ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳ್ಳಯ್ಯನಗಿರಿ ದತ್ತಪೀಠದ ರಸ್ತೆ ಮಾರ್ಗ ಸಂಪೂರ್ಣ ಬಂದ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ದತ್ತ ಪೀಠದ ರಸ್ತೆ ಮಾರ್ಗ ಬಂದ್ | Oneindia Kannada

ಚಿಕ್ಕಮಗಳೂರು, ಆಗಸ್ಟ್.20: ಗಿರಿ ಭಾಗದಲ್ಲಿ ಮುಂದುವರೆದ ಮಳೆ-ಗಾಳಿಗೆ ರಸ್ತೆ ಮೇಲೆ ಬೃಹತ್ ಮರ ಬಿದ್ದಿದೆ. ತಾಲೂಕಿನ ಮುಳ್ಯಯ್ಯನಗಿರಿ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು, ಮರ ಬಿದ್ದಿರುವುದರಿಂದ ಮುಳ್ಳಯ್ಯನಗಿರಿ ಸಂಚಾರ ಬಂದ್ ಮಾಡಲಾಗಿದೆ.

ಮುಳ್ಳಯ್ಯನಗಿರಿ ದತ್ತಪೀಠದ ರಸ್ತೆ ಮಾರ್ಗ ಸಂಪೂರ್ಣ ಬಂದ್ ಮಾಡಲಾಗಿದ್ದು, ರಸ್ತೆ ಸಂಪರ್ಕವಿಲ್ಲದೆ ಗಿರಿಗೆ ತೆರಳುವ ಪ್ರವಾಸಿಗರು, ಸ್ಥಳೀಯರು ಪರದಾಡುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹುಲುಗಾರುಬೈಲುವಿನಲ್ಲಿ ಭತ್ತವೆಲ್ಲಾ ಮಣ್ಣು ಪಾಲು, ಆತಂಕದಲ್ಲಿ ರೈತರುಹುಲುಗಾರುಬೈಲುವಿನಲ್ಲಿ ಭತ್ತವೆಲ್ಲಾ ಮಣ್ಣು ಪಾಲು, ಆತಂಕದಲ್ಲಿ ರೈತರು

ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಶೀಲನೆ ನಡೆಸುತ್ತಿದ್ದು, ಮರ ತೆರವು‌ ಕಾರ್ಯಚರಣೆ ಆರಂಭವಾಗಿದೆ.

Now Mullayanagiri traffic has been stopped

ನಿಲ್ಲದ ಭೂ ಕುಸಿತ
ಚಿಕ್ಕಮಗಳೂರಿನಲ್ಲಿ ಮಳೆ ನಿಂತರೂ ಭೂ ಕುಸಿತ ನಿಂತಿಲ್ಲ. ಭೂ ಕುಸಿತದ ಪರಿಣಾಮ ನೆಲಕ್ಕೆ‌ ಟ್ರಾನ್ಸ್ ಫರ್ಮರ್ ಹಾಗೂ 4 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಕೊಪ್ಪ ತಾಲೂಕಿನ ‌ಭಂಡಿಗಡಿ ಸಮೀಪದ ಈಚಲಬೈಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ನಾಲ್ಕು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಸ್ಥಳಕ್ಕೆ ಕೆ.ಇ.ಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

English summary
For heavy Rain and winds a huge tree fell in to the road. Incident occurred at the turn of Mullayyanagiri in Chikkamagaluru taluk. Now Mullayanagiri traffic has been stopped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X