'ಕ್ಷೀರಭಾಗ್ಯ ಯೋಜನೆ 5 ದಿನಗಳಿಗೆ ವಿಸ್ತರಣೆ'

Posted By:
Subscribe to Oneindia Kannada

ಬೆಂಗಳೂರು, ಜೂನ್ 30 : 'ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಮೂರು ದಿನ ಹಾಲು ವಿತರಣೆಯಾಗುತ್ತಿದೆ. ಅದನ್ನು ಐದು ದಿನಗಳಿಗೆ ವಿಸ್ತರಣೆ ಮಾಡುವ ಆಲೋಚನೆ ಇದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ಹೊಸಕೋಟೆ ಡೇರಿ ಮತ್ತು ಉತ್ಪನ್ನ ಘಟಕದ ಉದ್ಘಾಟನೆ ಹಾಗೂ ಉಗ್ರಾಣ, ಮಾರುಕಟ್ಟೆ, ಕಚೇರಿ, ಉಪಹಾರಗೃಹ ಮತ್ತು ಸಭಾಂಗಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. 'ಶಾಲಾ ಮಕ್ಕಳಿಗೆ ಪ್ರಸ್ತುತ ಮೂರು ದಿನ ಹಾಲು ವಿತರಣೆ ಆಗುತ್ತಿದೆ. ಅದನ್ನು 5 ದಿನಗಳಿಗೆ ವಿಸ್ತರಿಸುವ ಆಲೋಚನೆ ಇದೆ' ಎಂದರು. [ಕ್ಷೀರಭಾಗ್ಯ ಯೋಜನೆ ಕೊಂಡಾಡಿದ ಶಾಲಾ ಮಕ್ಕಳು!]

siddaramaiah

'ಪ್ರಸ್ತುತ ರೈತರಿಗೆ ಪ್ರತಿ ಲೀಟರ್‌ಗೆ 4 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆ ಸೌಲಭ್ಯ ವಾಪಸ್ ಪಡೆಯುವುದಿಲ್ಲ. ಕೆಎಂಎಫ್ ಉತ್ಪನ್ನಗಳಲ್ಲಿ ಗುಣ್ಣಮಟ್ಟವನ್ನು ಕಾಯ್ದುಕೊಳ್ಳಿ, ಸಂಸ್ಥೆಯ ಲಾಭದ ಜೊತೆಗೆ ಉತ್ಪಾದಕರಿಗೂ ಲಾಭ ಸಿಗುವಂತೆ ಮಾಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು. [ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ?]

-
-
-
-

ಡೈರಿ ಉದ್ಘಾಟನೆ ವಿಡಿಯೋ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah said government is willing to extend Ksheera Bhagya scheme to 5 days from the present three days.
Please Wait while comments are loading...