ಕುಮಾರಸ್ವಾಮಿ 123 ಸ್ಥಾನದ ಬಗ್ಗೆ ಹಗಲು ಕನಸು ಕಂಡಿದ್ರು, ಜನ ಕೊಟ್ಟಿದ್ದು 19 : ಎಸ್‌ ರವಿ ವ್ಯಂಗ್ಯ

ರಾಮನಗರ, ಮೇ 19: ಕುಮಾರಸ್ವಾಮಿ ಅವರು 123 ಸ್ಥಾನ ಗೆಲ್ಲುವ ಬಗ್ಗೆ ಹಗಲು ಕನಸು ಕಂಡಿದ್ರು. ಜನರು ಕೂಡ 19 ಸ್ಥಾನ ಕೊಟ್ಟಿದ್ದಾರೆ, ಕಲಾವಾಶ ಕೊಡದೆ ಕುಮಾರಸ್ವಾಮಿ ಅವರು ಯಾಕೆ ಈಗೆ ಆಡುತ್ತಿದ್ದಾರೆ. ಅವರು ಸಮಾಧಾನವಾಗಿ ಇರಲಿ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌ ರವಿ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶನಿವಾರ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಾಗಿತ್ತು. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳು ಕೂಡ ಶಿವಕುಮಾರ್ ಅವರಿಗೆ ಇದೆ. ಪಕ್ಷದ ನಿಷ್ಠೆಗೆ ಮತ್ತೊಂದು ಹೆಸರು ಡಿ.ಕೆ. ಶಿವಕುಮಾರ್ ಎಂದು ಹೇಳಿದರು.

People Gave Only 19 Seats To JDS MLC S Ravi Said

ಮೈತ್ರಿ ಸರ್ಕಾರ ಇದ್ದಾಗಲೂ ಡಿ.ಕೆ. ಸುರೇಶ್ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ರು. ಎಲ್ಲರಿಗೂ ಕಾಂಗ್ರೆಸ್ ಕಥೆ ಮುಗಿತು ಅಂತ ಹೇಳುತ್ತಿದ್ರು, ಇಂತಹ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ರೂ. ತಳಹಂತದಿಂದ ಪಕ್ಷ ಸಂಘಟನೆ ಮಾಡಿ 135 ಸೀಟುಗಳನ್ನ ಗೆಲ್ಲಿಸಿದ್ದಾರೆ. ಡಿ.ಕೆ ಶಿವಕುಮಾರ್‌ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂಬ ಮಾತು ಹೇಳುತ್ತಾ ಬಂದಿದ್ದಾರೆ. ಹೀಗಾಗಿ ಗ್ಯಾರೆಂಟಿ ಯೋಜನೆಗಳನ್ನ ಜನರಿಗೆ ತಲುಪಿಸಲು ಸಿದ್ದರಾಮಯ್ಯ ಅವರ ಜೊತೆ ಕೈ ಜೋಡಿಸಿದ್ದಾರೆ ಎಂದರು.

ಇನ್ನೂ ಡಿ ಕೆ ಶಿವಕುಮಾರ್‌ ಡಿಸಿಎಂ ಹುದ್ದೆಯನ್ನ ಒಪ್ಪಿ ಉತ್ತಮ ಸರ್ಕಾರ ನಡೆಸಲು ಮುಂದಾಗಿದ್ದಾರೆ. ಕನಕಪುರ ಕ್ಷೇತ್ರ ಅಲ್ಲ, ಇದೊಂದು ಕುಟುಂಬ ಹಾಗೂ ಭಾವನಾತ್ಮಕ ಸಂಬಂದ ಹೊಂದಿದ್ದೇವೆ. ನಿಮ್ಮ ಮನೆ ಮಗನಿಗೆ ಅವಕಾಶ ಕೊಡಿ ಎಂದಿರುವುದು ನಿಜ. ಹಾಗೆಯೇ ಜನರು ಕೂಡ ಅವರನ್ನ ಗೆಲ್ಲಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ವಿರುದ್ದ ಮಾಜಿ ಸಚಿವ ಸುಧಾಕರ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮನಯ್ಯ ಅವರಿಗೆ ಹತ್ತಿರವಾಗಿದ್ದು ಅವರೆನೇ. ಅವರ ಅನುಭವದಲ್ಲಿ ಈ ಬಗ್ಗೆ ಹೇಳಿದ್ದಾರೆ. ಅವರ ಬಗ್ಗೆ ಸತ್ಯ ಹೇಳಬೇಕು ಎಂದು ಹೇಳಿದರು.

ಲೋಕಸಭಾ ಚುನಾವಣೆ ವೇಳೆಗೆ ಸರ್ಕಾರ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಹೇಳಿಕೆ ವಿಚಾರವಾಗಿ ಮಾತನಾಡಿ, ಯೋಗೇಶ್ವರ್ ಹಿಮಾಲಯಕ್ಕೆ ಹೋಗಿದ್ರು ಅಂತ ನನಗೆ ಮಾಹಿತಿ ಬಂದಿದೆ. ಆರು ತಿಂಗಳು ಗುಹೆಯಲ್ಲಿ ತಪಸ್ಸು ಮಾಡಿದ್ದಾರಂತೆ. ತಪ್ಪಸಿನ ಫಲವಾಗಿ ಭವಿಷ್ಯ ಹೇಳುತ್ತಿದ್ದಾರೆ., ಈ ಚುನಾವಣೆಯಲ್ಲಿ ಅವರ ಭವಿಷ್ಯದಲ್ಲಿ ಸುಳ್ಳಾಗಿದೆ. ಅವರು ಎಷ್ಟು ಸ್ಥಿತಿ ನಿಜ ಆಗತ್ತೋ ಗೊತ್ತಿಲ್ಲ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್‌ ಗೆ ಟಾಂಗ್‌ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+