ಗೊಂದಲ ಸೃಷ್ಟಿಸಿದ ಕುಮಾರಸ್ವಾಮಿ, ಪರಮೇಶ್ವರ್ ಹೇಳಿಕೆ
Recommended Video

ಬೆಂಗಳೂರು, ನವೆಂಬರ್ 17: ಸಿಎಂ ಹುದ್ದೆ ಕೊಟ್ಟರೆ ನಿಭಾಯಿಸುತ್ತೇನೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ' ಪರಮೇಶ್ವರ್ ಅವರಿಗೆ ಸಿಎಂ ಆಗುವ ಅರ್ಹತೆ ಇದೆ' ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, 'ಹೈಕಮಾಂಡ್ ನೀಡಿದರೆ ಸಿಎಂ ಹುದ್ದೆ ನಿಭಾಯಿಸಲು ಸಿದ್ಧ' ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಪರಮೇಶ್ವರ್‌ಗೆ ಅರ್ಹತೆ ಇದೆ, ಅಲ್ಲದೆ, ಯಾವ ಅಧಿಕಾರವೂ ಶಾಶ್ವತವಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಣ್ಣ ಗೊಂದಲ ಸೃಷ್ಠಿಸಿದೆ.

ಜೆಡಿಎಸ್-ಕಾಂಗ್ರೆಸ್ ಮಧ್ಯೆ ಸಿಎಂ ಹುದ್ದೆ ಹಂಚಿಕೆ ನಡೆಯುತ್ತದೆಯೇ, ಕುಮಾರಸ್ವಾಮಿ ನಂತರ ಪರಮೇಶ್ವರ್ ಅವರು ಸಿಎಂ ಆಗುತ್ತಾರೆಯೇ ಎಂಬೆಲ್ಲಾ ಚರ್ಚೆಗಳಿಗೆ ಎಚ್‌ಡಿಕೆ ಹೇಳಿಕೆ ನಾಂದಿ ಹಾಡಿದೆ.
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, 'ಪರಮೇಶ್ವರ್ ಹೇಳಿಕೆಗೆ ಹೊಸ ಅರ್ಥ ಕಲ್ಪಿಸುವುದು ಬೇಡ, ಈಗಾಗಲೇ ಹಲವು ಜನ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ, ಈಗ ಇರುವ ನಾಯಕರಲ್ಲಿ ಹಲವರಿಗೆ ಸಿಎಂ ಆಗುವ ಅರ್ಹತೆ ಇದೆ' ಎಂದು ಅವರು ಹೇಳಿದ್ದಾರೆ.











Click it and Unblock the Notifications