ಸಿದ್ದರಾಮಯ್ಯ ಸರ್ಕಾರಕ್ಕೆ ಕೃಷ್ಣ ಕೊಟ್ಟ ಸಲಹೆ ಏನು?

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಜುಲೈ 12 : 'ಡಿವೈಎಸ್‌ಪಿ ಆತ್ಮಹತ್ಯೆ ಸೇರಿದಂತೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಕಳವಳಕಾರಿ. ಈ ಬಗ್ಗೆ ಆಡಳಿತ ನಡೆಸುವವರು ಗಂಭೀರ ಚಿಂತನೆ ನಡೆಸಬೇಕು' ಎಂದು ಹಿರಿಯ ಕಾಂಗ್ರೆಸ್ ನಾಯಕ ಎಸ್‌.ಎಂ.ಕೃಷ್ಣ ಸಲಹೆ ನೀಡಿದ್ದಾರೆ.

ಉಡುಪಿಯಲ್ಲಿ ಸೋಮವಾರ ಸಂಜೆ ಖಾಸಗಿ ಹೋಟೆಲ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಎಸ್.ಎಂ.ಕೃಷ್ಣ ಅವರು, 'ಅಧಿಕಾರಿಗಳು ಮುಕ್ತ, ನಿರ್ಭಯವಾಗಿ ಕೆಲಸ ಮಾಡುವ ಸನ್ನಿವೇಶವನ್ನು ಆಡಳಿತ ನಡೆಸುವರು ಸೃಷ್ಟಿಸಬೇಕು. ಒಂದು ವೇಳೆ ಕುಂದು- ಕೊರತೆಗಳಿದ್ದರೆ ಯೋಗ್ಯ ಚೌಕಟ್ಟಿನಲ್ಲಿ ವಿಚಾರಣೆ ನಡೆಸಿ ಪರಿಹಾರ ಮಾಡುವ ವ್ಯವಸ್ಥೆ ಇರಬೇಕು' ಎಂದು ಹೇಳಿದರು. [ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ಕೊಡಿ]

SM Krishna

'ಎಲ್ಲ ಸರ್ಕಾರಗಳಿಗೂ ಒಂದಲ್ಲ ಒಂದು ಬಿಕ್ಕಟ್ಟು ಆಯಾ ಕಾಲಘಟ್ಟದಲ್ಲಿ ಬರುತ್ತವೆ. ರಾಜ್ಯದಲ್ಲಿ ನನ್ನ ಸರ್ಕಾರವಿದ್ದಾಗ ಬಂದಿದ್ದ ಬಿಕ್ಕಟ್ಟುಗಳ ಮುಂದೆ ಈ ಸರ್ಕಾರ ಎದುರಿಸುತ್ತಿರುವ ಬಿಕ್ಕಟ್ಟುಗಳೆಲ್ಲ ಗೌಣ. ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೀರಿ? ಎಂಬುದರಲ್ಲಿ ನಿಮ್ಮ ಸಾಮರ್ಥ್ಯ ಅಡಗಿದೆ' ಎಂದು ಕೃಷ್ಣ ತಿಳಿಸಿದರು. [ವಿಧಾನಸಭೆ ಅಧಿವೇಶನ: ಗಣಪತಿ ಆತ್ಮಹತ್ಯೆಯದ್ದೇ ಚರ್ಚೆ]

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ಈ ಬಗ್ಗೆ ವೈಯಕ್ತಿಕ ಪ್ರತಿಕ್ರಿಯೆ ನೀಡಲಾರೆ.ಆತ್ಮಹತ್ಯೆ ಪ್ರಕರಣ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ನಾನು ಸಮೀಪದಿಂದ ಕಂಡಿಲ್ಲ. ಆಡಳಿತ ನಡೆಸುವವರಿಗೆ ಈ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ಎಂಬುದಿದೆ. ಅದಕ್ಕೆ ತಕ್ಕಂತೆ ನಡೆಯಬೇಕು' ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'An environment needs to be created in which officers can work freely and without any fear. Some of the developments taking place in the state including suicides by police officers have been worrisome said, Senior Congress leader SM Krishna on July 11, 2016 at Udupi.
Please Wait while comments are loading...