ಈ ಭಾಗದಲ್ಲಿ ಪೆರಿಫೆರಲ್ ರೋಡ್‌ಗೆ ಭರ್ಜರಿ ಸಿದ್ಧತೆ: ಭೂಸ್ವಾಧೀನ ಪ್ರಕ್ರಿಯೆ ಜೋರು!
ಕರ್ನಾಟಕದಲ್ಲಿ ಪ್ರಮುಖ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ಕರ್ನಾಟಕದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣ ಯೋಜನೆಯು ಕಗ್ಗಂಟಾಗಿ ಉಳಿದಿದೆ. ಇದೀಗ ಈ ಯೋಜನೆಯು ಬಹು ಮುಖ್ಯ ಹಂತವನ್ನು ತಲುಪಿದೆ. ಈ ಯೋಜನೆಯ ಯಾವ ಮಾದರಿಯಲ್ಲಿ ಇರಬೇಕು ಹಾಗೂ ಇದರ ಸಂಪೂರ್ಣ ವಿವರಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧತೆ ನಡೆದಿದೆ. ಇದರ ನಡುವೆ ಭೂಸ್ವಾಧಿನ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯು ಹಲವು ತಿಂಗಳುಗಳಿಂದ ಕಗ್ಗಂಟಾಗಿತ್ತು. ಇದೀಗ ಭೂಸ್ವಾಧೀನ ಪ್ರಕ್ರಿಯೆ ಶುರುವಾಗುತ್ತಿದೆ. ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಡಿಪಿಆರ್ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಮೈಸೂರು ಡೆವಲಪ್‌ಮೆಂಟ್ ಅಥಾರಿಟಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇದಾದ ಮೇಲೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಹಲವು ಹಂತದಲ್ಲಿ ಅಥವಾ ಮಾರ್ಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾಗಲಿದೆ.

ಯೋಜನೆಯ ಉದ್ದೇಶವೇನು: ಬೆಂಗಳೂರು ಅಭಿವೃದ್ಧಿ ವೇಗದಲ್ಲಿನ ಮುಂಚೂಣಿಯಲ್ಲಿದೆ. ಆದರೆ ಟಯರ್ 2 ಸಿಟಿ ಅಥವಾ ಎರಡನೇ ಹಂತದ ನಗರಗಳಲ್ಲಿ ಮೈಸೂರು ಸಹ ಪ್ರಮುಖವಾಗಿ ಅಭಿವೃದ್ಧಿಯಾಗುತ್ತಿದೆ. ಬೆಂಗಳೂರು ಹಾಗೂ ಮೈಸೂರು ಪ್ರಮುಖ ನಗರಗಳನ್ನು ಉದ್ದೇಶದಲ್ಲಿ ಇರಿಸಿಕೊಂಡು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಪೆರಿಫೆರಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸುವ ರಸ್ತೆಯನ್ನು ಇದರ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಪೆರಿಫೆರಲ್ ರಸ್ತೆ ನಿರ್ಮಾಣದಿಂದ ಮೈಸೂರು ನಗರದ ಅಭಿವೃದ್ಧಿ ದಿಕ್ಕು ಬದಲಾಗಲಿದೆ. ಇದರಿಂದ ಸಂಚಾರ ಸೇವೆ ಸುಗಮವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಬೆಂಗಳೂರು - ಮೈಸೂರಿನ ನಡುವೆ ಸಂಚಾರ ಅಭಿವೃದ್ಧಿ ಹಾಗೂ ಕನೆಕ್ಟಿವಿಟಿ ಅಭಿವೃದ್ಧಿಯಾಗಿದೆ. ಶಿಕ್ಷಣ ಹಾಗೂ ರಿಯಲ್ ಎಸ್ಟೇಟ್ ವಿಚಾರದಲ್ಲೂ ಮೈಸೂರು ಮುಂಚೂಣಿಯಲ್ಲಿದೆ. ಸ್ವಚ್ಛತೆ ಸೇರಿದಂತೆ ಕೆಲವೊಂದು ವಿಚಾರಗಳಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ.
ಆಸ್ತಿದಾರರಿಗೆ ಬಂಪರ್: ಇನ್ನು ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವಿನ ಆಸ್ತಿಮಾಲೀಕರಿಗೆ ಬಂಪರ್ ಬರಲಿದೆ. ಈ ಯೋಜನೆಗೆ ಭೂಸ್ವಾಧೀ ನಪ್ರಕ್ರಿಯೆ ಪ್ರಾರಂಭವಾದ ಬೆನ್ನಲ್ಲೇ ಈ ಭಾಗದ ಆಸ್ತಿದಾರರಿಗೆ ಗುಡ್‌ನ್ಯೂಸ್ ಸಿಕ್ಕಂತೆ ಆಗಿದೆ. ಈ ಭಾಗದಲ್ಲಿ ಭೂಮಿಗೆ ಬಂಪರ್ ಬೆಲೆ ಬರುವುದಕ್ಕೆ ಶುರುವಾಗಿದೆ.
ನಗರ ವಿಸ್ತರಣೆ: ಬೆಂಗಳೂರು ಹಾಗೂ ಮೈಸೂರು ನಗರಗಳ ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಬೆಂಗಳೂರಿನ ಹೊರಗೂ ಹೂಡಿಕೆ ಹಾಗೂ ಬೆಂಗಳೂರು ಸುತ್ತಮುತ್ತಲಿನ ನಗರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಕರ್ನಾಟಕ ಸರ್ಕಾರವು ಬಿಯಾಂಡ್ ಬೆಂಗಳೂರಿಗೆ ಒತ್ತು ನೀಡುತ್ತಿದೆ. ಇದರ ಮುಂದುವರಿದ ಭಾಗ ಪೆರಿಫೆರಲ್ ರಸ್ತೆ ಆಗಿದೆ.












Click it and Unblock the Notifications