ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಪಠ್ಯಕ್ರಮದ ಪುಸ್ತಕಕ್ಕೆ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ

|
Google Oneindia Kannada News

ಬೆಂಗಳೂರು, ಮೇ 14: ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ನೀಡುವ ರಾಜ್ಯ ಪಠ್ಯಕ್ರಮದ ಪುಸ್ತಕಕ್ಕೆ ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳ ಮಾಡಿದ್ದು ಪೋಷಕರು ಹೆಚ್ಚುವರಿ ಶುಲ್ಕ ನೀಡಬೇಕಿದೆ.

ಶುಲ್ಕವನ್ನು ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರತಿ ಪಠ್ಯಪುಸ್ತಕದ ಒಂದು ಸೆಟ್‌ಗೆ ಸುಮಾರು 100ರೂ ನಷ್ಟು ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ.

ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ

ಕಳೆದ ಬಾರಿಗಿಂತ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೂ ಯಾಕೆ ಶುಲ್ಕ ಹೆಚ್ಚಳ ಮಾಡಿದ್ದಾರೆ ಎನ್ನುವ ಗೊಂದಲವಿದೆ. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಶಿಕ್ಷಣ ಇಲಾಖೆಗೆ ಶಾಲೆಗಳು ಕೇಳಿವೆ.

Parents to pay extra money for state syllabus textbooks

ನಮಗೆ ಬೇರೆ ದಾರಿ ಇಲ್ಲ ಆದರೆ ಪೋಷಕರಿಗೆ ಹೆಚ್ಚುವರಿಯಾಗಲಿದೆ. ಈ ಶುಲ್ಕ ಒಂದನೇ ತರಗತಿಯಿಂದ 10ನೇ ತರಗತಿಯವರೆಗೂ ಅನ್ವಯಿಸುತ್ತದೆ. ಇಲಾಖೆಯು ಡಿಸೆಂಬರ್ ತಿಂಗಳಿನಲ್ಲಿ ಆನ್‌ಲೈನ್‌ನಲ್ಲಿ ಹಾಕಿದ್ದ ಶುಲ್ಕದ ಪಟ್ಟಿಯನ್ನು ನೋಡಿ ಆರ್ಡರ್ ಮಾಡಲಾಗಿತ್ತು. ಇದೀಗ ಇತ್ತೀಚೆಗೆ ಕಳುಹಿಸಿರುವ ಪಟ್ಟಿಯನ್ನು ನೋಡಿ ಶಾಕ್ ಆಗಿದೆ ಎಂದು ಖಾಸಗಿ ಶಾಲೆಗಳು ದೂರಿವೆ.

ಇದೀಗ ಕೆಲವು ಖಾಸಗಿ ಶಾಲೆಗಳು ಶುಲ್ಕವನ್ನು ಶಾಲೆಯೇ ಭರಿಸಲು ನಿರ್ಧರಿಸಿವೆ.ಈಗ ಏಕಾಏಕಿ ಶುಲ್ಕವನ್ನು ಏರಿಕೆ ಮಾಡಿದರೆ ಶಾಲೆಯ ಮೇಲಿರುವ ಅಭಿಪ್ರಾಯ ಹಾಳಾಗುತ್ತದೆ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ತಿಳಿಸಿವೆ. ಆದರೆ ಶಿಕ್ಷಣ ಇಲಾಖೆಯು ಸೂಕ್ತ ಕಾರಣವನ್ನು ನೀಡಲೇಬೇಕು ಎಂದು ಒತ್ತಾಯಿಸಿದೆ.

English summary
In a shocker, the Department of Education has implemented a hike in the price of textbooks distributed by the Karnataka Textbook Society. The hike, at 20 per cent, means that parents will shell out almost Rs 100 extra for a set of textbooks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X