• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರಕ್ಕೆ 100 ದಿನ: ಸಾಧನೆಗೆ ಎಷ್ಟು ಅಂಕ?

|

ಬೆಂಗಳೂರು, ಆಗಸ್ಟ್ 30: ಕರ್ನಾಟಕದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಇಂದಿಗೆ ನೂರು ದಿನ ಪೂರೈಸಿದೆ. ಹಲವು ತೊಡಕುಗಳ ನಡುವಲ್ಲೂ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರದ ನೂರು ದಿನಗಳ ಸಾಧನೆ ಹೇಗಿತ್ತು ಎಂಬ ಒನ್ ಇಂಡಿಯಾ ಪ್ರಶ್ನೆಗೆ ಓದುಗರು ಉತ್ತರಿಸಿದ್ದಾರೆ.

ಇದರಲ್ಲಿ 20.36% ಓದುಗರು ಉತ್ತಮ ಎಂದಿದ್ದರೆ, ಶೇ.20.21 ಜನ ಸಾಧಾರಣ ಎಂದಿದ್ದಾರೆ. ಆದರೆ ಶೇ.59.44% ಜನ ಕಳಪೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಶೇ.59 ರಷ್ಟು ಜನರಿಗೆ ಸರ್ಕಾರದ ಸಾಧನೆಯ ಬಗ್ಗೆ ತೃಪ್ತಿ ಇಲ್ಲ.

ಮೈತ್ರಿ ಸರ್ಕಾರಕ್ಕೆ 100 ದಿನ : ಮಾಡಿದ್ದೇನು?, ಮಾಡಬೇಕಿರುವುದೇನು?

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಸಂಪುಟ ವಿಸ್ತರಣೆಯ ಕುರಿತು ಜಟಾಪಟಿ ನಡೆದಿತ್ತು. ಎಷ್ಟೋ ದಿನಗಳವರೆಗೆ ಅದೇ ಗಲಾಟೆಯಲ್ಲಿ ಸರ್ಕಾರ ಮೈಮರೆತಿತ್ತು. ನಂತರ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಇಡಿ ರಾಜ್ಯವೂ ತತ್ತರಿಸಿತ್ತು. ಸಾಲಮನ್ನಾ ಘೋಷಣೆ, ಹಲವು ಜನಪರ ಯೋಜನೆಗಳನ್ನೊಳಗೊಂಡ ಬಜೆಟ್ ಕೇವಲ ದಕ್ಷಿಣ ಕರ್ನಾಟಕ ಭಾಗಕ್ಕಷ್ಟೇ ಸೀಮಿತವಾಗಿದೆ ಎಂಬ ದೂರು ಕೇಳಿಬಂತು. ಈ ಎಲ್ಲಾ ಕಾರಣಗಳಿಂದ ಸಮ್ಮಿಶ್ರ ಸರ್ಕಾರಕ್ಕೆ ಸಿಕ್ಕ ಅಂಕ ಅಷ್ಟಕ್ಕಷ್ಟೆ.

ಸಮ್ಮಿಶ್ರ ಸರ್ಕಾರದ ನೂರು ದಿನದ ಸಾಧನೆ ಬಗ್ಗೆ ಒನ್ ಇಂಡಿಯಾ ಓದುಗರು ಏನೆನ್ನುತ್ತಾರೆ ನೋಡಿ. ನಮ್ಮ ಪ್ರಶ್ನೆಗೆ 1200 ಕ್ಕೂ ಹೆಚ್ಚು ಓದುಗರು ಪ್ರತಿಕ್ರಿಯೆ ನೀಡಿದ್ದು, ಅವರಿಗೆಲ್ಲರಿಗೂ ಧನ್ಯವಾದಗಳು. ಇಲ್ಲಿ ಆಯ್ದ ಕೆಲವು ಕಮೆಂಟ್ ಗಳನ್ನು ನೀಡಲಾಗಿದೆ.

ಸರ್ಕಾರ ಪಥನವಾಗುವ ಕನಸು ಕಾಣುತ್ತಿದೆ ಬಿಜೆಪಿ: ಸಿದ್ದರಾಮಯ್ಯ

5 ವರ್ಷದ ಕೆಲಸ 100 ದಿನದಲ್ಲೇ ಮುಗಿಸಿದರು!

5 ವರ್ಷದ ಕೆಲಸ 100 ದಿನದಲ್ಲೇ ಮುಗಿಸಿದರು!

ಐದು ವರ್ಷ ಮಾಡುವ ಕೆಲಸ ಕೇವಲ ನೂರು ದಿನಗಳಲ್ಲಿ ಮಾಡಿ ತೋರಿಸಿದರು ಮಾನ್ಯ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿ ರವರು ಎಂದು ಸರ್ಕಾರದ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ದೇವರಾಜ್ ಶಿಂಧೆ.

ಸಮ್ಮಿಶ್ರ ಸರ್ಕಾರಕ್ಕೆ ಶತದಿನ: ಬೆಳಗ್ಗೆದ್ದು ಯಾರ್ಯಾರ ನೆನೆದರು ಎಚ್ಡಿಕೆ?

ಕರ್ನಾಟಕದಲ್ಲಿ ಸರ್ಕಾರವಿದೆಯಾ?

ಕರ್ನಾಟಕದಲ್ಲಿ ಸರ್ಕಾರವಿದೆಯಾ?

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವೊಂದಿದೆಯಾ? ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರವಲ್ಲ, ಅಪ್ಪ-ಮಕ್ಕಳ ಸರ್ಕಾರ. ಮಾಧ್ಯಮಗಳ ವರದಿ ಪ್ರಕಾರ ಸಿಎಂ ಡಿಸಿಎಂ ಇಬ್ಬರೂ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಸಿದ್ದರಾಮಯ್ಯ ಬಗ್ಗೆ ದದೂರು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ದೂರು ಹೇಳುವುದಕ್ಕೆ ಕುಮಾರಸ್ವಾಮಿ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ ಸ್ಟಾನ್ಲಿ ಮಾಬೆನ್.

ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ಶತಃಸಿದ್ಧ: ಪರಂ

ಮೂರು ತಿಂಗಳಲ್ಲಿ ಹೇಳೋದು ಕಷ್ಟ!

ಮೂರು ತಿಂಗಳಲ್ಲಿ ಹೇಳೋದು ಕಷ್ಟ!

3 ತಿಂಗಳಲ್ಲಿ ಯಾವುದೇ ಸರ್ಕಾರವನ್ನು ಅಳೆಯುವುದು ಬಹಳ ಕಷ್ಟ. ಆದಕಾರಣ 57 ತಿಂಗಳ ನಂತರ ಹೇಳಬಹುದು! ಆಮೇಲೆ ವಾಸ್ತುವಿನ ಪ್ರಕಾರ ಹಾಗೂ ದೇವರು ಪ್ರಕಾರ, ವಾಸ್ತವಿಕವಾಗಿ, ಕರ್ನಾಟಕ ಜನತೆಗೆ ಪ್ರಣಾಳಿಕೆಯ ಪ್ರಕಾರ ಹಾಗೂ 2 ಬಜೆಟ್ಟಿನ ಪ್ರಕಾರ, ನಿಖರವಾದ ಮಾಹಿತಿಯನ್ನು ಒದಗಿಸಬಹುದು ಎಂದಿದ್ದಾರೆ ಶಿದ್ರಾಮಗೌಡ ಕರೆಗೌಡ್ರ.

ಬೆಂಗಳೂರು ನಗರಕ್ಕೆ ಏನೂ ಮಾಡಿಲ್ಲ!

ಬೆಂಗಳೂರು ನಗರಕ್ಕೆ ಏನೂ ಮಾಡಿಲ್ಲ!

ಬೆಂಗಳೂರು ನಗರ ಕ್ಕೆ ಏನೂ ಮಾಡಿಲ್ಲ. ನಾಲಾಯಕ್ ಸಚಿವ ರನ್ನು ಒಮ್ಮೆ ಆಡಿ೯ನರಿ ಕಾರ್ ನಲ್ಲಿ ನಗರ ಪ್ರದಕ್ಷಿಣೆ ಮಾಡಿಸಬೇಕು. ಕಡೇಪಕ್ಷ ಚಾಮರಾಜ ಪೇಟೆ ಯಿಂದ ಗೂಡ್ಸ್ ಶೆಡ್ ರೋಡ್ ನಲ್ಲಿ ಕರೆದು ಕೊಂಡು ಹೋಗಿ ಕಾಟನ್ ಪೇಟೆ ಮೈನ್ ರೋಡ್ ನಲ್ಲಿ ಚಾಮರಾಜ ಪೇಟೆ ಗೆ ಕರೆದುಕೊಂಡು ಹೋಗಬೇಕು ಎಂದಿದ್ದಾರೆ ಕೃಷ್ಣಮೂರ್ತಿ.

ರೈತರ ಬಾಳು ಹಸನಾಗುತ್ತದೆ

ರೈತರ ಬಾಳು ಹಸನಾಗುತ್ತದೆ

ಉತ್ತಮ ಕೆಲಸ ಮಾಡುವವರನ್ನು ನೋಡಿ ಸಂಕಟಪಟ್ಟು ಕಾಲೆಯುವವರು ಬಹಳಷ್ಟಿದ್ದಾರೆ. ಆದರೆ ಧೈಯ೯ದಿಂದ ನಡೆಸಿದರೆ ಎಲ್ಲವೂ ತನ್ನಿಂದ ತಾನೇ ದೂರಾಗಿ ರೈತರ ಬಾಳು ಹಸನಾಗುವದರಲ್ಲಿ ಸಂಶಯವಿಲ್ಲ.

ಯಾರ ಸಾಲಮನ್ನಾ ಆಯ್ತು?

ಯಾರ ಸಾಲಮನ್ನಾ ಆಯ್ತು?

ಆಡಳಿತ ಎಲ್ಲಿದೆ ? ಕೇವಲ ಸಾಲ ಮನ್ನಾಅಂತ ತುಪ್ಪ ಸವರಿದ್ದೆ ಬಂತು. ಅದ್ಯಾರ ಸಾಲ ಮನ್ನಾ ಆಯಿತು ಅಂತ ಗೊತ್ತಾಗಿಲ್ಲ ಎಂದಿದ್ದಾರೆ ಯುವರಾಜ್ ಹಿರಿಯೂರ್.

ಬಿಜೆಪಿಗಿಂತ ಉತ್ತಮ!

ಬಿಜೆಪಿಗಿಂತ ಉತ್ತಮ!

ಈ ಸರ್ಕಾರದ ಸಾಧನೆ ಉತ್ತಮವಾಗಿದೆ. ಬಿಜೆಪಿಗಿಂತ ಉತ್ತಮವಾಗಿದೆ. ಬಿಜಿಯಾಗಿದ್ದರೆ ಮೂರು ಮುಖ್ಯಮಂತ್ರಿಗಳನ್ನು ನೋಡಬೇಕಿತ್ತು. 100 ಬಾರಿ ದೆಹಲಿಗೆ ಪ್ರವಾಸ ಹೋಗಬೇಕಿತ್ತು! ಎಂದಿದ್ದಾರೆ ಕಾರ್ತಿಕ್ ಗೌಡ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS and Congress coalition government completes 100 days today. Here is result of Oneindia poll. 20% of our readers say performance of coalition government is good and other 20 says its average. Remaining readers say performance is very bad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more