ಹೊಸ ವಿದ್ಯುತ್ ಸಂಪರ್ಕಕ್ಕೆ ವಾಸ ದೃಢೀಕರಣ ಕಡ್ಡಾಯವಲ್ಲ

ಬೆಂಗಳೂರು, ಏ. 13 : ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳಿಂದ ಪಡೆದ ವಾಸ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ಇಂಧನ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಲಾಗಿದೆ. ಕೆಇಆರ್‌ಸಿ ಈ ಸುತ್ತೋಲೆಯನ್ನು ಪಾಲಿಸದಂತೆ ವಿದ್ಯುತ್ ಕಂಪನಿಗಳಿಗೆ ಸೂಚನೆ ನೀಡಿದೆ.

ವಿದ್ಯುತ್ ಗ್ರಾಹಕರ ಹಿತರಕ್ಷಣಾ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸ್ಥಳೀಯ ಸಂಸ್ಥೆಗಳಿಂದ ಪಡೆಯುವ ವಾಸ ದೃಢೀಕರಣ ಪತ್ರ ಕಡ್ಡಾಯವಲ್ಲ ಎಂದು ಹೇಳಿದೆ. ಹೊಸ ಸಂಪರ್ಕ ಪಡೆಯಲು ಕೆಇಆರ್‌ಸಿ ರೂಪಿಸಿರುವ ನಿಯಮಗಳು ಸರಿಯಾಗಿವೆ ಎಂದು ಸ್ಪಷ್ಟಪಡಿಸಿದೆ.

power

ಯಾವುದೇ ಪ್ರದೇಶದಲ್ಲಿ ವಾಸವಾಗಿರುವ ನಿವಾಸಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದರೆ ಅನ್ನು ಪೂರೈಕೆ ಮಾಡುವುದು ಎಸ್ಕಾಂಗಳ ಜವಾಬ್ದಾರಿ ಎಂದು ಕೆಇಆರ್‌ಸಿ ಹೇಳಿದೆ. ಇಂಧನ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಪಾಲಿಸದಂತೆ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ. [ಕರ್ನಾಟಕದಲ್ಲಿ ಮತ್ತೊಂದು ಪರಮಾಣು ಸ್ಥಾವರ ನಿರ್ಮಾಣ?]

ನಗರಾಭಿವೃದ್ಧಿ ಇಲಾಖೆಯು 2014ರ ಮೇನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಎಲ್ಲರಿಗೂ ವಾಸ ದೃಢೀಕರಣ ಪತ್ರ ನೀಡುವಂತೆ ಆದೇಶ ನೀಡಿತ್ತು. ಇದರ ಅನ್ವಯ ಇಂಧನ ಇಲಾಖೆ ಹೊಸ ಸಂಪರ್ಕ ಪಡೆಯಲು ದೃಢೀಕರಣ ಪತ್ರ ಅಗತ್ಯ ಎಂದು ಸುತ್ತೋಲೆ ಹೊರಡಿಸಿತ್ತು. [ಏ.1ರಿಂದ ವಿದ್ಯುತ್ ದರ ಎಷ್ಟು ಹೆಚ್ಚಾಗಿದೆ?]

ಕಟ್ಟಡಗಳ ಬೈಲಾ ಉಲ್ಲಂಘನೆ ಮತ್ತು ಒತ್ತುವರಿಗಳ ಮೇಲೆ ಗಮನ ವಹಿಸಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ವಿಳಾಸ ದೃಢೀಕರಣ ಪತ್ರ ನೀಡಲು ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿತ್ತು. ದೃಢೀಕರಣ ಪತ್ರ ನೀಡುವುದು ಕಡ್ಡಾಯ ಎಂದು ಇಂಧನ ಇಲಾಖೆ ಸುತ್ತೋಲೆ ಹೊರಡಿಸಿ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+