ಒಯೋ ರೂಮ್ಸ್ ಜಾಲಿ, ಜಾಲಿ ಮಾಡೋಕೆ ಆಗಲ್ಲ! ರೊಚ್ಚಿಗೆದ್ದ ಹುಡುಗ & ಹುಡುಗಿಯರು... OYO Rooms
ಹುಡುಗ & ಹುಡುಗಿಯರಿಗೆ ಈಗ ಓಯೋ ರೂಮ್ಸ್ ಅಂದ್ರೆನೇ ಒಂದು ಟ್ರೆಂಡ್ ಆಗೋಗಿದೆ. ವೀಕೆಂಡ್ ಬಂತು ಅಂದ್ರೆ ಓಯೋ ರೂಮ್ಸ್ ಬುಕ್ ಮಾಡು... ಖುಷಿ ಆಯ್ತು ಅಂದ್ರೆ ಓಯೋ ರೂಮ್ಸ್ ಬುಕ್ ಮಾಡು... ಹುಟ್ಟುಹಬ್ಬ ಆಚರಣೆ ಅಂದ್ರೆ ಬರ್ತ್ ಡೇ ಕೇಕ್ ಕಟ್ ಮಾಡಲು ಕೂಡ ಓಯೋ ರೂಮ್ಸ್ ಬುಕ್ ಮಾಡು...
ಹೀಗೆ ಎಲ್ಲದಕ್ಕೂ ಓಯೋ ರೂಮ್ಸ್ ಮೇಲೆಯೇ ಅವಲಂಬನೆ ಆಗಿದ್ದ ಮದುವೆ ಆಗದ ಹುಡುಗ & ಹುಡುಗಿಯರಿಗೆ ದೊಡ್ಡ ಆಘಾತ ಸಿಕ್ಕಿದೆ. ರಜೆ ಬಂದಾಗ, ಹಬ್ಬಗಳು ಇದ್ದಾಗ, ಬರ್ತ್ ಡೇ ಸಮಯ ಹೆಚ್ಚಾದ ಸಮಯದಲ್ಲಿ ಓಯೋ ರೂಮ್ಸ್ ಸೋಲ್ಡ್ ಔಟ್ ಆಗುತ್ತಿದ್ದವು. ಆದರೆ ಈಗ ಹೊಸ ರೂಲ್ಸ್ ಮೂಲಕ ಮದುವೆ ಆಗದ ಹುಡುಗ & ಹುಡುಗಿಯರಿಗೆ ಓಯೋ ರೂಮ್ಸ್ ಭರ್ಜರಿ ಶಾಕ್ ನೀಡಿದೆ. ಒಯೋ ರೂಮ್ಸ್ ಜಾಲಿ, ಜಾಲಿ ಮಾಡೋಕೆ ಆಗಲ್ಲ! ರೊಚ್ಚಿಗೆದ್ದ ಹುಡುಗ & ಹುಡುಗಿಯರು...

ರೊಚ್ಚಿಗೆದ್ದ ಹುಡುಗ & ಹುಡುಗಿಯರು...
ಓಯೋ ಕಾನ್ಸೆಪ್ಟ್ ಶುರುವಾದ ನಂತರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಯುವ ಸಮುದಾಯಕ್ಕೆ ಓಯೋ ಫೇವರಿಟ್ ಆಗಿದೆ. ಹೀಗಿದ್ದಾಗ 2025ರ ಹೊಸ ವರ್ಷಾಚರಣೆಗೆ ಅಂತಾ 10 ಲಕ್ಷಕ್ಕೂ ಹೆಚ್ಚು ಜನ ಓಯೋ ರೂಮ್ಸ್ ಬುಕ್ ಮಾಡಿದ್ದರಂತೆ. ಈ ಕುರಿತು ಮಾಹಿತಿ ಹೊರ ಬಿದ್ದ ಕೆಲವು ದಿನಗಳ ನಂತರ, ಮದುವೆ ಆಗದೆ ಓಯೋ ರೂಮ್ಸ್ ಬುಕ್ ಮಾಡುವ ಹುಡುಗಿ & ಹುಡಗರಿಗೆ ಆಘಾತಕಾರಿ ಸುದ್ದಿ ಸಿಕ್ಕಿದೆ!
ಓಯೋ ರೂಮ್ಸ್ ಹೊಸ ರೂಲ್ಸ್ ವಿರುದ್ಧ ರೊಚ್ಚಿಗೆದ್ದ ಹುಡುಗ & ಹುಡುಗಿಯರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕಂದ್ರೆ ಮದುವೆ ಆಗದೇ ಓಯೋ ರೂಂ ಬುಕ್ ಮಾಡುತ್ತಿದ್ದವರಿಗೆ ಇನ್ನು ಮುಂದೆ ಅಂತಹ ಅವಕಾಶ ಸಿಗುವುದು ಕಷ್ಟ ಕಷ್ಟ. ಯಾಕಂದ್ರೆ ಮದುವೆ ಆಗದ ಹುಡುಗ & ಹುಡಗಿಯರಿಗೆ ಓಯೋ ರೂಮ್ಸ್ ಕೊಡದೇ ಇರಲು ಹೊಸ ರೂಲ್ಸ್ ಅನ್ನ ಜಾರಿ ಮಾಡಿ & ಹೊಸ ನಿಯಮ ತಂದಿದೆ ಓಯೋ ರೂಮ್ಸ್ ಮ್ಯಾನೇಜ್‌ಮೆಂಟ್. ಇದೇ ಈಗ ಆಕ್ರೋಶಕ್ಕೆ ಕಾರಣ ಕೂಡ ಆಗುತ್ತಿದೆಯಂತೆ!
ಓಯೋ ರೂಮ್ಸ್ ಬುಕ್ ಮಾಡಲು ಮದುವೆ...
ಅಂದಹಾಗೆ ಈ ಮೊದಲು 'ಓಯೋ ರೂಮ್ಸ್'ಗೆ ಹೋಗಲು ಮದುವೆ ಆಗದೇ ಇದ್ದರೂ ಓಕೆ ಎನ್ನುವಂತೆ ಇತ್ತು. ಆದರೆ ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ಓಯೋ ರೂಮ್ಸ್‌ನ ಬುಕ್ ಮಾಡುವವರು ಕಡ್ಡಾಯವಾಗಿ ತಮ್ಮ ಮದುವೆ ದಾಖಲೆಗಳನ್ನು ತರಬೇಕು ಎಂದು ರೂಲ್ಸ್‌ನ ಹಾಕಲಾಗಿದೆ.
ಮದುವೆ ಆಗದ ಜೋಡಿಗಳಿಗೆ ಓಯೋ ರೂಮ್ಸ್ ಬುಕ್ ಮಾಡಲು ಅವಕಾಶ ಕೊಡದಂತೆ ಈಗ ಸಿಕ್ಕಾಪಟ್ಟೆ ಕಂಪ್ಲೇಂಟ್ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದೀಗ ಉತ್ತರ ಪ್ರದೇಶ ರಾಜ್ಯದ ಮೀರತ್ ಸಿಟಿಯಲ್ಲಿ ಮಾತ್ರ ಜಾರಿಗೆ ಬಂದಿರುವ ಈ ಹೊಸ ರೂಲ್ಸ್, ಮುಂದಿನ ದಿನಗಳಲ್ಲಿ ಇಡೀ ಇಂಡಿಯಾದಲ್ಲಿ ಜಾರಿಗೆ ಬರಲಿದೆ ಎಂಬ ಸುದ್ದಿ ಹಬ್ಬಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications