Get Updates
Get notified of breaking news, exclusive insights, and must-see stories!

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: "ನಮ್ಮ ಪ್ರಾಣ ಹೊರಟು ಹೋಯಿತು.." ಸಂಕಟ ಹಂಚಿಕೊಂಡ ಆಪ್ತರು

ಪಾಪಾ ಪಾಂಡು ಸೀರಿಯಲ್‌ನಲ್ಲಿ ನಟಿಸಿದ್ದ ರಶ್ಮಿ ಅವರು ನಿಧನರಾಗಿದ್ದಾರೆ. ರಶ್ಮಿ ಅವರು ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚಿದ್ದರು. ರಶ್ಮಿ ಅವರ ಪತಿ ಸಾರಕ್ಕಿ ಮಂಜು ಅವರು ಸಂಭಾಷಣೆಕಾರ, ಸಹಾಯಕ ನಿರ್ದೇಶಕರಾಗಿದ್ದಾರೆ. ಆರೇಳು ವರ್ಷಗಳಿಂದ ರಶ್ಮಿ ಅವರು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಮುದ್ದಾದ ಹೆಣ್ಣು ಮಗು ಇದ್ದಾಳೆ. ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. "ನಮ್ಮ ಪ್ರಾಣ ಹೊರಟು ಹೋಯಿತು.." ಎಂದು ಆಪ್ತರು ಸಂಕಟ ಹಂಚಿಕೊಂಡಿದ್ದಾರೆ.

ಹಿರಿಯ ಪತ್ರಕರ್ತರಾದ ಎ.ಆರ್ ಮಣಿಕಾಂತ್ ಅವರು, ದೇವರೇ... ಯಾಕೆ ಇಂಥ ಶಿಕ್ಷೆ ಕೊಡ್ತೀಯ ? ಗೆಳೆಯ, ಸಂಭಾಷಣೆಕಾರ, ಸಹಾಯಕ ನಿರ್ದೇಶಕ ಸಾರಕ್ಕಿ ಮಂಜು ಅವರ ಪತ್ನಿ ರಶ್ಮಿ ತೀರಿಕೊಂಡಿದ್ದಾರೆ. ಸುಮಾರು ಆರೇಳು ವರ್ಷಗಳಿಂದ ಆರೋಗ್ಯದ ಸಮಸ್ಯೆಗೆ ಈಡಾಗುತ್ತಿದ್ದರು ರಶ್ಮಿ. ಆಕೆ ಪ್ರತಿ ಬಾರಿ ಆಸ್ಪತ್ರೆ ಸೇರಿದಾಗಲೂ ಮಂಜು ಮತ್ತು ಅವರ ಮುದ್ದಿನ ಮಗಳು ಆಹ್ಲಾದ, ದೇವರ ಜೊತೆ ಯುದ್ಧಕ್ಕೆ ನಿಂತುಬಿಡುತ್ತಿದ್ದರು. ರಶ್ಮಿ ಅವರನ್ನು ಆಸ್ಪತ್ರೆಯಿಂದ ಜೋಪಾನವಾಗಿ ಮನೆಗೆ ಕರೆತರುತ್ತಿದ್ದರು. ಇಪ್ಪತ್ತು ದಿನಗಳ ಹಿಂದೆ ರಶ್ಮಿ ಅವರ ಆರೋಗ್ಯ ಮತ್ತೆ ಹದಗೆಟ್ಟಿತು. ಮತ್ತೆ ಆಸ್ಪತ್ರೆವಾಸ. ಪತ್ನಿಯನ್ನು ಉಳಿಸಿಕೊಳ್ಳಲು ಮಂಜು ಇನ್ನಿಲ್ಲದಂತೆ ಶ್ರಮಿಸಿದರು.

Rashmi Passes Away

'ಆಕೆಯ ಚೇತರಿಕೆಗಾಗಿ ಪ್ರಾರ್ಥಿಸಿ' ಎಂದು ಕೇಳಿಕೊಂಡರು. ರಕ್ತ ಮತ್ತು ಪ್ಲೇಟ್ಲೆಟ್ಸ್ ಬೇಕಾದಾಗ -'ಸಾರ್, ಹೀಗೊಂದು ಸಹಾಯ ಆಗಬೇಕು' ಎಂದು ಮೆಸೇಜ್ ಹಾಕಿದರು. ನಾನು ತಕ್ಷಣ ಗಾಯತ್ರಿ ಭಾಸ್ಕರ್ ಅವರನ್ನು ಸಂಪರ್ಕಿಸಿದೆ. ಕಷ್ಟದ ಸಂದರ್ಭದಲ್ಲಿ ಆಪತ್ಬಾಂಧವರಾಗುವ ಭಾಸ್ಕರ್, ತಮ್ಮ ಕಡೆಯ ರಕ್ತದಾನಿಗಳನ್ನು ಕಳಿಸಿ, ವ್ಯವಸ್ಥೆ ಮಾಡಿದ್ದೇನೆ ಸರ್, ಅವರು ಹುಷಾರಾಗಲಿ... ಅಂದರು. ಸಾರಕ್ಕಿ ಮಂಜು ಕೂಡ, 'ನಿಮ್ಮಿಂದ ತುಂಬಾ ಉಪಕಾರ ಆಯಿತು' ಎಂದು ಮೆಸೇಜ್ ಕಳಿಸಿದರು.

ರಶ್ಮಿ ಅವರು ಬೇಗ ಹುಷಾರಾಗಲಿ ಎಂದು ಎಲ್ಲರೂ ಬಯಸುತ್ತಿದ್ದ ಸಂದರ್ಭದಲ್ಲಿಯೇ ಕೆಟ್ಟ ಸುದ್ದಿ ಬಂದಿದೆ. ರಶ್ಮಿ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಸಾರಕ್ಕಿ ಮಂಜು ಮತ್ತು ಪುಟ್ಟ ಆಹ್ಲಾದಳಿಗೆ ಬರಲಿ ಎಂದು ಸಾಂತ್ವನ ಹೇಳಿದ್ದಾರೆ.

Rashmi Passes Away

ರಮ್ಯ ಜಗತ್ ಮೈಸೂರು ಅವರು, ಸಾರಕ್ಕಿ ಮಂಜು ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುತ್ತದೆ. ಕಿರುತೆರೆಯಲ್ಲಿ ಬರಹಗಾರರಾಗಿ ಹೆಸರು ಮಾಡಿದವರು. ಇನ್ನು ಇವರ ಪತ್ನಿ ರಶ್ಮಿ ಅವರು ನಟಿಯಾಗಿದ್ದು ಕಿರುತೆರೆಯಲ್ಲಿ ಪಾಪಾ ಪಾಂಡು ಕಾವ್ಯಾಂಜಲಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು. ಇವರದ್ದೊಂದು ಚೆಂದದ ಕುಟುಂಬ.

ಸಾರಕ್ಕಿ ಮಂಜು ಅವರು ರಶ್ಮಿ ಅವರು ಹಾಗೂ ಇವರಿಗೊಬ್ಬಳು ಮುದ್ದಾದ ಮಗಳು, ಸುಂದರ ಸಂಸಾರ. ಆದರೆ ವಿಧಿಗೆ ಈ ಕುಟುಂಬದ ಮೇಲೆ ಕಣ್ಯಾಕೆ ಬಿತ್ತೋ ರಶ್ಮಿ ಅವರಿಗೆ ಏಳು ವರ್ಷದ ಹಿಂದೆ ರೀಹ್ಯೂಮಟೈಡ್ ಆರ್ಥ್ರೈಟಿಸ್ ಎಂಬ ಖಾಯಿಲೆ ನೀಡಿ ಬಿಟ್ಟ. ಕಾಯಿಲೆ ಜೊತೆಗೆ ಹೋರಾಡುತ್ತಲೇ ಬದುಕನ್ನು ಚೆಂದವಾಗಿ ಕಟ್ಟಿಕೊಂಡಿದ್ದರು ರಶ್ಮಿ ಅವರು, ಆದರೆ ಬರುಬರುತ್ತಾ ಕಾಯಿಲೆ ಗಂಭೀರವಾಯ್ತು.. ಅವರ ಎರಡೂ ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸುವ ಹಂತಕ್ಕೆ ತಲುಪಿತು. ರಶ್ಮಿ ಅವರಿಗೆ ಉಸಿರಾಡುವುದೇ ಹೋರಾಟ ಎನ್ನುವಂತಾಗಿತ್ತು. ಕಳೆದ ಒಂದು ವರ್ಷದಿಂದ ಆಕ್ಸಿಜನ್ ಸಿಲಿಂಡರ್ ನಿಂದಲೇ ಜೀವವನ್ನು ಹಿಡಿದಿಟ್ಟುಕೊಂಡಿದ್ದ ರಶ್ಮಿ ಅವರಿಗೆ ಶ್ವಾಸಕೋಶ ಬದಲಾವಣೆ ಮಾಡಲೇಬೇಕೆಂದು ತಿಳಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ನಾರಾಯಣ ಹೃದಯಾಲಯದಲ್ಲಿ ಶ್ವಾಸಕೋಶಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಕಳೆದ ತಿಂಗಳು ದಾನಿಯೊಬ್ಬರ ಶ್ವಾಸಕೋಶಗಳು ನಿಮ್ಮ ಪತ್ನಿಗೆ ಸರಿ ಹೊಂದುತ್ತವೆ ಎಂದು ನಾರಾಯಣ ಹೃದಯಾಲಯದಿಂದ ಫೋನ್ ಬಂದಿತ್ತು. ದೇವರಿದ್ದಾನೆ ಎಂದುಕೊಂಡು ಶ್ವಾಸಕೋಶ ಬದಲಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅದು ಬಹಳ ದುಬಾರಿಯ ಸರ್ಜರಿಯಾಗಿತ್ತು. ಸಾರಕ್ಕಿ ಮಂಜು ಅವರು ತಮ್ಮ ಮಡದಿಯನ್ನು ಉಳಿಸಿಕೊಳ್ಳಲೇಬೇಕೆಂದು ಕೈ ಮೀರಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಸ್ನೇಹಿತರನ್ನು ಹಣ ಕೇಳಲು ಮುಜುಗರವಾಗಿ ರಶ್ಮಿಗೆ ಸರ್ಜರಿ ನಡೆಯುತ್ತಿದೆ ಪ್ರಾರ್ಥಿಸಿ ಎಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾರಕ್ಕಿ ಮಂಜು ಅವರ ಆರ್ಥಿಕ ಸ್ಥಿತಿ ಅರಿತ ಸ್ನೇಹಿತರು ನೆರವಿಗೆ ನಿಂತರು, ಸರ್ಜರಿಯೂ ನಡೆಯಿತು.

12 ಗಂಟೆಯ ದೀರ್ಘಾವಧಿಯ ಸರ್ಜರಿ ಅದು. ಸರ್ಜರಿ ಏನೋ ಯಶಸ್ವಿಯಾಗಿ ಆಯಿತು. ಆದರೆ ನಂತರದ ಹೋರಾಟದಲ್ಲಿ ಅದ್ಯಾಕೋ ರಶ್ಮಿ ಅವರಿಗೆ ಹೋರಾಡುವ ಮನಸ್ಸಿದ್ದರೂ ಭಗವಂತ ಆ ಹೋರಾಟಕ್ಕೆ ಶಕ್ತಿ ನೀಡಲಿಲ್ಲ. ರಶ್ಮಿ ಅವರು ಇಂದು ತಮ್ಮ ಹೋರಾಟ ನಿಲ್ಲಿಸಿ ಹೊರಟು ಬಿಟ್ಟರು. ಏನೋ ಒಂದು ರೀತಿ ಸಂಕಟ ಹೇಳಲಾಗದು. ಪ್ರೀತಿಸುವ ಕುಟುಂಬಗಳಲ್ಲಿಯೇ ಈ ರೀತಿಯ ನೋವುಗಳು ಎದುರಾಗೋದೇಕೆ, ಭಗವಂತನೇ ಬಲ್ಲ. "ನಮ್ಮ ಪ್ರಾಣ ಹೊರಟು ಹೋಯಿತು" ಎಂದ ಸಾರಕ್ಕಿ ಮಂಜು ಅವರ ಮನಸ್ಥಿತಿ ಹೇಗಾಗಿರಬೇಕು.. ಅವರ ಮಗಳು ಆಹ್ಲಾದಳಿಗೆ ಭಗವಂತನೇ ತಾಯಿಯಾಗಿ ಜೊತೆ ನಿಲ್ಲಬೇಕಷ್ಟೇ. ಇಬ್ಬರಿಗೂ ಧೈರ್ಯ ನೀಡಿ ಗಟ್ಟಿಯಾಗಿಸಿಬಿಡಲಿ, ನಿಮ್ಮ ಪ್ರಾರ್ಥನೆ ಇರಲಿ ಎಂದು ನೋವು ಹಂಚಿಕೊಂಡಿದ್ದಾರೆ.

ನಮ್ಮ ಪ್ರಾಣ ಹೊರಟು ಹೋಯ್ತು

ನಮ್ಮ ಪ್ರಾಣ ಹೊರಟು ಹೋಯ್ತು ಎಂದು ರಶ್ಮಿ ಅವರ ಪತಿ ಸಾರಕ್ಕಿ ಮಂಜು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹಲವರು ಕಂಬನಿ ಮಿಡಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+