ಬೆಳಗಾವಿ ಪ್ರಯಾಣಿಕರಿಗೆ NWKRTC ಗುಡ್‌ನ್ಯೂಸ್: ಹೊಸ ಪಲ್ಲಕ್ಕಿ, ರಾಜರಥ ಬಸ್‌ಗಳ ಸೇವೆ ಶುರು!
ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ಭಾಗಗಳಿಂದ ಬೆಂಗಳೂರು, ಹೈದರಾಬಾದ್, ಠಾಣೆ ನಗರಗಳಿಗೆ ಐಶಾರಾಮಿ ಮತ್ತು ಆರಾಮದಾಯಕ ಪ್ರಯಾಣದ ಅನುಭವ ಕೊಡುವ ಐಶಾರಾಮಿ ಬಸ್‌ಗಳನ್ನು ಬಿಡಲಾಗಿದೆ. ಮೂರು ನೂತನ 'ಪಲ್ಲಕ್ಕಿ' ನಾನ್ ಎಸಿ ಮತ್ತು ಮೂರು 'ರಾಜರಥ' ಎಸಿ ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಎರಡು ಕಡೆಗಿನ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೇವೆ ಸಿಕ್ಕಂತಾಗಿದೆ.
ಬೆಳಗಾವಿ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಹೊಸ ಪಲ್ಲಕ್ಕಿ ಮತ್ತು ರಾಜರಥ ಬಸ್‌ಗಳು ಸೇರ್ಪಡೆಯಾಗಿದ್ದು, ಅವುಗಳನ್ನು ವಿವಿಧ ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ. ಇದರಲ್ಲಿ ರಾಜರಥ ಬಸ್ ಹೊರ ರಾಜ್ಯಗಳಿಗೂ ಸೇವೆ ನೀಡುತ್ತಿದೆ.

ರಾಜರಥ ಎಸಿ ಸ್ಲೀಪರ್ ಬಸ್ ಮಾರ್ಗ
* ಬೆಳಗಾವಿ - ಠಾಣಾ (ಮಹಾರಾಷ್ಟ್ರ)
* ಬೆಳಗಾವಿ - ಬೆಂಗಳೂರು
* ಬೆಳಗಾವಿ - ಹೈದ್ರಾಬಾದ್ (ತೆಲಂಗಾಣ)
ಪಲ್ಲಕ್ಕಿ ನೂತನ ನಾನ್ ಎಸಿ ಸ್ಲೀಪರ್ ಬಸ್ ಮಾರ್ಗ
* ಬೆಳಗಾವಿ - ಧರ್ಮಸ್ಥಳ
* ಬೆಳಗಾವಿ - ಬೆಂಗಳೂರು
* ಬೆಳಗಾವಿ - ಮೈಸೂರು
ಬಸ್ ಸಮಯ, ಟಿಕೆಟ್ ದರ, ವೇಳಾಪಟ್ಟಿ
* ಬೆಳಗಾವಿ-ಹೈದರಾಬಾದ್ ಬಸ್ ರಾತ್ರಿ 07.29ಗಂಟೆಗೆ ಬೆಳಗಾವಿಯಿಂದ ಹೊರಟು ಮಾರನೇ ದಿನ ಬೆಳಗ್ಗೆ 7.30ಕ್ಕೆ ಗಮ್ಯಸ್ಥಳ ತಲುಪಲಿದೆ. ಮರಳಿ ಅಲ್ಲಿಂದ ಇದೇ ದಿಕ್ಕಿನಲ್ಲಿ ಕ್ರಮವಾಗಿ ರಾತ್ರಿ 7.29ಕ್ಕೆ ಬಿಟ್ಟು ಬೆಳಗ್ಗೆ 8.30ಕ್ಕೆ ಬೆಳಗಾವಿಗೆ ಬರುತ್ತದೆ. ಒಬ್ಬ ಪ್ರಯಾಣಿಕರಿಗೆ ತಲಾ 1683 ರೂಪಾಯಿ ನಿಗದಿ ಮಾಡಲಾಗಿದೆ.
* ಬೆಳಗಾವಿ-ಠಾಣಾ ಬಸ್ ರಾತ್ರಿ 8.15 ಗಂಟೆಗೆ ಬೆಳಗಾವಿಯಿಂದ ಹೊರಟು ಮರು ದಿನ ಬೆಳಗ್ಗೆ 6.45ಕ್ಕೆ ತಲುಪುತ್ತದೆ. ಮರಳಿ ಇದೇ ದಿಕ್ಕಿನಲ್ಲಿ ಕ್ರಮವಾಗಿ ರಾತ್ರಿ 8ಗಂಟೆಗೆ ಹೊರಟು, ಬೆಳಗ್ಗೆ 6.45ಕ್ಕೆ ರಾಜ್ಯಕ್ಕೆ ಬರುತ್ತದೆ. ಒಬ್ಬರಿಗೆ 1250 ರೂ. ಟಿಕೆಟ್ ದರ ಇದೆ.
* ಬೆಳಗಾವಿ-ಬೆಂಗಳೂರು ಬಸ್ ರಾತ್ರಿ 8.45ಕ್ಕೆ ಬೆಳಗಾವಿಯಿಂದ ಸಂಚಾರ ಆರಂಭಿಸಿ, ಮರುದಿನ ಬೆಳಗ್ಗೆ 6.45ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ಟರ್ಮಿನಲ್‌ಗೆ ಬರುತ್ತದೆ. ಮರಳಿ ಅದೇ ದಿಕ್ಕಿನಲ್ಲಿ ಇಲ್ಲಿಂದ 11.15ಕ್ಕೆ ಹೊರಟು, ಮಾರನೇ ದಿನ ಬೆಳಗ್ಗೆ 9.15ಕ್ಕೆ ಬೆಳಗಾವಿ ಮುಟ್ಟುತ್ತದೆ. ಇದರ ಟಿಕೆಟ್ ದರ ಒಬ್ಬರಿಗೆ 1300 ನಿಗದಿಪಡಿಸಲಾಗಿದೆ.
* ಬೆಳಗಾವಿ-ಧರ್ಮಸ್ಥಳ ಬಸ್ ರಾತ್ರಿ 8.30ಕ್ಕೆ ಬೆಳಗಾವಿಯಿಂದ ಪ್ರಯಾಣ ಆರಂಭಿಸಿ ಬೆಳಗ್ಗೆ 7ಕ್ಕೆ ಧರ್ಮಸ್ಥಳ ತಲುಪುತ್ತದೆ. ಇದರ ಟಿಕೆಟ್ ದರ ಒಬ್ಬರಿಗೆ 1150 ರೂ.
* ಬೆಳಗಾವಿ-ಮೈಸೂರು ಬಸ್ ರಾತ್ರಿ 07.32ಕ್ಕೆ ಹೊರಟು ಬೆಳಗ್ಗೆ 7.15ಕ್ಕೆ ಸಾಂಸ್ಕೃತಿಕ ರಾಜಧಾನಿ ಮೈಸೂರು ತಲುಪುತ್ತದೆ. ಮರಳಿ ಅದೇ ದಿಕಿನಲ್ಲಿ ರಾತ್ರಿ 9.29ಕ್ಕೆ ಹೊರಟು ಬೆಳಗ್ಗೆ 8.30ಕ್ಕೆ ಬೆಳಗಾವಿಗೆ ಬರಲಿದೆ. ಒಬ್ಬರಿಗೆ 1100 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
* ಬೆಳಗಾವಿ-ಬೆಂಗಳೂರು ಬಸ್ ರಾತ್ರಿ 8ಕ್ಕೆ ಹೊರಟು ಬೆಳಗ್ಗೆ 6ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಮರಳಿ ಇಲ್ಲಿಂದ ರಾತ್ರಿ 9.30ಕ್ಕೆ ಹೊರಟು ಬೆಳಗ್ಗೆ 7 ಗಂಟೆಗೆ ಇಲ್ಲಿಂದ ಹೊರಡಲಿದೆ. ಟಿಕೆಟ್ ದರ ಒಬ್ಬರಿಗೆ 1150 ರೂ. ನಿಗದಿ ಮಾಡಲಾಗಿದೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಗಡ ಟಿಕೆಟ್ ಬುಕ್ ಮಾಡಲು ಅಧಿಕೃತ ವೆಬ್‌ಸೈಟ್ www.ksrtc.in ಗೆ ಸಂಪರ್ಕಿಸುವಂತೆ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
