್ಲಿ ಕಳೆಯಲು ವೇದಿಕೆ ಒದಗಿಸಲಾಗಿದೆ.
ನಗರ ಜೀವನದ ಬದುಕಿನ ಜಂಜಾಟಗಳಿಂದ ಹೊರಬರಲು ಸೂಕ್ತ ಕಾರಣ ನೀಡುತ್ತಿದೆ. ರಜಾದಿನಗಳನ್ನು ಪ್ಲಾಂಟೇಷನ್ ಟ್ರಯಲ್ಸ್ ಹೆರಿಟೇಜ್ ಬಂಗ್ಲೆಗಳಲ್ಲಿ ಕಳೆಯಲು ಸಜ್ಜಾಗಿ ಎಂದು ಟಾಟಾ ಕಾಫಿ ಕರೆ ನೀಡಿದೆ. [ಮಹಿಳಾ ದಿನ: ನಮ್ಮ ವೃಕ್ಷ ಮಹಿಳೆ, ನಮ್ಮ ಹೆಮ್ಮೆ]
ಅಡುಗೆ ಸೇವೆಯೊಂದಿಗೆ ಸವಿಯಾದ ಕೊಡಗಿನ ರುಚಿ ಸವಿಯುವ ಅವಕಾಶ. ರೀಡಿಂಗ್ ವಲಯದಲ್ಲಿ ಒಂದಷ್ಟು ಸಮಯ ಕಳೆಯಬಹುದು. ಕಪ್ ಟೂರ್ ನೊಂದಿಗೆ ಪ್ಲಾಂಟರ್ ಗಳ ಜೀವನಶೈಲಿ ನೋಡಬಹುದು.

ಸಫಾರಿ ಜೀಪ್ ಡ್ರೈವ್ ನಲ್ಲಿ ಹಕ್ಕಿಗಳ ವೀಕ್ಷಣೆ ಮತ್ತು ಛಾಯಾಚಿತ್ರೀಕರಣ ಪ್ರವಾಸೋದ್ಯಮ ಲಭ್ಯವಿದೆ. ಕಾಫಿ ತೋಪಿನ ನಡುವೆ ಪ್ರಕೃತಿಯ ರಮಣೀಯತೆಯನ್ನು ಸವಿಯುವ, ಕೊಡಗಿನ ಸೊಬಗನ್ನು ಆಸ್ವಾದಿಸುವ ಅವಕಾಶವನ್ನು ಅತಿಥಿಗಳಿಗೆ ನೀಡುತ್ತಿದೆ.
ಎಲ್ಲ ಪುರುಷರಿಗೆ ನಿಮ್ಮ ಬದುಕಿನ ಸಂಗಾತಿಯನ್ನು ಖುಷಿಯಾಗಿಸುವ ಕ್ಷಣ. ಈ ರಜೆಯಲ್ಲಿ ನಿಮ್ಮ ನೆಚ್ಚಿನ ಮಹಿಳೆಯನ್ನು ಪ್ಲಾಂಟೇಷನ್ ಟ್ರಯಲ್ಸ್ ನ ವಿಶೇಷ ಕೊಡುಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಮಾಡಬಹುದು. [ಪುರುಷರು ಮೇಲುಗೈ ಸಾಧಿಸುವುದು ಯಾವಾಗ?]
ಈ ವಿಶೇಷ ಆಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ಲಾಂಟೇಷನ್ ಟ್ರಯಲ್ಸ್ ಮುಖ್ಯಸ್ಥ ಗೌತಮ್ ಪ್ರಕಾಶ್, ಈ ದಿನಗಳಲ್ಲಿ ಮಹಿಳೆಯರು, ಸ್ವಂತತ್ರರಾಗುತ್ತಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಅಚ್ಚರಿಯ ಯಶಸ್ಸನ್ನು ಗಳಿಸುತ್ತಿದ್ದಾರೆ. ಈ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಪ್ಲಾಂಟೇಷನ್ ಟ್ರಯಲ್ಸ್ ಬೈ ಟಾಟಾ ಕಾಫಿ ಈ ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ನಿರ್ಧರಿಸಿದೆ.

ಪ್ಲಾಂಟೆಷನ್ ಟ್ರಯಲ್ಸ್ ಕುರಿತು: ಪ್ಲಾಂಟೆಷನ್ ಟ್ರಯಲ್ಸ್, ಟಾಟಾ ಕಾಫಿಯ ಆತಿಥಿ ಉದ್ಯದ್ಯಮ ಬ್ರ್ಯಾಂಡ್ ಮತ್ತು ಕಾಫಿ ಹಾಗೂ ಟಿ ಪ್ರವಾಸೋದ್ಯಮ ಹೆಜ್ಜೆಯಾಗಿದೆ. ಐಷಾರಾಮಿ ಬಂಗಲೆ ಮತ್ತು ಹೆರಿಟೇಜ್ ಗಳನ್ನು ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಒದಗಿಸುತ್ತಿದೆ.
ಕಾಫಿ, ಟೀ ತೋಟದ ನಡುವೆ ಇದ್ದು, ಅತಿಥಿಗಳಿಗೆ ತೋಟದ ಅನುಭವ ನೀಡುತ್ತದೆ. 85 ವರ್ಷಗಳ ಇತಿಹಾಸ ಹೊಂದಿರುವ ಟಾಟಾ ಕಾಫಿ ಒಡೆತನ ಹೊಂದಿದೆ. ಅತಿಥಿಗಳು ಪಕ್ಷಿ ವೀಕ್ಷಣೆ, ಪ್ರಕೃತಿ ಮಡಿಲಿನಲ್ಲಿ ನಡಿಗೆ, ತೋಟದಲ್ಲಿ ಜೀಪ್ ಡ್ರೈವ್ ಮೊದಲಾದ ಸೇವೆ ಪಡೆಯಬಹುದು.
ಮುಂಗಡ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ
ಪ್ಲಾಂಟೆಷನ್ ಟ್ರಯಲ್ಸ್ ವೆಬ್ ಸೈಟ್ ನೋಡಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91(080)23560761
ಒನ್ ಇಂಡಿಯಾ ಸುದ್ದಿ
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications