ರಾಮ ಮಾಂಸ ಭಕ್ಷಕನಲ್ಲ: ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ,ಫೆಬ್ರವರಿ,18: ಅವೈದಿಕರ ಕುತಂತ್ರದಿಂದ ಹಿಂದೂ ಧರ್ಮದ ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತದ ಕುರಿತು ಅಪವಾದ ಕೇಳಿ ಬರುತ್ತಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ್ವರ ಶ್ರೀಪಾದರು ಕಳವಳ ವ್ಯಕ್ತಪಡಿಸಿದರು.

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಪೂರ್ಣಪ್ರಜ್ಞ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳ ಸಮಾವೇಶದಲ್ಲಿ ರಾಮ ಮಾಂಸ ಭಕ್ಷಕನೇ?ಎನ್ನುವ ವಿಚಾರಗೋಷ್ಟಿಯಲ್ಲಿ ಮಾತನಾಡಿದ ಅವರು. ರಾಮಾಯಣ, ಮಹಾಭಾರತದಲ್ಲಿರುವ ಕೆಲವು ವಾಕ್ಯಗಳಿಂದ ರಾಮನ ವ್ಯಕ್ತಿತ್ವ ಅರಿಯುವುದಕ್ಕೆ ಸಾಧ್ಯವಿಲ್ಲ. ಅವೈದಿಕರ ಕುತಂತ್ರದಿಂದ ಕೆಲವು ವಾಕ್ಯಗಳು ವಿಭಿನ್ನ ಅರ್ಥ ನೀಡುತ್ತಿವೆ ಎಂದು ಬೇಸರಗೊಂಡರು.[ಬುದ್ಧಿ ಜೀವಿಗಳಿಗೆ ಪೇಜಾವರ ಸ್ವಾಮಿ ಬಹಿರಂಗ ಸವಾಲ್!]

Pejawar seer

ಯಜ್ಞದಲ್ಲಿ ಪಶುಹತ್ಯೆ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಕೆಲವು ಗ್ರಂಥಗಳಲ್ಲಿ ಬೇರೆ ರೀತಿಯ ಅರ್ಥ ಕಲ್ಪಿಸಲಾಗಿದೆ. ಈ ರೀತಿ ಗೊಂದಲ ಸೃಷ್ಟಿಸುವ ಎಲ್ಲ ಗ್ರಂಥಗಳ ಕುರಿತು ಚರ್ಚೆಯ ಅಗತ್ಯವಿದೆ.[ಪರ್ಯಾಯ ಗ್ಯಾಲರಿ]

ಪುರಾಣದಲ್ಲಿ ಕ್ಷತ್ರಿಯರಿಗೆ ಮಾಂಸ ಭಕ್ಷಣೆ, ಮದ್ಯಪಾನ ಮಾಡಲು ಅವಕಾಶವಿದೆ ಎಂದಾಕ್ಷಣ ರಾಮ ಮಾಡಿದ್ದಾನೆಂದು ತಿಳಿಯುವುದು ಮೂರ್ಖತನ. ರಾಜ ಬಹುಪತ್ನಿಯರನ್ನು ಹೊಂದಲು ಅವಕಾಶವಿದ್ದರೂ ರಾಮ ಏಕ ಪತ್ನಿ ವ್ರತಸ್ಥನಾಗಿದ್ದನು. ಈ ಹಿನ್ನಲೆಯಲ್ಲಿ ರಾಮಾಯಣದ ವಾಕ್ಯಗಳಲ್ಲಿ ವಿರೋಧವಿದೆ ಎಂದು ಪೇಜಾವರ ಶ್ರೀಗಳು ವಿಶ್ಲೇಷಿಸಿದರು.

ಶ್ರೀರಾಮನ ಆರೋಪಿಸಿದರೆ ಮನ್ನಣೆ:

ಶ್ರೀರಾಮನ ಕುರಿತು ಆರೋಪಿಸಿದರೆ ಸಮಾಜದಲ್ಲಿ ಬೇರೆ ಧರ್ಮದವರು ಮಾನ್ಯತೆ ನೀಡುತ್ತಾರೆ ಎನ್ನುವ ನೆಪದಲ್ಲಿ ರಾಮ ಮಾಂಸಭಕ್ಷಣೆ ಮಾಡುತ್ತಿದ್ದನು. ಆತನ ಪೂಜೆ ಯಾಕೆ ಮಾಡಬೇಕು? ಎಂದು ಆಕ್ಷೇಪಕಾರರು ಹೇಳುತ್ತಿದ್ದಾರೆ. ಲೌಕಿಕ ಪ್ರಪಂಚದಲ್ಲಿ ಹಣ್ಣುಗಳಿಗೂ ಮಾಂಸ ಎನ್ನುವ ಪರ್ಯಾಯ ಪದ ಬಳಕೆ ಮಾಡಲಾಗುತ್ತದೆ ಎಂದು ವಿದ್ಯಾಪೀಠ ಹಳೇ ವಿದ್ಯಾರ್ಥಿ ಭಟ್ ವಿಷಯ ಮಂಡಿಸಿದರು.[ಹನುಮಂತನ ರಾಕ್ಷಸ ಎಂದ ಕೇಜ್ರಿವಾಲ್ ಗೆ ಮಂಗಳಾರತಿ]

ಅಧ್ಯಕ್ಷತೆ ವಹಿಸಿದ್ದ ಸಗ್ರಿ ರಾಘವೇಂದ್ರ ಮಾತನಾಡಿ ರಾಮ ಕ್ಷತ್ರಿಯನಾಗಿ ಹುಟ್ಟಿದ್ದರಿಂದ ಆಯಾ ಅವತಾರಕ್ಕೆ ತಕ್ಕಂತೆ ವರ್ತಿಸಬಹುದು. ಮಾಂಸ ಹಾಗೂ ಸುರಪಾನ ಮಾಡಿದ್ದರೂ, ಸುರ ವ್ಯಸನಿಯಾಗಿರಲಿಲ್ಲ ಎಂದು ನಿರ್ಣಯಿಸಬಹುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pejawar seer has attended Poorna Pragna Peeta old student association programme in Udupi on Thursday, February 18th. That time he clarrified the some statements of Ramayana and God of Rama.
Please Wait while comments are loading...