Get Updates
Get notified of breaking news, exclusive insights, and must-see stories!

ಬಜೆಟ್‌ನಲ್ಲಿ ಕರ್ನಾಟಕ ಕಡಗಣನೆ; ಆಂಧ್ರಪ್ರದೇಶ, ಬಿಹಾರ ಭರ್ಜರಿ ಕೊಡುಗೆ: ಎಚ್.ಕೆ. ಪಾಟೀಲ ಏನಂದ್ರು?

ಬೆಂಗಳೂರು, ಜುಲೈ 24: ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಆದ್ಯತಾ ವಲಯಗಳ ಕಡೆಗೆ ಕಿಂಚಿತ್ತು ಗಮನ ನೀಡದ ಕೇಂದ್ರ ಸರ್ಕಾರದ ಬಜೆಟ್ ಭಾರತೀಯ ಮಾನವ ಸಂಪನ್ಮೂಲದ ಸದ್ಭಳಕೆಗೆ ಯಾವುದೇ ರೀತಿಯ ಕಾರ್ಯಕ್ರಮ ರೂಪಿಸದೇ ಕೇವಲ ಅಂಕಿ-ಸಂಖ್ಯೆಗಳ ಮೂಲಕ ಗೊಂದಲ ಸೃಷ್ಟಿಸಿ, ನಿರಾಸೆ ಮೂಡಿಸಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದ್ದಾರೆ.

"ವಿಕಸಿತ ಭಾರತ" ಎಂಬ ಹುಸಿ ಕಲ್ಪನೆಯನ್ನು ಅನಾವರಣಗೊಳಿಸಿರುವ ಕೇಂದ್ರದ ಬಜೆಟ್ ಐದು ವರ್ಷಗಳ ಅವಧಿಯಲ್ಲಿ 135 ಕೋಟಿ ಭಾರತೀಯ ಜನಸಂಖ್ಯೆಯ ಪೈಕಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಬಗ್ಗೆ ಪ್ರಸ್ತಾಪಿಸಿರುವುದು ಹಾಸ್ಯಸ್ಪದವಾಗಿದೆ. ರೂ.7.50 ಲಕ್ಷ ಸಾಲ ನೀಡುವ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯಲಿದೆ, ಏಕೆಂದರೆ ಇಲ್ಲಿಯವರೆಗೂ ಬ್ಯಾಂಕ್ಗಳು ನಿರುದ್ಯೋಗಿಗಳಿಗೆ ಭದ್ರತೆ ರಹಿತ ಸಾಲವನ್ನೇ ನೀಡಿಲ್ಲ. ಇದರಿಂದಾಗಿ ಇಂತಹ ಯೋಜನೆಗಳು ಕೇವಲ ಕಣ್ಣೊರೆಸುವ ತಂತ್ರಗಳಾಗಿವೆ.

Other South Indian states including Karnataka have been overlooked Says HK Patil

ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳನ್ನು ಕಡೆಗಣಿಸಿದೆ. ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಗೆ ತರುವ ಪ್ರಸ್ತಾಪಿಸಿರುವ ಹಣಕಾಸು ಸಚಿವರು ಸಹಕಾರಿ ರಂಗದ ಬ್ಯಾಂಕ್ಗಳು ಮತ್ತು ಇತರ ಪತ್ತಿನ ಸಹಕಾರಿ ಸಂಘಗಳ ಕಾರ್ಯನಿರ್ವಹಣೆಗೆ ಅಡೆತಡೆ ತರುವ ಕೆಲವು ಕೇಂದ್ರದ ನೀತಿಗಳ ಕುರಿತು ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ.

"ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ-2" 1 ಕೋಟಿ ನಗರ ಪ್ರದೇಶದ ಬಡವರು ಮತ್ತು ಮಧ್ಯಮವರ್ಗದ ಕುಟುಂಬದವರಿಗೆ ವಸತಿ ಯೋಜನೆ ಒದಗಿಸುವ ಉದ್ದೇಶಕ್ಕಾಗಿ ರೂ.10.00 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿರುವುದಾಗಿ ಹೇಳಿದೆ. ಆದರೆ "ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ-1" 2 ಕೋಟಿ ಮನೆಗಳನ್ನು ಒದಗಿಸುವ ಯೋಜನೆ ಕಾರ್ಯಗತಗೊಂಡಿಲ್ಲ. ಇದೊಂದು ಕೇವಲ ಕಾಗದದ ಹುಲಿಯಾಗಿದೆ.

ಕೇಂದ್ರ ಸರ್ಕಾರದ ಈ ಮುಂಗಡ ಪತ್ರವು ಕೇವಲ ಶ್ರೀಮಂತರು, ಮೇಲ್ಮಧ್ಯಮ ವರ್ಗದವರ ಅವಶ್ಯಕತೆಗಳನ್ನು ಪೂರೈಸುವತ್ತ ಅತೀ ಹೆಚ್ಚು ಗಮನಹರಿಸಿದ್ದು, ಬಡವರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಜನಾಂಗದ ಹಾಗೂ ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರ ಅವಕಾಶ ವಂಚಿತ ಜನರ ಕಲ್ಯಾಣಕ್ಕಾಗಿ ಪರಿಣಾಮಕಾರಿಯಾದ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ.

ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಯಾವುದೇ ಯೋಜನೆಗಳನ್ನು ಪ್ರಕಟಿಸದ ಕೇಂದ್ರ ಸರ್ಕಾರ ರಾಷ್ಟçದ ಜನತೆಗೆ ನಿರಾಸೆ ಮೂಡಿಸಿದೆ. ಕರ್ನಾಟಕದ ಯಾವುದೇ ಪರಿಣಾಮಕಾರಿ ನೀರಾವರಿ ಯೋಜನೆಯಾಗಲಿ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ರೀತಿಯ ಹಣ ಒದಗಿಸದೇ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮತ್ತು ಐಐಟಿಗಳ ಪ್ರಸ್ತಾಪಗಳಿಲ್ಲದೇ ಮಂಡಿಸಿರುವ ಈ ಮುಂಗಡ ಪತ್ರ ಕರ್ನಾಟಕದ ಜನತೆಗೆ ಬಿಜೆಪಿ ಭ್ರಮನಿರಸನಗೊಳಿಸಿದೆ.

ಯಾವುದೇ ದೂರದೃಷ್ಟಿಯಿಲ್ಲದ ಪುರೋಗಾಮಿಯಾಗಿರದ ಈ ಮುಂಗಡ ಪತ್ರ ರಾಷ್ಟ್ರದ ಜನತೆಗೆ ಸಂಪೂರ್ಣವಾಗಿ ಮೋಸಗೊಳಿಸಿದೆ. ಆದರೆ ಈ ಮುಂಗಡ ಪತ್ರದ ಭಾಷಣದಲ್ಲಿ ಅರ್ಥ ಸಚಿವೆ ಶ್ರೀಮತಿ. ನಿರ್ಮಲ ಸೀತಾರಾಮನ ರವರು ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪುಟ 30ರಲ್ಲಿ ವಿವರಿಸಿರುವ ಉದ್ಯೋಗಕ್ಕೆ ಉತ್ತೇಜನ ನೀಡುವ ವಿಷಯವನ್ನು ಬಜೆಟ್ನಲ್ಲಿ ಅಳವಡಿಸಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ನಿರುದ್ಯೋಗಿಗಳಿಗೆ ಅಪ್ರೆಂಟಿಸ್ಶಿಪ್ ಭತ್ಯೆಯೊಂದಿಗೆ ಯಥಾವತ್ತಾಗಿ ಕಾಂಗ್ರೆಸ್ನ ಕಾರ್ಯಕ್ರಮವನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಯ ಪರಿಣಾಮಕಾರಿ ಯೋಜನೆಯನ್ನು ಅತ್ಯಂತ ವ್ಯಾಪಕವಾಗಿ ಬಿಂಬಿಸಿರುವುದಕ್ಕೆ ಅಭಿನಂದಿಸುವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+