Breaking; ಓಣಂ ಊಟ ಸವಿದ ಡಿಕೆಶಿ, ಟ್ವೀಟ್ ಬಾಣ ಬಿಟ್ಟ ಬಿಜೆಪಿ!

ಬೆಂಗಳೂರು, ಸೆಪ್ಟೆಂಬರ್ 09: ಕರ್ನಾಟಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಮುಂದುವರೆದಿದೆ. ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಟ್ವೀಟ್ ಮಾಡಿದ್ದ ಕಾಂಗ್ರೆಸ್‌ಗೆ ಈಗ ಬಿಜೆಪಿ ತಿರುಗೇಟು ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಓಣಂ ಊಟ ಸವಿದು ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಶುಕ್ರವಾರ ಟ್ವೀಟ್ ಮಾಡಿದೆ.

'ಕಾಂಗ್ರೆಸ್ಸಿಗರೇ, ನಮಗೂ ನಿಮ್ಮ ಹಾಗೆಯೇ, ಜನರು ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತ ವಿಪಕ್ಷದ ರಾಜ್ಯ ಅಧ್ಯಕ್ಷನಾಗಿ ಬೆಂಗಳೂರಿನಲ್ಲೇ ಇರಬೇಕಾಗಿತ್ತು. ಆದರೆ ಭಾರತ್‌ ಜೋಡೋ ಯಾತ್ರೆ, ಹಬ್ಬದೂಟದಲ್ಲಿ ತೊಡಗಿಕೊಂಡಿದ್ದಾರೆ, ಎಂತಹ ಅಪ್ರಬುದ್ಧ ಕೆಪಿಸಿಸಿ ಅಧ್ಯಕ್ಷ ಎನ್ನಬಹುದು. ಆದರೆ ನಾವು ಆ ಕೆಲಸ ಮಾಡುವುದಿಲ್ಲ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.

Onam Lunch By DK Shivakumar BJP Tweet

ಗುರುವಾರ ಡಿ. ಕೆ. ಶಿವಕುಮಾರ್ ಓಣಂ ಊಟ ಸವಿದಿದ್ದರು. ಈ ಕುರಿತ ಫೋಟೋ ಹಾಕಿ, 'ಕೇರಳದ ಸಂಸ್ಕೃತಿ, ವೈಭವದ ಪ್ರತೀಕವೇ ಓಣಂ. ಈ ಶುಭ ಸಂದರ್ಭದಲ್ಲಿ ಓಣಂ ಸಧ್ಯ (ಓಣಂ ಹಬ್ಬದೂಟ) ಸವಿಯುವ ಅವಕಾಶ ಒದಗಿ ಬಂತು' ಎಂದು ಬರೆದಿದ್ದರು.

ಬೆಂಗಳೂರು ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಸಂಸದ ತೇಜಸ್ವಿ ಸೂರ್ಯ ದೋಸೆ ಸವಿಯುತ್ತಿದ್ದರು. ಆಗ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಪಕ್ಷ, 'ಮತಿ 'ದೋಷ' ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ 'ದೋಸೆ' ತಿನ್ನಲು ಹೋಗುತ್ತಾರೆ!' ಎಂದು ಟೀಕಿಸಿತ್ತು.

'ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ
ತೇಜಸ್ವಿ ಸೂರ್ಯಗೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ. ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?' ಎಂದು ಪ್ರಶ್ನೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+