ಡಿಕೆಶಿ ಯಿಂದ ಸರ್ಕಾರ ಬೀಳುತ್ತೆ ಎಂದ ರಮೇಶ್ ಜಾರಕಿಹೊಳಿ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಪೂರೈಸಿದ್ದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಿಂದ ಸರ್ಕಾರ ಪತನವಾಗುತ್ತೆ. ಡಿ ಕೆ ಶಿವಕುಮಾರ್ ಮಾಜಿ ಸಚಿವರಾಗುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಬಿಜೆಪಿ ಆಪರೇಷನ್ ಮಾಡಿರಲಿಲ್ಲ. ಮೈತ್ರಿ ಸರ್ಕಾರ ಕೆಡವಿದ್ದೇ ನಾವು. ಈಗ ಬಿಜೆಪಿ ಆಪರೇಶನ್ ಕಮಲ ಮಾಡುತ್ತಿದೆ ಎಂಬುದು ಶಿವಕುಮಾರ್ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ ಎಂಬ ರಮೇಶ್ ಜಾರಕಿಹೊಳಿ ಆರೋಪದ ಕುರಿತು ಮಾಧ್ಯಮಗಳ ಜೊತೆಗೆ ಉತ್ತರಿಸಿದರು.
ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಇದೀಗ ಮತ್ತೆ ಮುಂದುವರೆದಿದ್ದು, ಡಿ.ಕೆ.ಶಿವಕುಮಾರ್ರಿಂದಲೇ ಸರ್ಕಾರ ಬೀಳುತ್ತೆ. ಡಿ.ಕೆ.ಶಿವಕುಮಾರ್ ವಿಪಕ್ಷದಲ್ಲಿದ್ದಾಗ ಕಾಲಿಗೆ ಬೀಳುತ್ತಾ ಓಡಾಡುತ್ತಾನೆ. ಅಧಿಕಾರ ಇದ್ದಾಗ ಎದೆ ಉಬ್ಬಿಸಿಕೊಂಡು ಓಡಾಡ್ತಾನೆ ಎಂದು ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಪತನವಾಗಬಹುದು. ಮಹಾರಾಷ್ಟ್ರ ಮಾದರಿಯಲ್ಲಿ ಈ ಸರ್ಕಾರದ ಪರಿಸ್ಥಿತಿ ಆಗಬಹುದು. ಲಾಟರಿ ಮಂತ್ರಿ, ಲಾಟರಿ ಶಾಸಕರಿದ್ದರೆ ಈ ರೀತಿ ಪರಿಸ್ಥಿತಿ ಆಗುತ್ತದೆ. ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ. ನಂಬರ್ ಹೆಚ್ಚು ಬೇಕು, ಮಹಾರಾಷ್ಟ್ರ ಮಾದರಿಯಲ್ಲಿದರೆ ಸರ್ಕಾರ ಬದಲಾಗುವುದು. ಒಂದು ರಾತ್ರಿಯಲ್ಲಿ ಎಲ್ಲವೂ ಬದಲಾಗುವುದು. ಅತೀ ಶೀಘ್ರದಲ್ಲಿ ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮತ್ತೆ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಸಿಡಿ ಮಾಸ್ಟರ್ ಡಿಕೆ ಶಿವಕುಮಾರ್, ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾನೆ. ಅವನೇನೂ ದೊಡ್ಡವನಲ್ಲ. ಧೈರ್ಯಶಾಲಿ ಅಲ್ಲ ಪುಕ್ಕಲು. ಡಿಕೆ ಶಿವಕುಮಾರ್ ಯಾವಾಗಲೂ ಮೋಸಗಾರ. ಹೋರಾಟ ಮಾಡುವ ಶಕ್ತಿ ಅವನಿಗಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ ಎಷ್ಟೇ ಸಿಡಿ ಬಂದರೂ ನಾನು ಹೆದರಲ್ಲ. ಇಪ್ಪತ್ತು ದಿನದ ಹಿಂದೆ ಡಿಕೆ ಶಿವಕುಮಾರ್ ಸಿಡಿ ಇದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ಮಾಜಿ ಶಾಸಕ ನಾಗರಾಜ್ ಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಎಸ್ಐಟಿ ಕ್ಯಾನ್ಸಲ್ ಮಾಡಿ ತನಿಖೆ ಮಾಡಿಸುತ್ತೇನೆ ಎಂದಿದ್ದಾನೆ. ನಾನು ಸಹ ಸಿಡಿ ಕೇಸ್ ಸಿಬಿಐಗೆ ವಹಿಸಬೇಕೆಂದು ಸಿಎಂಗೆ ಮನವಿ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications