ಸಿದ್ದರಾಮಯ್ಯ, "ಪುರಾಣ ಹೇಳೋಕೆ, ಬದನೇಕಾಯಿ ತಿನ್ನೋಕೆ", ಗಳಸ್ಯ-ಕಂಠಸ್ಯ
ರಾಜ್ಯ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರೇ ಪುರಾಣ ಹೇಳೋಕೆ, ಬದನೇಕಾಯಿ ತಿನ್ನೋಕೆ ಎಂಬ ಗಾದೆ ಮಾತಿದೆ. ಅದೇ ತರ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಾತಿಗೂ ಕೃತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ...
ಈಗೊಂದು ಆರೋಪವನ್ನು ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಸರ್ಕಾರವನ್ನು ಜಾಡಿಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಶಾಂತಿ ಸೌಹಾರ್ದತೆಯ ನಿಗ್ರಹ, ಸಾಮರಸ್ಯ ಕೆಡಿಸುವವರ ನಿರ್ಮೂಲನೆ, ಕಠಿಣ ಶಿಕ್ಷೆ, ವಿಧ್ವಂಸಕ ಕೃತ್ಯಗಳನ್ನು ಧೈರ್ಯ ಮತ್ತು ಶೌರ್ಯದಿಂದ ದಮನ ಮಾಡುವುದು, ಕಾನೂನು ಸುವ್ಯವಸ್ಥೆಯಿಂದ ಅಶಾಂತಿ ನಿವಾರಣೆ, ಪ್ರಚೋದನೆ ನೀಡುವವರ ನಿರ್ಮೂಲನೆ ಮಾಡ್ತಿದ್ದೀವಿ ಎಂದಿದೆ ಈ ರೀತಿ ಜನರ ದುಡ್ಡಲ್ಲಿ ಪುಟಗಟ್ಟಲೆ ಜಾಹೀರಾತು

ಹಾಕಿಸಿರುವ ಕಾಂಗ್ರೆಸ್ ಸರ್ಕಾರ, ಈಗ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ ಪುಂಡರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಾಸ್ ಪಡೆಯುವ ಮೂಲಕ ಮತಾಂಧರ ರಕ್ಷಣೆ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಕರ್ಣಾಟಕವನ್ನು ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಅಶಾಂತಿಯ ರಾಜ್ಯವನ್ನಾಗಿ ಮಾಡಿದ್ದರು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ದೇಶದ್ರೋಹಿ ಪಿಎಫ್ಐ ಸದಸ್ಯರ ವಿರುದ್ಧವಿದ್ದ 1,700 ಕ್ರಿಮಿನಲ್ ಪ್ರಕರಣಗಳನ್ನು ವಜಾ ಮಾಡಿದ್ದರು. ಅಲ್ಲದೇ ಜೈಲಿನಲ್ಲಿದ್ದ 175 ಪಿಎಫ್‌ಐ ಗೂಂಡಾಗಳನ್ನು ಬೀದಿಗೆ ಬಿಟ್ಟು ಕೋಮುಗಲಭೆಯಲ್ಲಿ ತೊಡಗಿಕೊಳ್ಳಲು ಪ್ರಚೋದನೆ ಮಾಡಿದ್ದೇ ಈ ಕಾಂಗ್ರೆಸ್ ಸರ್ಕಾರ ಎಂದು ಅಶೋಕ್ ಅವರು ಆರೋಪಿಸಿದ್ದಾರೆ.
ಗಳಸ್ಯ-ಕಂಠಸ್ಯ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಮತೀಯ ಮೂಲಭೂತವಾದಿಗಳ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಸದಾ "ಸಿದ್ಧ"ವಾಗಿರುತ್ತದೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯ ಹಿಂದಿರುವ ಮತಾಂಧರಿಗೂ ಇಷ್ಟರಲ್ಲೇ ಕ್ಲೀನ್ ಚಿಟ್ ಕೊಟ್ಟು ಖುಲಾಸೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ.
"ಪುರಾಣ ಹೇಳೋಕೆ, ಬದನೇಕಾಯಿ ತಿನ್ನೋಕೆ' ಎಂಬ ಗಾದೆ ಮಾತಿನಂತೆ ಸಿಎಂ @siddaramaiah ನೇತೃತ್ವದ @INCKarnataka ಸರ್ಕಾರದ ಮಾತಿಗೂ ಕೃತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ.
— R. Ashoka (@RAshokaBJP) October 11, 2024
ಶಾಂತಿ ಸೌಹಾರ್ದತೆಯ ನಿಗ್ರಹ, ಸಾಮರಸ್ಯ ಕದಡುವವರ ನಿರ್ಮೂಲನೆ, ಕಠಿಣ ಶಿಕ್ಷೆ, ವಿಧ್ವಂಸಕತೆಯನ್ನ ಧೈರ್ಯ ಮತ್ತು ಶೌರ್ಯದಿಂದ ದಮನ, ಕಾನೂನು ಸುವ್ಯವಸ್ಥೆಯಿಂದ ಅಶಾಂತಿ… https://t.co/6RUuSU3U9K
ಮುಂದುವರಿದು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರ ಬಗ್ಗೆ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದರು. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಎಂದು, ಡಿಜಿ ಹಳ್ಳಿ- ಕೆಜಿ ಹಳ್ಳಿಯ ಪಿಎಫ್ಐ ಗಲಭೆಕೋರರು ಅಮಾಯಕರು ಎಂದಿದ್ದರು. ಈಗ ನಾಗಮಂಗಲದಲ್ಲಿ ನಡೆದ ಕೋಮುದಳ್ಳುರಿ ಸಣ್ಣ ಆಕಸ್ಮಿಕ ಘಟನೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಲು ಬಿಸ್ನೆಸ್ ರೈವಲರಿ ಕಾರಣ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸುವುದು ತಪ್ಪೇ ಅಲ್ಲ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಕಾಂಗ್ರೆಸ್‌ನ ತುಘಲಕ್ ದರ್ಬಾರ್‌ನಿಂದಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 15 ತಿಂಗಳಲ್ಲಿಯೇ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಶಾಂತಿಯ ಬೀಡನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಮತಾಂಧ ರಾಕ್ಷಸರಿಗೆ ರಕ್ಷಣೆ ನೀಡುವ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ತಾಯಿ ಚಾಮುಂಡೇಶ್ವರಿ ಎಂದಿಗೂ ಕ್ಷಮಿಸುವುದಿಲ್ಲ ಎಂದು ಟೀಕಿಸಿದ್ದಾರೆ.












Click it and Unblock the Notifications