ಕಾವೇರಿ ವಿವಾದ, ಓಣಂ ನೆಪ ಕೇರಳಗರಿಗೆ ವಿಶೇಷ ರೈಲು

Posted By:
Subscribe to Oneindia Kannada

ಬೆಂಗಳೂರು, ಸೆ. 13: ಕಾವೇರಿ ವಿವಾದದಿಂದ ಕರ್ನಾಟಕದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಕೇರಳಿಗರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮನವಿ ಮಾಡಿದ್ದಾರೆ. ಜೊತೆಗೆ ಓಣಂ ವಿಶೇಷ ರೈಲುಗಳನ್ನು ಕೇರಳಕ್ಕೆ ಬಿಡುವಂತೆ ಕೋರಿದ್ದಾರೆ.

ಕೇರಳದ ಮನವಿಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರವು ಭಾರತೀಯ ರೈಲ್ವೆಗೆ ತುರ್ತು ಮನವಿ ಮಾಡಿಕೊಂಡಿದ್ದು, ಓಣಂ ಹಬ್ಬದ ಪ್ರಯುಕ್ತ ಮಂಗಳವಾರ ರೈಲ್ವೆ ನಿಗಮ ಬೆಂಗಳೂರಿನಿಂದ ಕೇರಳಕ್ಕೆ ಎರಡು ವಿಶೇಷ ರೈಲುಗಳ ಸಂಚಾರ ಆರಂಭಿಸಿವೆ.

ಯಶವಂತಪುರದಿಂದ ಕಣ್ಣಾನೂರಿಗೆ ವಿಶೇಷ ರೈಲು (ಸಂಖ್ಯೆ 06527) ಸಂಜೆ 6.50ಕ್ಕೆ ಯಶವಂತಪುರದಿಂದ ಹೊರಟು ಧರ್ಮಪುರಿ, ಸೇಲಂ, ಕೊಯಮತ್ತೂರು ಮತ್ತು ತಿರೂರು ಆಗಿ ಕಣ್ಣಾನೂರು ತಲುಪಲಿದೆ. [ಪ್ರಜೆಗಳನ್ನು ನೋಡಲು ಬಲಿ ಚಕ್ರವರ್ತಿ ಬರ್ತಾನಂತೆ!]

Onam Special Train special trains to bring Keralaites back from Karnataka

ಕಣ್ಣೂರಿನಿಂದ ಹುಬ್ಬಳ್ಳಿಗೆ (ರೈಲು ಸಂಖ್ಯೆ 06528) ರೈಲು ಬೆಳಗ್ಗೆ 11 ಗಂಟೆಗೆ ಕಣ್ಣಾನೂರಿನಿಂದ ಹೊರಡುವ ರೈಲು ತಿರೂರು, ಕೊಯಂಬತ್ತೂರು, ಧರ್ಮಪುರಿ, ಯಶವಂತಪುರ, ಅರಸೀಕೆರೆ, ದಾವಣಗೆರೆ ಮತ್ತು ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ ತಲುಪಲಿದೆ.

ಜನಸಾಧಾರಣ ವಿಶೇಷ ಎಕ್ಸ್ ಪ್ರೆಸ್ : (ರೈಲು ಸಂಖ್ಯೆ 06525/ 06526) ಬೆಂಗಳೂರಿನ ಕಂಠೀರವ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ತಿರುವನಂತಪುರಕ್ಕೆ ಸಂಚರಿಸಲಿದೆ. ಅದು ಬೆಳಗ್ಗೆ 11.15ಕ್ಕೆ ನಗರ ರೈಲು ನಿಲ್ದಾಣದಿಂದ ಧರ್ಮಪುರಿ, ಕೊಯಂಬತ್ತೂರು, ತ್ರಿಶೂರು, ಕ್ವಿಲ್ಲೊನ್ ಮತ್ತು ಕೊಚುವೆಲಿ ಮಾರ್ಗವಾಗಿ ತಿರುವನಂತಪುರಂ ತಲುಪಲಿದೆ.

ತಿರುವನಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಡುವ ರೈಲು ಕೊಚುವೇಲಿ, ಕ್ವಿಲಾನ್, ಎರ್ನಾಕುಲಂ, ತ್ರಿಶೂರು, ಕೊಯಂಬತ್ತೂರು ಮತ್ತು ಧರ್ಮಪುರಿಯಾಗಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Onam Special Train: Kerala chief minister requests railway minister to arranage special trains to bring Keralaites back from Karnataka
Please Wait while comments are loading...