• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದ್ಯದಂಗಡಿ ಓಪನ್: ಹಂಗೂ ಮಾತಾಡುವ ಸಿದ್ದರಾಮಯ್ಯ ಹಿಂಗೂ ಮಾತಾಡುತ್ತಾರೆ

|

42ದಿನಗಳ ಘೋರ ವನವಾಸದಲ್ಲಿದ್ದ ಮದ್ಯಪ್ರಿಯರು, ಮೇ ನಾಲ್ಕರಂದು ನಭೂತೋ ನಭವಿಷ್ಯತಿಃ ಎನ್ನುವ ಹಾಗೇ ಮದ್ಯದಂಗಡಿಗಳಿಗೆ ಸ್ವಾಗತವನ್ನು ಕೋರಿದ್ದಾರೆ. ಇವರು ತೋರಿದ ಪ್ರೀತಿಗೆ ಟ್ವಿಟ್ಟರ್ ಕೂಡಾ ಗೌರವ ತೋರಿ 'ಲಿಕ್ಕರ್ ಹ್ಯಾಷ್ ಟ್ಯಾಗ್' ಟ್ರೆಂಡಿಂಗ್ ನಲ್ಲಿತ್ತು.

   ಸಾರಾಯಿ ಕುಡಿಯೋದಕ್ಕೆ ದುಡ್ಡಿರುತ್ತೆ ಅಕ್ಕಿ‌ ಕೊಳ್ಳೋಕೆ ದುಡ್ಡಿರಲ್ವಾ?ಅಂತವರ ಮನೆಗೆ ಅಕ್ಕಿ ಕೊಡಬೇಡಿ | Swamiji

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಸೋಮವಾರ, ಎಲ್ಲೆಲ್ಲೂ ಮದ್ಯದಂಗಡಿ ಓಪನ್ ಆಗಿದ್ದೇ ಸುದ್ದಿ. ಸಾಮಾಜಿಕ ತಾಣದಲ್ಲಿ ಈ ವಿಚಾರದಲ್ಲಿ ಹರಿದಾಡುತ್ತಿದ್ದ ತರಹೇವಾರಿ ಮೀಮ್ಸ್ ಗಳಿಗೆ ಲೆಕ್ಕವೇ ಇರಲಿಲ್ಲ.

   ಡೆಡ್ಲಿ ಕೊರೊನಾ ವೇಳೆ, ಮತ್ತೆರಡು ಭಯಾನಕ ವೈರಸ್ ಬಗ್ಗೆ ಎಚ್ಚರಿಸಿದ ಪ್ರಧಾನಿ ಮೋದಿ

   ಕೆಲವೊಂದು ಕಡೆ ಅತ್ಯಂತ ಶಿಸ್ತಿನಿಂದ, ಮತ್ತಷ್ಟು ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಲದೇ, ಜನ ಮದ್ಯ ಖರೀದಿಸುತ್ತಿದ್ದರು. ಮೊದಲ ದಿನ ಸುಮಾರು 42 ಕೋಟಿ ರೂಪಾಯಿ ಮೌಲ್ಯದ ಮದ್ಯ ಸೇಲ್ ಆಗಿತ್ತು.

   ಮದ್ಯದಂಗಡಿ ತೆರವುಗೊಳಿಸಿದ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆದರೆ, ಅವರು ವಾರದ ಹಿಂದೆ ನೀಡಿದ್ದ ಹೇಳಿಕೆಗೂ, ಈಗಿನ ಹೇಳಿಕೆಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ.

   ಮದ್ಯದಂಗಡಿ ತೆರೆದ ಸರ್ಕಾರದ ನಿರ್ಧಾರವನ್ನ ಖಂಡಿಸಿದ ಸಿದ್ಧರಾಮಯ್ಯ

   ಮದ್ಯದ ಅಂಗಡಿ ತೆರೆಯುವುದು ಉತ್ತಮ

   ಮದ್ಯದ ಅಂಗಡಿ ತೆರೆಯುವುದು ಉತ್ತಮ

   "ರಾಜ್ಯದ ಆರ್ಥಿಕ ಹಿತಾದೃಷ್ಟಿಯಿಂದ ಮದ್ಯದ ಅಂಗಡಿ ತೆರೆಯುವುದು ಉತ್ತಮ. ಗ್ರೀನ್ ಝೋನ್ ವಲಯಗಳಲ್ಲಿ ಮದ್ಯದಂಗಡಿ ತೆರೆದರೆ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಣ ಸಂದಾಯವಾಗಲಿದೆ. ಅಬಕಾರಿ ಸುಂಕ ಬಂದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಸ್ವಲ್ಪವಾದರೂ ಸುಧಾರಿಸಬಹುದು" ಎಂದು ಸಿದ್ದರಾಮಯ್ಯ ಏಪ್ರಿಲ್ 28ರಂದು ಹೇಳಿದ್ದರು.

   ಸಿದ್ದರಾಮಯ್ಯ ಮಾಡಿದ ಟ್ವೀಟ್

   ಮದ್ಯದಂಗಡಿ ತೆರೆದ ನಂತರ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ ಹೀಗೆ,"ಮದ್ಯದಂಗಡಿ ತೆರೆದದ್ದು @CMofKarnataka ಅವರ ಅವಸರದ ಮತ್ತು ಪೂರ್ವ ಸಿದ್ದತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ".

   ಕೊರೊನಾ ಸೋಂಕು ಉಲ್ಭಣಿಸಿದರೆ

   ಕೊರೊನಾ ಸೋಂಕು ಉಲ್ಭಣಿಸಿದರೆ

   "ಇದರಿಂದಾಗಿ ಕೊರೊನಾ ಸೋಂಕು ಉಲ್ಭಣಿಸಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ರೆಡ್ ಝೋನ್ ಗಳಲ್ಲಿ ಮದ್ಯದಂಗಡಿ ತೆರೆದಿದ್ದಕ್ಕೆ ಸಿದ್ದರಾಮಯ್ಯ, ವಿರೋಧ ಪಡಿಸುತ್ತಿದ್ದಾರೋ, ಎನ್ನುವುದರ ಬಗ್ಗೆ ಟ್ವೀಟ್ ನಲ್ಲಿ ಸ್ಪಷ್ಟನೆಯಿಲ್ಲ.

   ಹಂಗೂ ಹೇಳುವ ಸಿದ್ದರಾಮಯ್ಯ ಹಿಂಗೂ ಹೇಳುತ್ತಾರೆ

   ಹಂಗೂ ಹೇಳುವ ಸಿದ್ದರಾಮಯ್ಯ ಹಿಂಗೂ ಹೇಳುತ್ತಾರೆ

   "ಹಸಿರು ವಲಯದಲ್ಲಿ ಷರತ್ತುಗಳನ್ನು ವಿಧಿಸಿ ಮದ್ಯದಂಗಡಿ ತೆರೆಯಲು ಅನುಮತಿಯನ್ನು ನೀಡಬಹುದು. ಇದೊಂದು ರಾಜ್ಯದ ಆರ್ಥಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ" ಎಂದು ಸಿದ್ದರಾಮಯ್ಯ ವಾರದ ಹಿಂದೆ ಹೇಳಿದ್ದರು.

   English summary
   Karnataka Opposition Leader Siddaramaiah Dual Stand On Liquor Ban Lifted,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X