ಹೆಮ್ಮೆಯ ಕನ್ನಡಿಗನ ಸಾವಿಗೆ ಕಂಬನಿ ಮಿಡಿದ ಪಿಎಂ ಮೋದಿ & ಸಿಎಂ ಸಿದ್ದರಾಮಯ್ಯ... SL Bhairappa
ಕನ್ನಡ ಸಾಹಿತ್ಯ ಲೋಕ ಇಂದು ಕಂಬನಿ ಮಿಡಿಯುತ್ತಿದ್ದು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಅಗಲಿಕೆ ನೋವು ತರಿಸಿದೆ. ಕರ್ನಾಟಕ ಮಾತ್ರವಲ್ಲದೆ ಇಂಡಿಯಾ ಪೂರ್ತಿ ದೊಡ್ಡ ಹೆಸರು ಮಾಡಿದ್ದ ಎಸ್.ಎಲ್. ಭೈರಪ್ಪ ಅವರು, ತಮ್ಮ ಬರಹಗಳ ಮೂಲಕ ಭಾರಿ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಎಸ್.ಎಲ್. ಭೈರಪ್ಪ ಅವರಿಗೆ ಎಲ್ಲಾ ತಲೆಮಾರಿನ ಓದುಗರು ಕೂಡ ಪ್ರೀತಿಯಿಂದ ಶರಣಾಗಿದ್ದರು. ಇದೀಗ ಅವರ ನಿಧನದ ಸುದ್ದಿ ಭಾರಿ ದೊಡ್ಡ ಸಂಚಲನ ಸೃಷ್ಟಿಸಿದೆ...
ಕನ್ನಡಕ್ಕೆ 5,000ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದ್ದು, ಸಾಹಿತ್ಯವೂ ದೊಡ್ಡ ಇತಿಹಾಸ ಹೊಂದಿದೆ. ಕನ್ನಡ ಭಾಷೆಯ ಸಾಹಿತ್ಯ ಅಭಿವೃದ್ಧಿ ಹೊಂದಲು ಲಕ್ಷಾಂತರ ಬರಹಗಾರರು ಸಾವಿರಾರು ವರ್ಷದಿಂದ ಶ್ರಮಿಸಿದ್ದಾರೆ. ಅದೇ ರೀತಿ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಶ್ರಮ ಕೂಡ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇಂದು ಕನ್ನಡಿಗರನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಆಸ್ಪತ್ರೆಯಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಕೊನೆಯುಸಿರು ಎಳೆದಿದ್ದಾರೆ.

ಎಸ್.ಎಲ್. ಭೈರಪ್ಪ ಅವರಿಗೆ ಆರೋಗ್ಯ ಸಮಸ್ಯೆ
94 ವರ್ಷ ವಯಸ್ಸಿನ ಅವರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು, ಹೀಗಾಗಿ ವಯೋಸಹಜ ಕಾಯಿಲೆ ಹಿನ್ನೆಲೆ ಅವರು ಚಿಕಿತ್ಸೆಯನ್ನ ಪಡೆಯುತ್ತಿದ್ದರು. ಹೀಗಿದ್ದಾಗ ಮೈಸೂರು ಬಿಟ್ಟು ಬೆಂಗಳೂರಲ್ಲಿ ವಾಸವಾಗಿದ್ದರು ಸಾಹಿತಿ ಎಸ್.ಎಲ್. ಭೈರಪ್ಪ ಅವರು. ಆರೋಗ್ಯ ಚೇತರಿಸಿಕೊಳ್ಳುವ ನಿರೀಕ್ಷೆ ಕೂಡ ಮನೆಮಾಡಿತ್ತು. ಆದರೆ ಈಗ ಅವರ ಅಗಲಿಕೆ ಸುದ್ದಿ ಈಗ ಎಲ್ಲೆಲ್ಲೂ ಭಾರಿ ನೋವನ್ನು ತರಿಸಿದೆ. ಇದೇ ಸಮಯದಲ್ಲಿ ಸಿಎಂ & ಪಿಎಂ ಕೂಡ ಕಂಬನಿ ಮಿಡಿದಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು...
ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳ ಪೈಕಿ ಒಂದಾಗಿರುವ ಪದ್ಮಭೂಷಣ ಪ್ರಶಸ್ತಿಯೂ ಒಲಿದಿತ್ತು. ಪಿಎಂ ನರೇಂದ್ರ ಮೋದಿ & ಸಿಎಂ ಸಿದ್ದರಾಮಯ್ಯ ಈಗ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಗಣ್ಯರು ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಹಾಗೇ ಈ ನಷ್ಟವನ್ನು ಕನ್ನಡ ಸಾಹಿತ್ಯ ಲೋಕ ಭರಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ & ಸಿಎಂ ಸಿದ್ದರಾಮಯ್ಯ ಈಗ ವಿಶೇಷ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.












Click it and Unblock the Notifications