ವಿಧಾನಪರಿಷತ್ ಸದಸ್ಯರು ಹೇಗೆ ಆಯ್ಕೆಯಾಗುತ್ತಾರೆ?

By: ಗುರು ಕುಂಟವಳ್ಳಿ
Subscribe to Oneindia Kannada

ಬೆಂಗಳೂರು, ಜೂನ್ 08 : ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಮತದಾನ ನಡೆಯಲಿದೆ. ಜೂನ್ 14ರಂದು ಏಳು ಸದಸ್ಯರು ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ವಿಧಾನಸಭೆ ಚುನಾವಣೆಗಳಂತೆ ವಿಧಾನಪರಿಷತ್ ಚುನಾವಣೆಗಳು ನಡೆಯುವುದಿಲ್ಲ. ವಿಧಾನಪರಿಷತ್ ಸದಸ್ಯರು ನೇರವಾಗಿ ಜನರಿಂದ ಆಯ್ಕೆ ಆಗುವುದಿಲ್ಲ. ದೇಶದಲ್ಲಿ ಏಳು ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅದರಲ್ಲಿ ಕರ್ನಾಟಕವೂ ಒಂದು. [ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?]

ವಿಧಾನಪರಿಷತ್ತನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ. ಬೇರೆ-ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಲಾಗುತ್ತದೆ. ಜನರಿಂದ ಚುನಾಯಿತರಾದ ಶಾಸಕರು ವಿಧಾನಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ.

legislative council

ಹೇಗೆ ಆಯ್ಕೆಯಾಗುತ್ತಾರೆ? : ವಿಧಾನಪರಿಷತ್ತಿಗೆ ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ. [ಪರಿಷತ್ ಚುನಾವಣೆಗೆ 2ನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ]

ಪರಿಷತ್ ಬಲಾಬಲ : ವಿಧಾನಪರಿಷತ್ತಿನ ಒಟ್ಟು ಸದಸ್ಯ ಬಲ 75. ಸದಸ್ಯರ ಅವಧಿ 6 ವರ್ಷಗಳು. ಇವರಲ್ಲಿ 3/1 ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ಸದ್ಯ, ವಿಧಾನಸಭೆಯಿಂದ ಆಯ್ಕೆಯಾದ 7 ಸದಸ್ಯರು ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. [ಪರಿಷತ್ ಚುನಾವಣಾ ಆಖಾಡಕ್ಕಿಳಿದ ವಾಟಾಳ್ ನಾಗರಾಜ್!]

ಸದಸ್ಯರ ಆಯ್ಕೆ

* ವಿಧಾನಸಭೆಯಿಂದ 25
* ಸ್ಥಳೀಯ ಸಂಸ್ಥೆಗಳ ಸದಸ್ಯರು, ಕ್ಷೇತ್ರದ ಎಂಪಿಗಳು, ಎಂಎಲ್‌ಎಗಳು 25
* ಶಿಕ್ಷಕ ಕ್ಷೇತ್ರದಿಂದ 7
* ಪದವೀಧರ ಕ್ಷೇತ್ರದಿಂದ 7
* ರಾಜ್ಯಪಾಲರು 11 ಸದಸ್ಯರನ್ನು ನಾಮಕರಣ ಮಾಡುತ್ತಾರೆ.

ಚುನಾವಣೆ ಬಲಾಬಲ : ವಿಧಾನಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಆಯ್ಕೆಯಾಗಲು 29 ಮತಗಳು ಬೇಕು. 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 8 ಅಭ್ಯರ್ಥಿಗಳಿದ್ದಾರೆ.

ಕಾಂಗ್ರೆಸ್ ಬಲಾಬಲ : ಚುನಾವಣೆಗೆ ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಅವರು ಕಾಂಗ್ರೆಸ್ ಅಭ್ಯರ್ಥಿಗಳು. ಒಟ್ಟು 4 ಅಭ್ಯರ್ಥಿಗಳಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 123 ಸದಸ್ಯ ಬಲ ಹೊಂದಿದೆ. ತಲಾ 30 ರಂತೆ 123 ಮತಗಳನ್ನು ಹಂಚಿಕೆ ಮಾಡಿದರೆ ಎಲ್ಲರೂ ಗೆಲುವು ಸಾಧಿಸಲಿದ್ದಾರೆ.

ಬಿಜೆಪಿಯ ನಂಬರ್ ಗೇಮ್ : ಬಿಜೆಪಿ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲನೇ ಅಭ್ಯರ್ಥಿ ವಿ.ಸೋಮಣ್ಣ, 2ನೇ ಅಭ್ಯರ್ಥಿ ಲೆಹರ್ ಸಿಂಗ್. ಸೋಮಣ್ಣ ಅವರಿಗೆ 29 ಮತಗಳು ಹಂಚಿಕೆಯಾದ ಬಳಿಕ 15 ಮತಗಳು ಉಳಿಯುತ್ತವೆ. ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಮೈತ್ರಿ ಮಾತುಕತೆ ಸಫಲವಾದರೆ ಇಬ್ಬರೂ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.

ಜೆಡಿಎಸ್ ಕಥೆ ಏನು? : ಜೆಡಿಎಸ್‌ ಪಕ್ಷದಿಂದ ನಾರಾಯಣ ಸ್ವಾಮಿ, ಡಾ.ವೆಂಕಟಪತಿ ಅವರು ಕಣದಲ್ಲಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್‌ನ 40 ಶಾಸಕರಿದ್ದಾರೆ. ಮೊದಲ ಅಭ್ಯರ್ಥಿ ನಾರಾಯಣ ಸ್ವಾಮಿ ಅವರಿಗೆ 29 ಮತಗಳು ಹಂಚಿಕೆಯಾದರೆ 11 ಮತಗಳು ಉಳಿಯುತ್ತವೆ.

ಬಿಜೆಪಿ ಮತ್ತು ಜೆಡಿಎಸ್ ತಮ್ಮ ಬಳಿ ಉಳಿಯುವ ಮತಗಳನ್ನು ಹಂಚಿಕೆ ಮಾಡಿಕೊಳ್ಳಲಿವೆ. ಇದರ ಆಧಾರದ ಮೇಲೆಯೇ ಮೈತ್ರಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಅಥವ ಜೆಡಿಎಸ್‌ನ ಎರಡನೇ ಅಭ್ಯರ್ಥಿಗಳಲ್ಲಿ ಒಬ್ಬರು ಗೆಲುವು ಸಾಧಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legislative council election will be held for 7 seats from Karnataka assembly on June 10, 2016. Know about Legislative council election.
Please Wait while comments are loading...