ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಏಕೈಕ ಸೈಬರ್‌ ಕ್ರೈಂ ಠಾಣೆಗೆ ಬೆರಳೆಣಿಕೆಯಷ್ಟು ಸಿಬ್ಬಂದಿ!

By Nayana
|
Google Oneindia Kannada News

ಬೆಂಗಳೂರು, ಮೇ.02: ರಾಜ್ಯದ ಏಕೈಕ ಸೈಬರ್ ಪೊಲೀಸ್ ಠಾಣೆ ಬೆಂಗಳೂರು ಪೊಲೀಸ್ ಆಯುಕ್ತರ ಕಾರ್ಯಾಲಯದ ಆವರಣದಲ್ಲಿ ಆರಂಭಗೊಂಡು ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ 6 ಸಾವಿರ ಪ್ರಕರಣಗಳು ದಾಖಲಾಗಿದೆ. ಆದರೆ ಕೇವಲ ಶೇ.4 ರಷ್ಟು ಪ್ರಕರಣಗಳನ್ನು ಬಗೆಹರಿಸುವಲ್ಲಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಸೈಬರ್ ಪೊಲೀಸ್ ಠಾಣೆಯಲ್ಲಿ ಅತಿ ಕಡಿಮೆ ಸಿಬ್ಬಂದಿ ಇರುವುದರಿಂದ ತನಿಖೆ ವಿಳಂಬವಾಗುತ್ತಿದ್ದು, ಬಹುತೇಕ ಪ್ರಕರಣಗಳು ಬಾಕಿ ಉಳಿದಿರಲು ಕಾರಣವಾಗಿದೆ. ಕೇವಲ 26 ಅಧಿಕಾರಿಗಳು ಸೈಬರ್ ಠಾಣೆಗೆ ನೀಡಲಾಗಿದ್ದು, ಆ ಪೈಕಿ ಒಬ್ಬ ಇನ್ಸ್‌ ಪೆಕ್ಟರ್, ಇಬ್ಬರು ಸಬ್ ಇನ್‌ಸ್ಪೆಕ್ಟರ್, ಹಾಗೂ ಮೂವರು ಎಎಸ್‌ಐ ಗಳು ಹಾಗೂ 20 ಕಾನ್‌ ಸ್ಟೆಬಲ್ ಗಳನ್ನು ಒದಗಿಸಲಾಗಿದೆ.

ಶಾಲೆಗಳಿಗೆ ಕೇಂದ್ರದ ಸೈಬರ್ ಮಾರ್ಗಸೂಚಿ: ಏನೇನು ನಿರ್ಬಂಧ? ಶಾಲೆಗಳಿಗೆ ಕೇಂದ್ರದ ಸೈಬರ್ ಮಾರ್ಗಸೂಚಿ: ಏನೇನು ನಿರ್ಬಂಧ?

ಹೀಗಾಗಿ ಪ್ರತಿಯೊಬ್ಬ ಅಧಿಕಾರಿ ಸರಿಸುಮಾರು 236 ಪ್ರಕರಣಗಳನ್ನು ಪತ್ತೆ ಹಚ್ಚುವ ಅನಿವಾರ್ಯತೆ ಎದುರಾಗಿದೆ. ಆದರೆ ದಿನದಿಂದ ದಿನಕ್ಕೆ ಪ್ರಕರಣಗಳ ದಾಖಲಾಗುವ ಪ್ರಮಾಣ ಏರುತ್ತಲೇ ಇದ್ದು, ಈಗಾಗಲೇ ಸೈಬರ್ ಪೊಲೀಸ್‌ಠಾಣೆಯಲ್ಲಿ ಇರುವ ದಾಖಲಾತಿಗಳ ಪ್ರಕಾರ 2218 ಪ್ರಕರಣಗಳು ಕಳೆದ 109 ದಿನಗಳಲ್ಲಿ ದಾಖಲಾಗಿದೆ.

Only 26 cops to deal with over 6k cyber crime cases

2018ರ ಜನವರಿ 1 ರಿಂದ ಏಪ್ರಿಲ್ 16ರ ಒಳಗಾಗಿ ಇಷ್ಟು ಸಂಖ್ಯೆಯ ಇದೇ ಅವಧಿಯಲ್ಲಿ ಕಳೆದ ವರ್ಷ 2020 ಪ್ರಕರಣಗಳು ದಾಖಲಾಗಿದ್ದವು. ದಾಖಲಾದ 2118 ಪ್ರಕರಣಗಳಲ್ಲಿ ಸಿಸುಮಾರು 1009 ಪ್ರಕರಣಗಳು ಸಣ್ಣಪುಟ್ಟ ಪುಟ್ಟ ಪ್ರಕರಣಗಳು ಎಂದು ವಿಂಗಡಿಸಲಾಗಿದೆ. ಗೃಹ ಇಲಾಖೆ ಅಂಕಿ ಅಂಶಗಳ ಪ್ರಕಾರ 1128 ಪ್ರಕರಣಗಳು ಗಂಭೀರ ಆರ್ಥಿಕ ಅಫರಾದ ಪ್ರಕರಣಗಳಾಗಿದ್ದು, 1090 ಪ್ರಕರಣಗಳು ಸಾಮಾನ್ಯ ಪ್ರಕರಣಗಳು ಎಂದು ವಿಂಗಡಿಸಲಾಗಿದೆ.

ಆರ್ಥಿಕ ಅಪರಾಧಗಳಲ್ಲಿ 10 ಸಾವಿರಕ್ಕೂ ಕಡಿಮೆ ಮೊತ್ತದ ಮೋಸ ಅಥವಾ ವಂಚನೆ ಪ್ರಕರಣಗಳನ್ನು ಸಾಮಾನ್ಯ ಪ್ರಕರಣಗಳು ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕದ ಏಕೈಕ ಸೈಬರ್ ಪೊಲೀಸ್‌ ಠಾಣೆಯಲ್ಲಿ ಅತಿ ಕಡಿಮೆ ಸಿಬ್ಬಂದಿ ಹಾಗೂ ಮೂಲಸೌಕರ್ಯದ ಕೊರತೆ ಇದೆ. ಇದರಿಂದ ತನಿಖೆ ನಿಧಾನವಾಗುತ್ತದೆ ಎಂದು ಅಪರಾಧ ವಿಭಾಗದ ಜಂಟಿ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ಸೈಬರ್ ಕ್ರೈಂ ಅಪರಾಧದಲ್ಲಿ ಭಾಗಿಯಾದ ಬಹುತೇಕ ಅಪರಾಧಿಗಳು ಸುಸಕ್ಷಿತ ಹಾಗೂ ಸಾಮಾಜಿಕವಾಗಿ ಉತ್ತಮ ಸ್ಥಾನಮಾನವನ್ನು ಹೊಂದಿದ ಇಲ್ಲವೇ, ತಲೆ ಮರೆಸಿಕೊಂಡು ಬದುಕುತ್ತಿರುವ ಸುಶಿಕ್ಷಿತರೇ ಆಗಿರುವುದರಿಂದ ಇಂತಹ ಪ್ರಕರಣಗಳ ಪತ್ತೆಗೆ ಇಲಾಖೆ ಹೆಚ್ಚಿನ ಸೌಲಭ್ಯ ಹೊಂದಬೇಕಾಗುತ್ತದೆ. ಅಂತಹ ಸೌಲಭ್ಯ ಗಳು ಇಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

English summary
Since its inception in April last year, the only police station dedicated to cyber crimes in the state, located on the premises of the commissioner’s office in Bengaluru, has registered over 6,000 complaints. And yet the number of cases solved is an abysmal 4%. Officers say this is largely because the station is understaffed. Only 26 officers are attached to the station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X