Get Updates
Get notified of breaking news, exclusive insights, and must-see stories!

HD Kumaraswamy: ನಾಮಧಾರಿ ಒಕ್ಕಲಿಗರಿಗೆ ಗುಡ್‌ ನ್ಯೂಸ್‌ ಕೊಟ್ಟ ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ನಾಮಧಾರಿ ಒಕ್ಕಲಿಗ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸುವ ಪ್ರಯತ್ನಕ್ಕೆ ನಾನು ಪ್ರಾಮಾಣಿಕವಾಗಿ ಬೆಂಬಲ ನೀಡುತ್ತೇನೆ. ನಿಮ್ಮೊಂದಿಗೆ ನಾನು ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದರು.

ಕೆ.ಆರ್. ನಗರದಲ್ಲಿ ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು,ಈ ಬಗ್ಗೆ ನೀವು ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರಕಾರಕ್ಕೆ ನೀಡಿರುವ ಅರ್ಜಿ, ಇನ್ನಿತರ ಬೇಡಿಕೆಗಳ ಮಾಹಿತಿ ಜತೆ ನನ್ನ ಬಳಿಗೆ ಬನ್ನಿ. ನಾನು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

OBC quota HD Kumaraswamy promises support for inclusion of Namadhari Vokkaligas in 2A category

ಅಲ್ಲದೆ, ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ನಾಮಧಾರಿ ಸಮುದಾಯವು ರಾಜಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ನಮ್ಮನ್ನು ಗುರುತಿಸಬೇಕು ಎಂದು ಸಮುದಾಯದ ಜನರು ಕೇಳುತ್ತಲೇ ಇದ್ದಾರೆ. ಮೊದಲು ನಿಮಗೆ ಈ ನೋವು ಬಿಡಿ. ಅಂತಹ ಆತಂಕ ಬಿಡಿ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಪ್ರಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಸಚಿವ ಹೆಚ್‌ ಡಿ ಕುಮಾರಸ್ವಾಮಿ ಭರವಸೆ ನೀಡಿದರು.

ಚಿಕ್ಕಮಗಳೂರು ಭಾಗದಲ್ಲಿ ಸರ್ಪ ಒಕ್ಕಲಿಗರು ಇದ್ದಾರೆ. ಸಣ್ಣ ಪ್ರಮಾಣದ ಸಮುದಾಯ. ಆ ಸಮುದಾಯಕ್ಕೆ ಸೇರಿದ ಎಸ್.ಆರ್. ಲಕ್ಷ್ಮಯ್ಯ ಎಂಬ ನಾಯಕರಿದ್ದರು. ಆ ಕ್ಷೇತ್ರದಲ್ಲಿ ಅವರ ಸಮುದಾಯದ ಸಾವಿರ ಮತಗಳು ಇರಲಿಲ್ಲ. ಅವರನ್ನು ದೇವೇಗೌಡರು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ನಂತರ ಅವರ ಪುತ್ರ ಧರ್ಮೆಗೌಡರು ಎರಡು ಬಾರಿ ಪರಿಷತ್ ಸದಸ್ಯರಾಗಿ ಒಮ್ಮೆ ಉಪ ಸಭಾಪತಿ ಆದರು. ಅವರ ಇನ್ನೊಬ್ಬ ಪುತ್ರ ಎಸ್.ಎಲ್. ಭೋಜೇಗೌಡರು ನಮ್ಮ ಪಕ್ಷದ ಎಂಎಲ್ಸಿ ಆಗಿದ್ದಾರೆ.

ಇನ್ನೊಂದು ಅತಿ ಸಣ್ಣ ಸಮುದಾಯ ಉಪ್ಪಾರ ಸಮುದಾಯಕ್ಕೂ ನಮ್ಮ ಪಕ್ಷ ಅವಕಾಶ ನೀಡಿದೆ. ಹೆಚ್.ಸಿ. ನೀರಾವರಿ ಅವರನ್ನು ಗುರುತಿಸಿ ನಾವು ರಾಜಕೀಯಕ್ಕೆ ತಂದೆವು. ಈ ರೀತಿ ಅನೇಕ ಸಮುದಾಯಗಳಿಗೆ ಜೆಡಿಎಸ್ ಅವಕಾಶದ ಬಾಗಿಲು ತೆರೆದಿದೆ. ಕೆಲವರು ನಾವು ಹಿಂದುಳಿದ ನಾಯಕರು ಅಂತ ಬೋರ್ಡ್ ಹಾಕಿಕೊಂಡು ಓಡಾಡ್ತಾರೆ. ಆದರೆ, ಆ ಸಮುದಾಯವನ್ನು ಬೆಳೆಸಿದವರು ದೇವೇಗೌಡರು ಇಂದು ಕುಮಾರಸ್ವಾಮಿ ಅವರು ಹೇಳಿದರು.

ನಾಮಧಾರಿ ಸಮುದಾಯಕ್ಕೆ ಆತಂಕ ಬೇಡ. ಈ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. ನಿಮ್ಮ ಸಮುದಾಯಕ್ಕೆ ಶಕ್ತಿ ತುಂಬಲಾಗುವುದು. ನಿಮ್ಮಲ್ಲಿ ಹೆಚ್ಚೆಚ್ಚು ಯುವಕರು ರಾಜಕಾರಣಕ್ಕೆ ಬರಬೇಕು. ನನ್ನ ರಾಜಕೀಯ ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನಾನು ಭರವಸೆ ನೀಡಲ್ಲ, ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ದೇವಸ್ಥಾನ ಕಟ್ಟಲು ಸಿಎ ನಿವೇಶನ ಕೇಳಿದ್ದೀರಿ. ನಾನು ನಿವೇಶನ ಕೊಡಲು ಬರಲ್ಲ. ಅದನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುತ್ತೇನೆ. ಸಮುದಾಯ ಭವನದ ಅಭಿವೃದ್ಧಿಗೆ ನಾನು ಅನುದಾನ ಕೊಡುತ್ತೇನೆ. ಅದಕ್ಕೆ ಅಗತ್ಯವಾದ ಅನುದಾನ ನೀಡಲಾಗುವುದು ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+